Escape Drama: ಮಕ್ಕಳನ್ನು ಬಸ್‌ಸ್ಟ್ಯಾಂಡಿನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಮಹಿಳೆ ಪತ್ತೆ! ಆತ್ಮಹತ್ಯೆ ನಾಟಕವಾಡಲು ಕಾರಣವೇನು?

Uttara Kannada news woman leaving her children in bus stand and act like jumping into sea at karwar

Uttara Kannada News (Karwar): ಮಹಿಳೆಯೊಬ್ಬರು ಇತ್ತೀಚೆಗೆ ತನ್ನ ಇಬ್ಬರು ಮಕ್ಕಳನ್ನು ಬಸ್‌ಸ್ಟ್ಯಾಂಡ್‌ನಲ್ಲಿ ಬಿಟ್ಟು ಸಮುದ್ರಕ್ಕೆ ಹಾರಿದ ಘಟನೆಯೊಂದು ನಡೆದಿತ್ತು. ಆದರೆ ಇದೀಗ ಈ ಪ್ರಕರಣ ನಾಟಕವೆಂದು ವರದಿಯಾಗಿದೆ. ಇವರ ಈ ನಾಟಕ ಎಲ್ಲರನ್ನೂ ಆತಂಕಕ್ಕೆ ತಳ್ಳಿದ್ದು ನಿಜ.

ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ (Uttara Kannada News) ಕುಮಟಾದ ವನ್ನಳ್ಳಿ ಹೆಡ್‌ಬಂದರ್‌ ನಲ್ಲಿ. ಸಮುದ್ರಕ್ಕೆ ಹಾರಲು ಹೋಗಿ ನಾಟಕವಾಡಿದ ಮಹಿಳೆ ನಿವೇದಿತಾ ಭಂಡಾರಿ. ಈಗ ಈಕೆ ನಾಟವಾಡಿ ಪೊಲೀಸರ ಅತಿಥಿಯಾಗಿದ್ದಾರೆ.

ಹೊನ್ನಾವರದ ತೋರಗೋಡ ಗ್ರಾಮದ ನಿವಾಸಿ ನಿವೇದಿತಾ. ನ.25 ರಂದು ತನ್ನ ಇಬ್ಬರು ಮಕ್ಕಳನ್ನು ಸ್ಕೂಟಿಯಲ್ಲಿ ಕರೆದುಕೊಂಡು ಬಂದು, ಬಸ್‌ಸ್ಟ್ಯಾಂಡಿನಲ್ಲಿ ಬಿಟ್ಟು, ಮಾಂಗಲ್ಯ, ಮೊಬೈಲ್‌, ಜೊತೆಗೆ ಒಂದು ಪತ್ರ ಕೂಡಾ ಸಮುದ್ರದ ಪಕ್ಕದಲ್ಲಿ ಇಟ್ಟು ಹೋಗಿದ್ದರು. ವೇಲ್‌ ಸಮುದ್ರದ ಕಲ್ಲುಗಳ ಬಳಿ ಪತ್ತೆಯಾಗಿತ್ತು. ಇದನ್ನೆಲ್ಲ ಗಮನಿಸಿದಾಗ ಅವರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಂಬಲಾಗಿತ್ತು. ಕಳೆದ ನಾಲ್ಕು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಪೊಲೀಸರು ಮತ್ತು ಸ್ಥಳೀಯ ಜೀವರಕ್ಷಕರು ಹುಡುಕಾಡಿದ್ದರು. ಹೆಣ ಮೇಲೆ ಬರಬಹುದು ಎಂದು ಹುಡುಕಾಟ ನಡೆದಿತ್ತು. ಆದರೆ ಎಲ್ಲೂ ಕೂಡಾ ಶವ ಸಿಗಲಿಲ್ಲ ಇದ್ದಾಗ ಪೊಲೀಸರಿಗೆ ಸಂಶಯ ಬಂದಿದೆ.

