Actress Shakeela: ಖ್ಯಾತ ನಟಿಗೆ ಮಂಚಕ್ಕೆ ಬಾ ಎಂದ ಸ್ಟಾರ್ ನಟನ ತಂದೆ – ಮುದುಕನ ಮುಖವಾಡವನ್ನೇ ಖಳಚಿ ಬಿಟ್ಲು ನಟಿ !!

Entertainment news Tollywood news actress Shakeela shares about her casting couch experience

Share the Article

Actress Shakeela: ದೂರದ ಬೆಟ್ಟ ನುಣ್ಣಗೆ ಎನ್ನುವ ಹಾಗೆ ದೂರದಿಂದ ನೋಡಿದಾಗ ಎಲ್ಲವೂ ಸುಂದರ. ಆದರೆ ಒಮ್ಮೆ ಸಿನಿಮಾ ರಂಗದ ಒಳಹೊಕ್ಕರೆ ಅಲ್ಲಿನ ಒಳಗಿನ ಗುಟ್ಟು ರಟ್ಟಾಗುತ್ತದೆ. ಬಣ್ಣದ ಲೋಕದಲ್ಲಿ ನೆಲೆ ಕಂಡು ಯಶಸ್ಸು ಪಡೆದ ಅದೆಷ್ಟೋ ನಟ ನಟಿಯರು ಸಿನಿ ಲೋಕದಲ್ಲಿ ತೊಡಗಿಸಿಕೊಂಡಾಗ ಎದುರಾಗುವ, ಅನುಭವಿಸುವ ಕಷ್ಟ ವಿವರಿಸಲಾಗದಂತದ್ದು.

ನಟ-ನಟಿಯರು ಚಿತ್ರರಂಗದಲ್ಲಿ ತಾವು ಎದುರಿಸಿದ ಕಹಿ ಅನುಭವಗಳನ್ನು ಜೊತೆಗೆ ಪಾತ್ರಕ್ಕಾಗಿ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಕರೆದಿರುವ ಬಗ್ಗೆ ಕೂಡ ಆರೋಪ ಆಗಾಗ ಕೇಳಿ ಬರುತ್ತಲೇ ಇದೆ. ನಟಿ ಶಕೀಲಾ (Actress Shakeela)ಇಂದಿಗೂ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದು, ಸಿನಿ ಜಗತ್ತಿನಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಆಗಾಗ ಮಾಹಿತಿ ಹಂಚಿಕೊಳ್ಳುತ್ತಿರುತ್ತಾರೆ.

ತಮ್ಮ ಜೀವನದಲ್ಲಿನ ಕಹಿ ಘಟನೆಗಳ ಬಗ್ಗೆ ನಟಿ ಶಕೀಲಾ ಈ ಹಿಂದೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಇದೀಗ ಟಾಲಿವುಡ್‌ನ ಸ್ಟಾರ್‌ ನಟ ತಂದೆಯಿಂದ ಆದ ಕಹಿ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ನಟಿ ಶಕೀಲಾ ತಮ್ಮ ಕೆರಿಯರ್‌ನ ಉತ್ತುಂಗದಲ್ಲಿದ್ದ ಸಂದರ್ಭ, ತೆಲುಗಿನ ಸ್ಟಾರ್‌ ನಿರ್ದೇಶಕರೊಬ್ಬರು ಶಕೀಲಾರನ್ನು ಮಂಚಕ್ಕೆ ಕರೆದಿದ್ದರಂತೆ. ಈ ಘಟನೆ ಕುರಿತು ನಟಿ ಶಕೀಲಾ ಮಾತಾಡಿದ್ದು, ಆ ಸ್ಟಾರ್‌ ಹೀರೋನ ತಂದೆಯ ಹೆಸರನ್ನು ಕೂಡ ರಿವಿಲ್ ಮಾಡಿದ್ದಾರೆ. ಟಾಲಿವುಡ್‌ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಅಲ್ಲರಿ ನರೇಶ್‌ ಅವರ ತಂದೆ ಇವಿವಿ ಸತ್ಯನಾರಾಯಣ್‌ ಅವರ ಕುರಿತು ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ.

ನಾನು ಇವಿವಿ ಸತ್ಯನಾರಾಯಣ್‌ ಅವರ ನಿರ್ದೇಶನದ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ಒಂದು ದಿನ ತನ್ನ ಕೋಣೆಗೆ ಬರುವಂತೆ ನಿರ್ದೇಶಕರು ಹೇಳಿದ್ದರು. ನಿನಗೆ ನನ್ನ ಮುಂದಿನ ಸಿನಿಮಾದಲ್ಲಿ ಚಾನ್ಸ್ , ನೀನು ಅಡ್ಜೆಸ್ಟ್‌ ಮಾಡಿಕೊಳ್ಳಲೇಬೇಕು ಎಂದು ಕೂಡ ನಿರ್ದೇಶಕರು ಹೇಳಿದ್ದರು ಎಂದು ನಟಿ ಶಕೀಲಾ ಹೇಳಿದ್ದು, ಈ ಸಂದರ್ಭ ನಿಮ್ಮ ಸಿನಿಮಾನೇ ಬೇಡ ಎಂದು ಅಲ್ಲಿಂದ ಹೊರಬಂದಿದ್ದೆ” ಎಂದು ನಟಿ ಶಕೀಲಾ ತಮ್ಮ ಹಳೆಯ ಕಹಿ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.

ಇದನ್ನೂ ಓದಿ: Muslim Girls Ramp Walk: ಕಾಲೇಜಲ್ಲಿ ಬುರ್ಖಾ ಹಾಕಿ ಕ್ಯಾಟ್ ವಾಕ್ ಮಾಡಿದ ಮುಸ್ಲಿಂ ಹುಡುಗಿಯರು – ವಿಚಾರ ತಿಳಿದು ಮುಸ್ಲಿಂ ಸಂಘಟನೆ ಏನು ಮಾಡ್ತು ಗೊತ್ತಾ?!

Leave A Reply

Your email address will not be published.