Mangalore: ಹವಾಮಾನ ವೈಪರಿತ್ಯದ ಪರಿಣಾಮ ವೈರಲ್ ಜ್ವರ ಪ್ರಮಾಣ ಹೆಚ್ಚಳ! ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ !

Mangalore news health news increase in viral fever cases due to change in weather latest news

Viral Fever: ಮಂಗಳೂರಿನಲ್ಲಿ (Manglore)ಬದಲಾಗಿರುವ ವಾತಾವರಣ, ಹವಾಮಾನ ವೈಪರೀತ್ಯದ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ವೈರಲ್ ಜ್ವರದ (Viral Fever)ಪ್ರಮಾಣ ಹೆಚ್ಚಳವಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತೀರ್ಮಾನ ಕೈಗೊಂಡಿದೆ.

ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಹವಾಮಾನ ವೈಪರೀತ್ಯದ ಪರಿಣಾಮ, ಮುಂಜಾನೆ ಚುಮು ಚುಮು ಚಳಿ, ಆ ಬಳಿಕ ಸೆಕೆ, ಉರಿ ಬಿಸಿಲು ಕೆಲವೆಡೆ ಸಂಜೆ- ರಾತ್ರಿ ಸಾಧಾರಣ ಮಳೆಯ ವಾತಾವರಣ ಕಂಡುಬರುತ್ತಿದೆ. ಈ ರೀತಿಯ ವಾತಾವರಣದಿಂದ ವೈರಲ್ ಜ್ವರ ಪ್ರಕರಣಗಳ ಹೆಚ್ಚಳವಾಗುವ ಸಂಭವವಿದೆ. ಇದರ ಜೊತೆಗೆ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ಪರಿಣಾಮ ರೋಗಿಗಳ ಸಂಖ್ಯೆಯಲ್ಲಿ ದೀಡಿರ್ ಏರಿಕೆಯಾಗಿದೆ. ಸಾಮಾನ್ಯ ಜನರಲ್ಲಿ ಶೀತ, ಜ್ವರ, ತಲೆನೋವು, ಕೀಲು ನೋವಿನಂತಹ ರೋಗಲಕ್ಷಣಗಳು ಕಂಡುಬರುತ್ತಿದ್ದು, ವೈರಲ್ ಜ್ವರ ಎಲ್ಲೆಡೆ ಪಸರಿಸುವ ಮೊದಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿರಬೇಕೆಂದು ಆರೋಗ್ಯ ಇಲಾಖೆ ಸೂಚಿಸಿದೆ.

ವೈರಲ್ ಜ್ವರದ ಲಕ್ಷಣಗಳನ್ನು ಗಮನಿಸಿದರೆ, ಕೆಮ್ಮು, ಶೀತ, ತಲೆನೋವು ಕಂಡುಬರುತ್ತದೆ. ಈ ರೀತಿಯ ಜ್ವರದಿಂದ ಪಾರಾಗಲು ಸೋಪಿನಿಂದ ಕೈಗಳನ್ನು ನಿರಂತರವಾಗಿ ತೊಳೆಯುವ ಅಭ್ಯಾಸ ಮಾಡಿಕೊಳ್ಳಿ. ಇದರ ಜೊತೆಗೆ ಜನಜಂಗುಳಿಯ ನಡುವೆ ಇರುವಾಗ ಮಾಸ್ಕ್ ಧರಿಸಿ. ದೇಹ ಶುಷ್ಕವಾಗಲು ಆಸ್ಪದ ನೀಡದಂತೆ ಸಾಕಷ್ಟು ನೀರು ಕುಡಿಯುವುದು ಅವಶ್ಯಕವಾಗಿದೆ.

ಇದನ್ನೂ ಓದಿ: ಹೊಸ ದಾಖಲೆ ಬರೆದ ಉಗಾಂಡ – ಕೊನೆಗೂ ಟಿ20 ವರ್ಡ್ ಕಪ್ ಗೆ ಕ್ವಾಲಿಫೈಡ್

Leave A Reply

Your email address will not be published.