ಇದನ್ನು ಓದಿ: Men Health Tips: ಇದೊಂದು ಹೂವು ಸಾಕು ಕೂದಲು ಬೆಳೆಯಲು – ಒಮ್ಮೆ ಅರೆದು ಹಚ್ಚಿ ಸಾಕು, ಎರಡು ದಿನದಲ್ಲಿ ಬೋಳುತಲೆಯಲ್ಲೂ ಕೂದಲು ಬರುತ್ತೆ !!

ಅವರು ಮನೆಯವರನ್ನು ವಿಚಾರಿಸಿದರು. ಮನೆಯಲ್ಲಿ ಸಣ್ಣ ಪುಟ್ಟ ಸಮಸ್ಯೆ, ವೈಮನಸ್ಸು ಇದ್ದಿದ್ದು ಗೊತ್ತಾಗಿದೆ. ಹೀಗಾಗಿ ಗಂಡ ಮತ್ತು ಮನೆಯವರನ್ನು ಹೆದರಿಸುವ ಉದ್ದೇಶದಿಂದ ಅವರು ಆತ್ಮಹತ್ಯೆ ನಾಟಕವಾಡಿರಬಹುದು ಎಂಬ ಸಂಶಯ ಬಂದಿದೆ.

ಹೆಣ ಸಿಗದೇ ಇರುವುದರಿಂದ ಎಲ್ಲಿ ಹೋಗಿರಬಹುದು ಎಂದು ಪರಿಶೀಲಿಸಿದಾಗ, ಎಲ್ಲಾ ಕಡೆ ಹುಡುಕಲಾಯಿತು. ಆಕೆ ಎಲ್ಲೋ ಒಂದು ಕಡೆ ಇದ್ದಾಳೆ ಎಂಬ ಸಂಶಯ ಪೊಲೀಸರಿಗೆ ಬಂತು. ಅವರು ಲೆಕ್ಕ ಹಾಕಿದಾಗೆ ಆಕೆ ಹೊನ್ನಾವರದ ಬಾಡಿಗೆ ಮನೆಯೊಂದರಲ್ಲಿ ಅವಿತಿದ್ದರು. ಮನೆಯವರಿಗೆ ಪಾಠ ಕಲಿಸುವು ಉದ್ದೇಶದಿಂದ ನಿವೇದಿತಾ ಈ ರೀತಿ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆದರೆ ಪುಟ್ಟಮಕ್ಕಳನ್ನು ರಸ್ತೆಯಲ್ಲಿ ಬಿಟ್ಟು ಹೋದ ಉದ್ದೇಶ ಏನು ಎಂಬುವುದಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಕುಮಟಾ ಸಿಪಿಐ ತಿಮ್ಮಪ್ಪ ನೇತೃತ್ವದ ಪೊಲೀಸ್‌ ತಂಡದಿಂದ ಮಹಿಳೆಯನ್ನು ಬಂಧಿಸಲಾಗಿದೆ. ಕುಮಟಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಗೆ ಆಗುತ್ತಿದ್ದ ಸಮಸ್ಯೆಯ ಬಗ್ಗೆ ಗಮನ ಸೆಳೆಯಲು ಹೀಗೆ ಮಾಡಿರಬಹುದು ಎಂಬ ಸಂಶಯವಿದೆ.

ಇದನ್ನೂ ಓದಿ: Telangana Election: ಮುಸ್ಲಿಂ ಮತಗಳು ನನಗೆ ಬೇಡ…ಗೋಹತ್ಯೆ ಮಾಡುವವರರನ್ನು ಬಿಡುವುದಿಲ್ಲ- ಬಿಜೆಪಿ ಅಭ್ಯರ್ಥಿ ಟಿ.ರಾಜಾ ಸಿಂಗ್‌ ಮತ್ತೆ ವಿವಾದಾತ್ಮಕ ಹೇಳಿಕೆ!!!

Leave A Reply

Your email address will not be published.