

Harassment: ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿ ಓರ್ವ, ತನ್ನ ಕೆಲಸಕ್ಕೆ ಅವಮಾನ ಆಗುವಂತ ಕೆಲಸ ಮಾಡಿದ್ದು, ಸಾರ್ವಜನಿಕರಿಂದ ಗೂಸಾ ತಿನ್ನುವ ಪರಿಸ್ಥಿತಿ ಬಂದಿದೆ. ಹೌದು, ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೋರ್ವ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ (Harassment) ನೀಡಿದ ಆರೋಪದ ಮೇಲೆ ಸಾರ್ವಜನಿಕರು ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಬಿಹಾರದ ಪಟ್ನಾದಲ್ಲಿ ನಡೆದಿದೆ.
ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಗುರಿಯಾಗಿದೆ. ವಿಡಿಯೋದಲ್ಲಿ ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿ ತೂರಾಡುತ್ತ ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದನ್ನು ಕಾಣಬಹುದು. ಈತನ ಬೆನ್ನು ಬಿದ್ದಿರುವ ಸಾರ್ವಜನಿಕರು ಆತನನ್ನು ಥಳಿಸುತ್ತಿದ್ದು, ಬಳಿಕ ಆತ ತಪ್ಪಿಸಿಕೊಂಡು ಪೊಲೀಸ್ ವಾಹನದಲ್ಲಿ ಕುಳಿತು ರಕ್ಷಣೆ ಪಡೆಯುವುದನ್ನು ನೋಡಬಹುದಾಗಿದೆ.
ಇದನ್ನು ಓದಿ: DL, RC New Rule: DL, RCಗೆ ಬಂತು ಹೊಸ ರೂಲ್ಸ್- ಸಾರಿಗೆ ಇಲಾಖೆಯಿಂದ ಹೊಸ ನಿರ್ಧಾರ!!
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಆರೋಪಿ ಶೇರ್ ಸಿಂಗ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈತನ ಬಗ್ಗೆ ಈಗಾಗಲೇ ಹಲವು ಬಾರಿ ದೂರುಗಳು ಕೇಳಿ ಬಂದಿದ್ದು, ಇದೀಗ ಆರೋಪಿ ಅಧಿಕಾರಿ ಶೇರ್ ಸಿಂಗ್ನನ್ನು ಸೇವೆಯಿಂದ ಅಮಾನತು ಮಾಡಲಾಗಿದ್ದು, ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದಿದ್ದಾರೆ.
https://twitter.com/UtkarshSingh_/status/1727393041437347859?ref_src=twsrc%5Etfw%7Ctwcamp%5Etweetembed%7Ctwterm%5E1727393041437347859%7Ctwgr%5E3fa467c9254ea5ecdc77814c375978a4e534761c%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಇದನ್ನು ಓದಿ: Belthangady: ಸ್ನೇಹಿತನ ಪತ್ನಿಯ ಮೊಬೈಲ್ ಫೋನ್ ಕದ್ದು ಹಣ ವರ್ಗಾವಣೆ; ಪೊಲೀಸ್ ಮೆಟ್ಟಿಲೇರಿದ ಮಹಿಳೆ!!!













