Home ಬೆಂಗಳೂರು Bengaluru Kambala: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ದಾಖಲಾಯ್ತು ದೂರು – ಇಲ್ಲಿದೆ ಕಾರಣ

Bengaluru Kambala: ಬೆಂಗಳೂರು ಕಂಬಳ ಆಯೋಜಕರ ವಿರುದ್ಧ ದಾಖಲಾಯ್ತು ದೂರು – ಇಲ್ಲಿದೆ ಕಾರಣ

Hindu neighbor gifts plot of land

Hindu neighbour gifts land to Muslim journalist

Bengaluru Kambala: ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಹಾಗೂ 26 ರಂದು ಅದ್ದೂರಿಯಾಗಿ ನಡೆದಿದ್ದು, ಇದೀಗ ಕಂಬಳ ಆಯೋಜಕರಿಗೆ ಸಂಕಷ್ಟ ಒಂದು ಎದುರಾಗಿದೆ. ಹೌದು, ಕಂಬಳ ಪ್ರಯುಕ್ತ, ಸಾರ್ವಜನಿಕ ಸ್ಥಳಗಳಲ್ಲಿ ಕಂಬಳ ಫ್ಲೆಕ್ಸ್, ಬ್ಯಾನರ್ ಗಳನ್ನು ನಿಯಮ ಉಲ್ಲಂಘನೆ ಮಾಡಿ ಅಳವಡಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ವಾರ್ಡ್ ಕಂದಾಯ ನಿರೀಕ್ಷಕ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಂಬಳ ಆಯೋಜಕರ ವಿರುದ್ಧ ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Hyderabad Housing Society: ಮನೆಕೆಲಸದವರು, ಡೆಲಿವರಿ ಪರ್ಸನ್‌ ಲಿಫ್ಟ್‌ ಬಳಸುವಂತಿಲ್ಲ, ಬಳಸಿದ್ರೆ 1000 ರೂ ದಂಡ !! ಹೇಳಿದ್ಯಾರು ಗೊತ್ತಾ?

ಬೆಂಗಳೂರು ಕಂಬಳ (Bengaluru Kambala) ಆಯೋಜಕರು, ಬಿಬಿಎಂಪಿ ಅನುಮತಿ ಇಲ್ಲದೇ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದಕ್ಕೆ ಕಂಬಳ ನಡೆಯುತ್ತಿದ್ದ ವೇಳೆಯೇ ಅರಮನೆ ಮೈದಾನದಲ್ಲಿ ದಾಳಿ ನಡೆಸಿದ್ದ ಪಾಲಿಕೆ ಅಧಿಕಾರಿಗಳು ಅನಧಿಕೃತ ಫ್ಲೆಕ್ಸ್, ಬ್ಯಾನರ್ ಗಳನ್ನು ತೆರವು ಮಾಡಿದ್ದರು. ಇದೀಗ ಕಂಬಳ ಆಯೋಜಕರ ವಿರುದ್ಧವೇ ಕೇಸ್ ದಾಖಲಿಸಲಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.