Gruha Lakshmi Yojana: ‘ಗೃಹಲಕ್ಷ್ಮೀ’ ವಿಚಾರದಲ್ಲಿ ಹೊಸ ಟ್ವಿಸ್ಟ್- ಇನ್ಮುಂದೆ ಗಂಡನ ಖಾತೆಗೆ ಬರುತ್ತೆ ಹಣ !!
Karnataka news Congress guarantee gruha lakshmi yojana money deposited in husbands account
Gruha Lakshmi Yojana: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಗೃಹಲಕ್ಷ್ಮೀ ಯೋಜನೆಯಡಿ ಕುಟುಂಬದ ಮಹಿಳಾ ಯಜಮಾನಿಗೆ ಪ್ರತಿ ತಿಂಗಳು 2,000 ರೂಪಾಯಿ ನೀಡುತ್ತಿದೆ. ಆದರೆ ಯೋಜನೆ (Gruha Lakshmi Yojana) ಜಾರಿಯಾಗಿ ಮೂರು ತಿಂಗಳು ಕಳೆದರೂ ತಾಂತ್ರಿಕ ದೋಷಗಳು ಇನ್ನು ಬಗೆಹರಿದಿಲ್ಲ. ಕಳೆದ ಮೂರು ತಿಂಗಳಲ್ಲಿ ಸುಮಾರು 1.2 ಕೋಟಿ ಮಹಿಳೆಯರು ಪ್ರಯೋಜನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ.
ಯಜಮಾನಿಯರ ಬ್ಯಾಂಕ್ ಖಾತೆಯಲ್ಲಾದ ಹಲವು ತಾಂತ್ರಿಕ ದೋಷಗಳು ಹಾಗೂ ಕೆಲವು ತಾಂತ್ರಿಕ ತೊಂದರೆಗಳಿಂದ ಇನ್ನೂ ಯಜಮಾನಿಯರ ಖಾತೆಗೆ ಹಣ ಬಂದಿಲ್ಲ. ಈ ಹಿನ್ನೆಲೆ ಸರ್ಕಾರ ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದು, ಮಹಿಳೆಯರ ಖಾತೆಗೆ ಮಾತ್ರವಲ್ಲದೇ ಮನೆ ಯಜಮಾನನ ಖಾತೆಗೂ ಇನ್ಮುಂದೆ ಹಣ ಬರಲಿದೆ. ಒಂದು ವೇಳೆ, ಮನೆ ಯಜಮಾನಿಯ ಖಾತೆಯಲ್ಲಿ ಸಮಸ್ಯೆಯಿದ್ದಲ್ಲಿ ಎರಡನೇ ಸದಸ್ಯ ಇಲ್ಲವೇ ಎರಡನೇ ಹಿರಿಯ ಸದಸ್ಯರಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ತೀರ್ಮಾನ ಕೈಗೊಂಡಿದೆ.
ಕುಟುಂಬದ ಮೊದಲ ಯಜಮಾನ ಆಗದೇ ಇದ್ದರೆ ಎರಡನೆಯ ಸದಸ್ಯರ ಖಾತೆಗೆ ಹಣ ಜಮೆ ಪ್ರಕ್ರಿಯೆ ನಡೆಯಲಿದೆ. ಈ ನಿಟ್ಟಿನಲ್ಲಿ ರೇಷನ್ ಕಾರ್ಡ್ ಆಧಾರದ ಮೇರೆಗೆ ಮನೆಯ ಹಿರಿಯ ವ್ಯಕ್ತಿ ಯಾರೆಂದು ಗುರುತಿಸಿ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಗೃಹಲಕ್ಷ್ಮಿ ಫಲಾನುಭವಿಗಳ ಹೆಸರು ಬಿಟ್ಟು ಹೋಗಿದ್ದಲ್ಲಿ ಇಲ್ಲವೇ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಇನ್ನಿತರ ಸಮಸ್ಯೆಗಳಿಗೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹ ಲಕ್ಷ್ಮಿ ಅದಾಲತ್ ಆಯೋಜನೆ ಮಾಡಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.
ಮನೆಯ ಯಜಮಾನಿ ಖಾತೆಯ ಮಾಹಿತಿಯಲ್ಲಿ ಗೊಂದಲ, ಆಧಾರ್ ಲಿಂಕ್ ಆಗದಿರುವುದು ಮೊದಲಾದ ಕಾರಣಗಳಿಂದ ಹಣ ವರ್ಗಾವಣೆ ಮಾಡಲು ಸಮಸ್ಯೆ ಎದುರಾಗಿದೆ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಫಲಾನುಭವಿಗಳನ್ನು ಬ್ಯಾಂಕಿಗೆ ಕರೆದೊಯ್ದು ಸಮಸ್ಯೆ ಪರಿಹರಿಸಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿ, ಎಲ್ಲ ಅರ್ಹ ಫಲಾನುಭವಿಗಳಿಗೆ ನೆರವು ನೀಡಲು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.ಇನ್ನು ಮುಂದೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿ ಹಣ ಹಾಕಲಿದ್ದಾರೆ.
ಇದನ್ನೂ ಓದಿ: ಉದ್ಯೋಗ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ – ವರ್ಕ್ ಫ್ರಮ್ ಹೋಮ್ ಬದಲು ಬರ್ತಿದೆ ಹೊಸ ಟ್ರೆಂಡ್ !!