KMFGhee: ‘ನಂದಿನಿ ತುಪ್ಪ’ಕ್ಕೆ ಮತ್ತೆ ಬಿಗ್ ಶಾಕ್- ಎಷ್ಟೇ ಪ್ರಯತ್ನಿಸಿದ್ರು ತಿರುಪತಿಗೆ ನೋ ಎಂಟ್ರಿ ಎಂದ TTD
KMF Ghee: ದೇಶದಲ್ಲಿ ನಂದಿನಿ ತುಪ್ಪಕ್ಕಿರುವ ಮಾರುಕಟ್ಟೆ ಬೆಲೆಗಿಂತ ಅರ್ಧಕ್ಕರ್ಧ ಬೆಲೆಗೆ ತಿರುಪತಿ ತಿಮ್ಮಪ್ಪನ (Tirumala)ಲಡ್ಡು ತಯಾರಿಕೆಗೆ ತುಪ್ಪವನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಕೆಎಂಎಫ್‌ನಿಂದ ತುಪ್ಪ(KMF Ghee) ಸರಬರಾಜು ಮಾಡಿರಲಿಲ್ಲ. ಆದರೆ, ಕಳೆದ ಎರಡು ಬಾರಿಯಿಂದ ಟಿಟಿಡಿಯ ತುಪ್ಪದ ಟೆಂಡರ್‌ನಲ್ಲಿ ಕೆಎಂಎಫ್ ಭಾಗವಹಿಸಿದರೂ ನಂದಿನಿ ತುಪ್ಪದ ದರ ಹೆಚ್ಚಾಗಿದ್ದು, ಖರೀದಿ ಮಾಡಲು ಸಾಧ್ಯವಿಲ್ಲ ಎಂದು ತಿರುಪತಿ ತಿಮ್ಮಪ್ಪ ದೇವಸ್ಥಾನ ಆಡಳಿತ ಮಂಡಳಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ಕಳೆದ ಬಾರಿಗಿಂತ ಕಡಿಮೆ ಬಿಡ್ ಮಾಡಿದರು ಕೂಡ KMFಗೆ ಟೆಂಡರ್ ಸಿಕ್ಕಿಲ್ಲ. ಟಿಟಿಡಿ ಆಡಳಿತ ಮಂಡಳಿ ಎರಡನೇ ಟೆಂಡರ್ ಗೂ ಒಪ್ಪದ ಹಿನ್ನೆಲೆ ಬಿಡ್ ಮತ್ತೊಂದು ಕಂಪನಿಯ ಪಾಲಾಗಿದೆ. ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ಸಿದ್ಧವಾಗುವ ಲಡ್ಡುವಿನಲ್ಲಿ ಕೆಎಂಎಫ್ ತುಪ್ಪದ ಪರಿಮಳ ಸಿಗದು. ಏಕೆಂದರೆ, ಈ ಬಾರಿಯೂ ಕೆಎಂಎಫ್ಗೆ ಬಿಡ್ ತಪ್ಪಿದ್ದು, ಅದೆಷ್ಟೇ ಪ್ರಯತ್ನ ಪಟ್ಟರೂ ಕೂಡ ಕೆಎಂಎಫ್ ತುಪ್ಪ ತಿರುಪತಿಯನ್ನು ತಲುಪಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಬಾರಿ ಟೆಂಡರ್ ಪಡೆಯಲು ಕೆಎಂಎಫ್ ಅಧಿಕಾರಿಗಳು ಸರ್ಕಸ್ ಮಾಡಿದ್ದರು ಎನ್ನಲಾಗಿದೆ. ಕೆಎಂಎಫ್ ಟೆಂಡರ್ ನ ಎಲ್ಲಾ ಪ್ರಕ್ರಿಯೆ ಮುಗಿದಿತ್ತು. ಆದರೆ, ದರ ವಿಚಾರವಾಗಿ ಅತ್ಯಂತ ಕನಿಷ್ಠ ಮಾಡಿದ ಕಂಪನಿಗೆ ತುಪ್ಪದ ಪೂರೈಕೆಗೆ ಅನುವು ಮಾಡಲಾಗಿತ್ತು. ಈ ಬಾರಿ ಒಂದು ಕೆಜಿ ತುಪ್ಪಕ್ಕೆ 550 ರೂಪಾಯಿ ಬೆಲೆ ನಿಗದಿ ಮಾಡಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದೆಯಂತೆ. ಆದರೆ, ಮತ್ತೊಂದು ಕಂಪನಿಗೆ ಕೆಜಿ ತುಪ್ಪಕ್ಕೆ 370 ರೂಪಾಯಿ ಬಿಡ್ ಮಾಡಿತ್ತು ಎನ್ನಲಾಗಿದೆ. 370 ರೂಪಾಯಿಗೆ ಬಿಟ್ ಮಾಡಿರುವ ಕಂಪನಿಗೆ ತುಪ್ಪ ಪೂರೈಕೆಯ ಅನುಮತಿಯನ್ನು ನೀಡಲಾಗಿದ್ದು, ಹೀಗಾಗಿ, ಮುಂದಿನ ದಿನಗಳಲ್ಲಿ ತಿಮ್ಮಪ್ಪನ ಲಡ್ಡುವಿನಲ್ಲಿ ಕೆಎಂಎಫ್ ತುಪ್ಪ ಬಳಕೆಯಾಗಲ್ಲ ಎನ್ನಲಾಗಿದೆ.