Home latest Robbery Case: ಮಾಡ್ರನ್ ಕಳ್ಳರ ಕಹಾನಿ: ಕಳ್ಳತನ ಮಾಡಿ ಉಂಡು ಹೋದ ಕೊಂಡು ಹೋದ ಕಳ್ಳರು!!

Robbery Case: ಮಾಡ್ರನ್ ಕಳ್ಳರ ಕಹಾನಿ: ಕಳ್ಳತನ ಮಾಡಿ ಉಂಡು ಹೋದ ಕೊಂಡು ಹೋದ ಕಳ್ಳರು!!

Robbery Case

Hindu neighbor gifts plot of land

Hindu neighbour gifts land to Muslim journalist

Robbery Case: ಕಳ್ಳರು (Robber)ತಮ್ಮ ಬತ್ತಳಿಕೆಯಿಂದ ನಾನಾ ತಂತ್ರಗಳನ್ನು ಬಳಸಿ ಕಳ್ಳತನ ಮಾಡುವುದು(Robbery Case) ಮಾಮೂಲಿ. ಆದರೆ, ಇಲ್ಲೊಂದು ಕಡೆ ಕಳ್ಳರು ಕಳ್ಳತನಕ್ಕೆ ಬಂದು ಚಿನ್ನಾಭರಣವನ್ನು (gold Theft)ದೋಚಿದ್ದಲ್ಲದೇ ಊಟ ಮಾಡಿ ಹೋದ ಅಚ್ಚರಿಯ ಘಟನೆ ವರದಿಯಾಗಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚೌಡಯ್ಯದಾನಪುರು ಗ್ರಾಮದಲ್ಲಿ ಮನೆಯ ಸದಸ್ಯರು ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದನ್ನು ಖಾತ್ರಿ ಮಾಡಿಕೊಂಡ ಕಳ್ಳರು ಚಿನ್ನಾಭರಣವನ್ನು ದೋಚಿದ್ದಲ್ಲದೇ ಅದೇ ಮನೆಯಲ್ಲಿ ಊಟವನ್ನೂ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನು ಓದಿ: Mahadevaiah dead body found: ಬಿಜೆಪಿ ನಾಯಕ ಸಿ ಪಿ ಯೋಗೀಶ್ವರ್ ಭಾವನ ಕೊಲೆ ?! ಕಾಡಿನ ಮಧ್ಯ ಮೂಟೆಯಲ್ಲಿ ಮೃತ ದೇಹ ಪತ್ತೆ !!

ಚೌಡಯ್ಯದಾನಪುರು ಗ್ರಾಮದ ಪರಸಪ್ಪ ಎರೆಸೀಮೆ ಅವರ ಮನೆಯಲ್ಲಿ 10 ಗ್ರಾಂ ಬೆಳ್ಳಿಯ ಆಭರಣ, 10 ಗ್ರಾಂ ಚಿನ್ನದ ಆಭರಣ ಜೊತೆಗೆ 50 ಸಾವಿರ ರೂ. ಹಣ ಲೂಟಿ ಮಾಡಿದ ಕಳ್ಳರು ಇದರ ಜೊತೆಗೆ ಮನೆಯಲ್ಲಿ ತಯಾರಿಸಿಟ್ಟಿದ್ದ ಊಟವನ್ನು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನ ಮಾಡಲು ಬಂದ ಕಳ್ಳರ ಚಲನವಲನಗಳು ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ರಾಣೇಬೆನ್ನೂರು ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Rain Alert Today: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಎಫೆಕ್ಟ್, ಈ ಪ್ರದೇಶಗಳಲ್ಲಿ ಭಾರೀ ಮಳೆ ಸಂಭವ!! ಈ ಸೇವೆಗಳೆಲ್ಲಾ ರದ್ಧು