Fighter Teaser: ರಿಲೀಸ್ ಆಗೇಬಿಡ್ತು ‘ಫೈಟರ್‌’ ಟೀಸರ್‌ – ಹೃತಿಕ್‌ ಗಿಂತಲೂ ದೀಪಿಕಾ ಪಡುಕೋಣೆ ಮೇಲೆ ಕಣ್ಣಿಟ್ಟ ಫ್ಯಾನ್ಸ್ !!

bollywood movies teaser of the movie 'Fighter' has been released

Share the Article

Fighter Teaser: ದೀಪಿಕಾ ಪಡುಕೋಣೆ (Deepika Padukone) ಮತ್ತು ಹೃತಿಕ್ ರೋಷನ್ (Hrithik Roshan) ಒಟ್ಟಿಗೆ ತೆರೆ ಹಂಚಿಕೊಂಡಿರುವ ʻಫೈಟರ್‌ʼ ಸಿನಿಮಾದ (Fighter Teaser)ಟೀಸರ್‌ ಬಿಡುಗಡೆಯಾಗಿದೆ.

ಹೃತಿಕ್ ರೋಷನ್ ಜತೆ ಸಿದ್ಧಾರ್ಥ್‌ ಆನಂದ್‌ ಅವರು ಈ ಹಿಂದೆ ‘ವಾರ್’ ಮತ್ತು ‘ಬ್ಯಾಂಗ್ ಬ್ಯಾಂಗ್’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಆ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ದೊಡ್ದ ಮಟ್ಟದ ಹಿಟ್ ಕಂಡಿದೆ. ಈಗ ಮತ್ತೆ ಅವರು ‘ಫೈಟರ್’(Fighter Teaser) ಚಿತ್ರದಲ್ಲಿ ಹೃತಿಕ್ ರೋಷನ್ ಜತೆ ಕೈ ಜೋಡಿಸಿರುವ ಹಿನ್ನೆಲೆ ಸಹಜವಾಗಿ ಭಾರೀ ಕುತೂಹಲ ಮೂಡಿಸಿದೆ.ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಹೃತಿಕ್‌ ಮತ್ತು ದೀಪಿಕಾ ಪಡುಕೋಣೆ ಫೈಟರ್ ಟೀಸರ್‌ನಲ್ಲಿ, ಜೆಟ್‌ ವಿಮಾನವೇರಿ ಸಾಹಸ ಪ್ರದರ್ಶಿಸಿದ್ದಾರೆ.

Fighter Teaser

ಕೆಲವು ಬಲ್ಲ ಮೂಲಗಳ ವರದಿಯ ಅನುಸಾರ, ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಸಿನಿಮಾ 3D ನಲ್ಲಿ ಬಿಡುಗಡೆಯಾಗಲಿದ್ದು, 10 ಸೆಕೆಂಡ್‌ನ ಟೀಸರ್ ಮೂಲಕ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಪಠಾಣ್‌ ಮೂಲಕ ಹಿಟ್‌ ಸಿನಿಮಾ ನೀಡಿರುವ ಸಿದ್ಧಾರ್ಥ್‌ ಆನಂದ್‌, ಫೈಟರ್‌ ಮೂಲಕ ಮತ್ತೊಂದು ಹಿಟ್‌ ಸಿನಿಮಾ ನೀಡಲಿದ್ದಾರೆ. ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಕೂಡ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ ಪಠಾಣ್‌ ಸಿನಿಮಾ ಹಿಟ್ ಕಂಡಿದೆ. ಇದೀಗ ,ಈ ಸಿನಿಮಾ ಮೂಲಕ ಈ ಜೋಡಿ ಮತ್ತೆ ಕಮ್‌ ಬ್ಯಾಕ್‌ ಆಗಿದ್ದಾರೆ. ಈ ಸಿನಿಮಾಗೆ ಹೃತಿಕ್‌ ರೋಷನ್‌ 85 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ದೀಪಿಕಾ ಚಿತ್ರಕ್ಕೆ 20 ಕೋಟಿ ರೂ. ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಿದ್ಧಾರ್ಥ್ ಆನಂದ್‌ ಅವರು 40 ಕೋಟಿ ರೂ. ಪಡೆದುಕೊಳ್ಳುತ್ತಿದ್ದಾರೆ.

Leave A Reply