Bengaluru Kambala: ಇಂದಿನಿಂದ ಬೆಂಗ್ಳೂರಲ್ಲಿ ಮಂಗ್ಳೂರ ಕಂಬಳ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ರಾಜ್ಯ ರಾಜಧಾನಿ!!

Bengaluru Kambala: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೇ ಪ್ರಪ್ರಥಮ ಬಾರಿಗೆ ಅದ್ಧೂರಿ ಕರಾವಳಿಯ ಕಂಬಳಕ್ಕೆ ಭರದ ಸಿದ್ಧತೆ ನಡೆದಿದ್ದು ಎರಡು ದಿನಗಳ ಕಾಲ ಬೆಂಗಳೂರು ಕಂಬಳ( Bengaluru Kambala)ನಡೆಯಲಿದೆ. ಬೆಳಗ್ಗೆ 10.30ಕ್ಕೆ ಅರಮನೆ ಮೈದಾನದಲ್ಲಿ ಕಾರ್ಯಕ್ರಮಗಳು ಔಪಚಾರಿಕವಾಗಿ ಆರಂಭವಾಗಿವೆ.

ಬೆಂಗಳೂರಲ್ಲಿ ನಡೆಯಲಿರುವ ಹಿನ್ನೆಲೆ ಭಾರೀ ಕುತೂಹಲ ಮೂಡಿಸಿದೆ. ಕಂಬಳ ಆಯೋಜನೆಗೆ ಬೆಂಗಳೂರು (Bengaluru Kambala 2023) ಸಜ್ಜಾಗಿದ್ದು, ಇಂದಿನಿಂದ ಎರಡು ದಿನಗಳ ಕಾಲ ರಾಜಧಾನಿಯಲ್ಲಿ ತುಳುನಾಡಿನ ಸಂಸ್ಕೃತಿಯ ಸೊಡಗು ನೋಡುಗರ ಕಣ್ಮನ ಸೆಳೆಯಲಿದೆ.ಮಂಗಳೂರು, ಉಡುಪಿ, ಕುಂದಾಪುರ ಮತ್ತು ಕಾಸರಗೋಡು ಭಾಗದ ಸುಮಾರು 200 ಜೋಡಿ ಪ್ರತಿಷ್ಠಿತ ಕೋಣಗಳು ಬೆಂಗಳೂರಿಗೆ ಬಂದು ತಲುಪಿವೆ.

ನಗರದ ಅರಮನೆ ಮೈದಾನದಲ್ಲಿ ಪಕ್ಷಾತೀತವಾಗಿ ಎರಡು ದಿನಗಳ ಕಾಲ ನಡೆಯುವ ಕಂಬಳದಲ್ಲಿ ಎಲ್ಲಾ ಪಕ್ಷಗಳ ಗಣ್ಯರು ಅತಿಥಿಗಳಾಗಿ ಎರಡು ದಿನಗಳ ಕಾಲ ವಿವಿಧ ಸಮಯದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಕರಾವಳಿ ಭಾಗದ ಚಿತ್ರರಂಗದಲ್ಲಿ ಸಾಧನೆ ಮಾಡಿರುವ ಐಶ್ವರ್ಯಾ ರೈ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ ಇನ್ನಿತರ ತಾರೆಯರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. ಕಂಬಳ ನಡೆಯುವ ಸಂದರ್ಭ ಯಾವುದೇ ಗೊಂದಲ, ವಿವಾದಗಳು ನಡೆಯದ ರೀತಿಯಲ್ಲಿ ‘ಲೇಸರ್‌ ಬೀಮ್‌ ನೆಟ್‌ವರ್ಕ್‌ ಸಿಸ್ಟಂ ವಿತ್‌ ಎಲೆಕ್ಟ್ರಾನಿಕ್‌ ಟೈಮಿಂಗ್ಸ್‌’ ಅಳವಡಿಸಲಾಗಿದ್ದು, ಕೋಣಗಳು ಗುರಿ ಮುಟ್ಟಿದ ಕೂಡಲೇ ಲೇಸರ್‌ ದೀಪ ಉರಿಯುವ ಜೊತೆಗೆ ಎಷ್ಟು ಸೆಕೆಂಡ್ಸ್‌ನಲ್ಲಿ ತಲುಪಿವೆ ಎಂಬುದು ಕೂಡ ತಿಳಿಯಲಿದೆ.ರೇಸ್ ಟ್ರ್ಯಾಕ್ ಸಾಮಾನ್ಯವಾಗಿ 145 ಮೀಟರ್ ಉದ್ದವಿರಲಿದ್ದು, ಆದರೆ, ಈ ಬಾರಿ ಅದನ್ನು 155 ಮೀಟರ್‌ಗೆ ವಿಸ್ತರಿಸಲಾಗಿದೆ. ಸಮಯವನ್ನು ನಿಖರವಾಗಿ ತಿಳಿಯಲು ಸಂಪೂರ್ಣ ಸ್ವಯಂಚಾಲಿತ ಸಮಯ (ಎಫ್‌ಎಟಿ) ವ್ಯವಸ್ಥೆ ಅಳವಡಿಸಲಾಗಿದೆ.

ತುಳುನಾಡಿನ ಜಾನಪದ ಕ್ರೀಡೆ ಕಂಬಳ ನೋಡಲು ಕಾತುರದಿಂದ ಎದುರು ನೋಡುತ್ತಿದ್ದ ಬೆಂಗಳೂರು ಕಂಬಳಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಇಡೀ ದೇಶವೇ ತಿರುಗಿ ನೋಡುವಂತೆ ಕಂಬಳ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಕಂಬಳದಲ್ಲಿ ಬೆಳಗ್ಗೆ 10 ಗಂಟೆಗೆ ಕೋಣಗಳು ಓಡುವ ಕಂಬಳದ ಕರೆ (ಟ್ರ್ಯಾಕ್) ಅನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಭಾ ಕಾರ್ಯಕ್ರಮವನ್ನು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಉದ್ಘಾಟಿಸಲಿದ್ದಾರೆ. ಇನ್ನು, ಮಧ್ಯಾಹ್ನ 12.00ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮಾಡಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ 6 ಗಂಟೆಗೆ ಮುಖ್ಯ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಈ ಕಂಬಳದಲ್ಲಿ ಗೆದ್ದ ಕೋಣಗಳಿಗೆ ಪ್ರಥಮ ಬಹುಮಾನ 16 ಗ್ರಾಂ ಚಿನ್ನ ಹಾಗೂ 1 ಲಕ್ಷ ನಗದು ಮೀಸಲಿಡಲಾಗಿದೆ. ಎರಡನೇ ಬಹುಮಾನ 8 ಗ್ರಾಂ ಚಿನ್ನ ಹಾಗೂ 50,000 ನಗದು ಇಡಲಾಗಿದೆ. ಮೂರನೇ ಬಹುಮಾನ 4 ಗ್ರಾಂ ಚಿನ್ನ ಹಾಗೂ 25,000 ನಗದು ಸಿಗಲಿದೆ.

ಇದನ್ನು ಓದಿ: H9N2: ಹೊಸ ಖಾಯಿಲೆಗೆ ಮತ್ತೆ ಸಾಕ್ಷಿಯಾಯ್ತು ಚೀನಾ- ಕೊರೊನಾ ರೀತಿ ಇದೂ ಹಬ್ಬುತ್ತಾ ? ಕೇಂದ್ರ ಸರ್ಕಾರದಿಂದ ಬಂದೇ ಬಿಡ್ತು ರೂಲ್ಸ್

Leave A Reply

Your email address will not be published.