Kantara Prequel: Rishab Shetty ನೀಡಿದ್ರು, ಸಿನಿಮಾ ಪಾತ್ರವರ್ಗ, ಶೂಟಿಂಗ್‌ ಬಗ್ಗೆ ಬಿಗ್‌ ಅಪ್ಡೇಟ್‌!!

Share the Article

Kantara: ಕಾಂತಾರ ಪ್ರೀಕ್ವೆಲ್‌ ಮುಹೂರ್ತ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ಇಂದು (ಸೋಮವಾರ ನ.27) ರಂದು ಆಗಿದೆ.
ಈ ಸಂದರ್ಭ ಮಾಧ್ಯಮದ ಜೊತೆ ಮಾತನಾಡಿದ ನಟ ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಕಾಂತಾರ ಅಧ್ಯಾಯ ಎರಡನ್ನು ನೀವು ದೊಡ್ಡ ಹಿಟ್‌ ಮಾಡಿದ್ದೀರಿ. ಈ ಸಕ್ಸಸ್‌ ಕನ್ನಡಿಗರಿಗೆ ಅರ್ಪಿಸಲು ಇಷ್ಟಪಡುತ್ತೇನೆ. ಇದರ ಮುಂದುವರೆದ ಮುನ್ನುಡಿ ಏನು ನಡೆಯಿತೆಂದು ಹೇಳಲು ಹೊರಟಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ. ಇಡೀ ತಂಡ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.

ಸದ್ಯಕ್ಕೆ ನಾನೇ ಹೀರೋ, ನಾಯಕಿ ಪಾತ್ರದ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ. ಸಿನಿಮಾದಲ್ಲಿ ನಟಿಸಲು ಹೊಸ ಕಲಾವಿದರ ಹುಡುಕಾಟ ನಡೆಯುತ್ತಿದೆ. ಕರಾವಳಿ ಹಾಗೂ ಇತರೆ ಭಾಗದ ಕಲಾವಿದರು ಕೂಡ ಇರಲಿದ್ದಾರೆ ಎಂದು ಹೇಳಿದರು.

ಇದನ್ನು ಓದಿ: Know Your Death Date: ನಿಮ್ಮ ಸಾವಿನ ದಿನಾಂಕವನ್ನು ಖಡಕ್ ಆಗಿ ಹೇಳುವ ವೆಬ್ ಸೈಟ್ ಒಂದಿದೆ; ಕನ್ಫರ್ಮ್ ಮಾಡ್ಕೊಳ್ಳಿ ನಿಮ್ಮ ಟಿಕೆಟ್ !!

ವಿಜಯ್‌ ಕಿರಗಂದೂರು ನಂಬಿದಂಥ ದೇವರು ಆನೆಗುಡ್ಡೆ ದೇವಸ್ಥಾನ. ನಮಗೆ ಇದು ಲಕ್ಕಿ. ನಮ್ಮ ದೇವರು ಕೂಡಾ ಹೌದು, ಆದರೆ ಅವರು ಬೆಂಗಳೂರಿನಿಂದ ಆಗಾಗ ಇಲ್ಲಿಗೆ ಬರ್ತಾ ಇರ್ತಾರೆ. ಹಾಗಾಗಿ ಕಾಂತಾರ ಸಿನಿಮಾದ ಮುಹೂರ್ತ ಲಾಸ್ಟ್‌ಟೈಮ್‌ ಕೂಡಾ ಇಲ್ಲೇ ಆಗಿದ್ದು. ಈಗ ಅದೇ ದಾರಿಯಲ್ಲಿ ಹೋಗ್ತಾ ಇದ್ದೇವೆ. ಶೂಟಿಂಗ್‌ ಶೀಘ್ರ ಆರಂಭಿಸುತ್ತೆವೆ. ಬಹುಶಃ ಡಿಸೆಂಬರ್‌ನಲ್ಲಿ ಇದು ಶುರು ಆಗುತ್ತದೆ ಎಂದು ಹೇಳಿದರು.

https://twitter.com/shetty_rishab/status/1729034619075600662/photo/1?ref_src=twsrc%5Etfw%7Ctwcamp%5Etweetembed%7Ctwterm%5E1729034619075600662%7Ctwgr%5Ed232671c64c8ed04ad8cff93a565e8ccfabf9936%7Ctwcon%5Es1_&ref_url=https%3A%2F%2Fwww.udayavani.com%2Fcinema%2Fbalcony-sandalwood-news%2Frishabh-shetty-speaks-about-kantara-prequel

ಇದನ್ನು ಓದಿ: Alia Bhatt video Viral: ಬಾಲಿವುಡ್‌ ಸ್ಟಾರ್‌ ಆಲಿಯಾ ಭಟ್ ಅಶ್ಲೀಲ ವಿಡಿಯೋ ವೈರಲ್ !!

Leave A Reply