Haryana woman viral video: ಗುಂಡು ಹಾರಿಸಲು ಬಂದವರನ್ನು ಬರೀ ಪೊರಕೆ ಹಿಡಿದೇ ಓಡಿಸಿಬಿಟ್ಲು ಕಂಡ್ರಿ ಈ ಘಾಟಿ ಮುದುಕಿ – ವೈರಲ್ ಆಯ್ತು ‘ಪೊರಕೆ ಓಬವ್ವನ’ ಅಚ್ಚರಿ ವಿಡಿಯೋ!!

Viral video news Haryana women chases away gunmen with broomstick video viral

Haryana woman Viral Video: ದಿನಂಪ್ರತಿ ಅದೆಷ್ಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಸೃಷ್ಟಿ ಮಾಡುತ್ತದೆ. ಇದೀಗ, ವೃದ್ದೆಯೊಬ್ಬರ ಸಾಹಸ ಪ್ರವೃತ್ತಿ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹರ್ಯಾಣದ (Haryana State) ಭಿವಾನಿಯ (Bhiwani) ಡಾಲರ್ ಕಾಲೋನಿಯಲ್ಲಿ ವಾಸವಾಗಿರುವ ಸ್ಥಳೀಯ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ಗುಂಡು ಅವರನ್ನು ಮಹಿಳೆಯೊಬ್ಬಳು (Bhiwani woman) ಉದ್ದನೆಯ ಪೊರಕೆಯ (broom) ಮೂಲಕ ಓಡಿಸಿದ ದೃಶ್ಯಾವಳಿಯು ಸೋಷಿಯಲ್ ಮೀಡಿಯಾದಲ್ಲಿ (Social Media) ಭಾರೀ ವೈರಲ್ ಆಗಿದೆ(Viral Video).

ಗುಂಡೇಟು ತಿಂದ ವ್ಯಕ್ತಿಯನ್ನು ಹರಿಕಿಶನ್ ಎಂದು ಗುರುತಿಸಲಾಗಿದೆ. ಹರ್ಯಾಣದ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಶೂಟರ್‌ಗಳು ಒಂಬತ್ತು ಸುತ್ತು ಗುಂಡು ಹಾರಿಸಿದ್ದು, ಹರಿಕಿಶನ್‌ಗೆ ನಾಲ್ಕು ಬುಲೆಟ್‌ ತಗುಲಿವೆ. ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಪಿಜಿಐಎಂಎಸ್ ರೋಹ್ಟಕ್‌ಗೆ ಕಳುಹಿಸಲಾಗಿದೆ.

ಹರಿಕಿಶನ್ ತನ್ನ ಮನೆಗೆ ಹೋಗುವ ಗೇಟಿನ ಪಕ್ಕದಲ್ಲಿ ನಿಂತಿದ್ದ ಸಂದರ್ಭ ಎರಡು ಬೈಕ್‌ಗಳಲ್ಲಿ ಬಂದ ಬೈಕ್‌ನ ಹಿಂಬದಿ ಸವಾರರು ಇಳಿದು ಹರಿಕಿಶನ್ ಕಡೆಗೆ ಪಿಸ್ತೂಲ್‌ ಹಿಡಿದು ಗುಂಡು ಹಾರಿಸಲು ಮುಂದಾಗುತ್ತಾರೆ. ಈ ಸಂದರ್ಭ ಹರಿಕಿಶನ್ ಗೇಟ್ ಹಿಂಬದಿ ಅವಿತು ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದಾಗ್ಯೂ, ಶೂಟರ್ಸ್ ಗೇಟ್‌ ಎದುರಿಗೆ ಬಂದು ಫೈರಿಂಗ್ ಮಾಡುವುದಲ್ಲದೆ, ಗೇಟ್ ತೆಗೆಯುವ ಪ್ರಯತ್ನ ಮಾಡುತ್ತಾರೆ. ಆದರೆ, ಗುಂಡಿನ ಸದ್ದು ಕೇಳಿ ಮಹಿಳೆಯೊಬ್ಬಳು(Haryana woman viral video )ತನ್ನ ಕೈಯಲ್ಲಿ ಉದ್ದನೆಯ ತೆಂಗಿನ ಪೊರಕೆಯನ್ನು ಹಿಡಿದುಕೊಂಡು ಶೂಟರ್ಸ್‌ಗಳತ್ತ ದಾಳಿ ನಡೆಸುತ್ತಾಳೆ.

ಏಕಾಏಕಿ ಮಹಿಳೆ ಪೊರಕೆ ಹಿಡಿದು ಬಂದಾಗ ಶೂಟರ್ಸ್ ಗೊಂದಲಕ್ಕೀಡಾಗಿ ಹಿಂದಕ್ಕೆ ಸರಿದಿದ್ದಾರೆ. ಈ ನಡುವೆ, ಶೂಟರ್ಸ್ ಒಬ್ಬ ಮಹಿಳೆಯ ಮೇಲೆ ಗುಂಡು ಹಾರಿಸಿದ್ದು ಆದರೆ, ಗುಂಡಿನಿಂದ ಮಹಿಳೆ ಪಾರಾಗುತ್ತಾರೆ. ಅಂತಿಮವಾಗಿ ಇಬ್ಬರು ಶೂಟರ್ಸ್ ಸೇರಿ ನಾಲ್ವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಶೂಟರ್ಸ್‌ನ್ನು ಧೈರ್ಯದಿಂದ ಎದುರಿಸಿದ ಮಹಿಳೆಯ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೆಂಗಿನ ಪೊರಕೆಯಿಂದೇ ಪಿಸ್ತೂಲ್‌ ಹಿಡಿದಿದ್ದ ಗೂಂಡಾಗಳನ್ನು (Shooters) ಬೆನ್ನಟ್ಟಿ ಓಡಿಸಿದ್ದಾರೆ. ತನ್ನ ಪೊರಕೆಯಿಂದಲೇ ಹರಿಕಿಶನ್ ಅವರನ್ನು ರಕ್ಷಿಸಿರುವ ಈ ಮಹಿಳೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ: ಮುಸ್ಲಿಂ ಶಾಸಕಿಯಿಂದ ಹಿಂದೂ ದೇವಾಲಯ ಭೇಟಿ – ಹೋದ ಬಳಿಕ ಸ್ಥಳೀಯರು ಹೀಗಾ ಮಾಡೋದು !! 

Leave A Reply

Your email address will not be published.