Physical Abuse: ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಕಾಮುಕನ ಕಾಟ- ನಂತರ ಏನಾಯ್ತು?!

Karnataka crime news accused of Physical abuse single women arrested in mandya

Share the Article

Physical Abuse: ಮಂಡ್ಯದಲ್ಲಿ ಬೈಕ್‌ನಲ್ಲಿ ಬಂದು ಒಂಟಿ ಮಹಿಳೆಯರಿಗೆ ರಸ್ತೆಯಲ್ಲಿ ಲೈಂಗಿಕ ಕಿರುಕುಳ (Physical Abuse) ನೀಡಿ ವಿಕೃತಿ ಮೆರೆಯುತ್ತಿದ್ದ ಆರೋಪಿಯನ್ನು ಬಂಧಿಸಿರುವ (Arrest)ಘಟನೆ ವರದಿಯಾಗಿದೆ.

ಬಂಧಿತ ಆರೋಪಿಯನ್ನು ಕೆರಗೋಡು ಗ್ರಾಮದ ಚಂದ್ರಶೇಖರ್ ಆರಾಧ್ಯ ಎಂದು ಗುರುತಿಸಲಾಗಿದೆ. ಈತ ಮಂಡ್ಯ ನಗರದ ಹಲವೆಡೆ ಬೈಕ್‌ನಲ್ಲಿ ಅಡ್ಡಾಡುತ್ತಾ ಒಂಟಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರ ಜೊತೆಗೆ ಆತನ ಮುಖ ಕಾಣದಂತೆ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದು ಒಂಟಿ ಮಹಿಳೆಯರನ್ನು ಚಿವುಟುವುದು, ಸವರುವುದು ಮಾಡುತ್ತಿದ್ದನಂತೆ. ಈ ರೀತಿ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಕೃತ್ಯ ನಡೆದ ಸ್ಥಳದ ಸಿಸಿಟಿವಿ ಫೂಟೇಜ್‌ಗಳನ್ನು ಆಧರಿಸಿ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು.

ಇದೆ ರೀತಿ, ಆರೋಪಿ ನಿನ್ನೆ ಸಂಜೆ ಕೂಡ ಒಂಟಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲೂ ಮುಂದಾಗಿದ್ದು, ಈ ವೇಳೆ ಆರೋಪಿಯ ಬಗ್ಗೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸಾರ್ವಜನಿಕರಿಂದ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಮಂಡ್ಯದಲ್ಲಿ ಬಂಧಿಸಿದ್ದು, ಮಂಡ್ಯ ಪೂರ್ವ ಪೊಲೀಸ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: PMGKAY: ದೇಶಾದ್ಯಂತ ಸ್ತ್ರೀ ಶಕ್ತಿ ಸಂಘಗಳಿಗೆ ಭರ್ಜರಿ ಉಡುಗೊರೆ ಘೋಷಿಸಿದ ಮೋದಿ

Leave A Reply