Mangalore News: ಬಸ್ಸಿನಲ್ಲಿ ಬಿಟ್ಟುಹೋಗಿದ್ದ ಚಿನ್ನಾಭರಣಗಳನ್ನು ಹೊಂದಿದ್ದ ವ್ಯಾನಿಟಿ ಬ್ಯಾಗ್‌; ಮಹಿಳೆಗೆ ದೊರೆತಿದ್ದು ಹೇಗೆ ಗೊತ್ತಾ?

Mangalore news Bus Conductor Returns Lady's Vanity Bag With Rs 50k Worth Items

Share the Article

Mangalore News: ಪ್ರಯಾಣಿಕೋರ್ವರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 50 ಸಾವಿರ ರೂ.ಮೌಲ್ಯದ ಆಭರಣ ಮತ್ತಿತರ ಸೊತ್ತುಗಳಿದ್ದ ಬ್ಯಾಗನ್ನು, ಬಸ್‌ ನಿರ್ವಾಹಕರು ಅದನ್ನು ಮರಳಿ ವಾರೀಸುದಾರರಿಗೆ ಒಪ್ಪಿಸಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ(mangalore News).

ಈ ಘಟನೆ ನ.19 ರಂದು ನಡೆದಿದೆ. ಉಡುಪಿಯಿಂದ ಮಂಗಳೂರಿಗೆ ಮೂಕಾಂಬಿಕಾ ಹೆಸರಿನ ಖಾಸಗಿ ಬಸ್ಸಿನಲ್ಲಿ ಮಹಿಳೆಯೋರ್ವರು ಮಂಗಳುರಿಗೆ ಬಂದಿದ್ದು, ಈ ಸಂದರ್ಭ ತನ್ನ ವ್ಯಾನಿಟಿ ಬ್ಯಾಗನ್ನು ಬಸ್ಸಿನಲ್ಲಿ ಬಿಟ್ಟು ಹೋಗಿದ್ದರು.

Congress Manifesto: 400ರೂ ಗೆ ಸಿಗುತ್ತೆ ಸಿಲಿಂಡರ್- ಕಾಂಗ್ರೆಸ್ ನಿಂದ ಭರ್ಜರಿ ಘೋಷಣೆ

ಮಹಿಳೆ ಪಾಂಡೇಶ್ವರ ಠಾಣೆಗೆ ದೂರು ಸಲ್ಲಿಸಿದ್ದರು. ಸೋಮವಾರ ಬಸ್ಸಿನ ನಿರ್ವಾಹಕ ಜಯರಾಜ್‌ ಅವರು ಪಾಂಡೇಶ್ವರ ಠಾಣೆಗೆ ವ್ಯಾನಿಟಿ ಬ್ಯಾಗ್‌ ಸಿಕ್ಕಿರುವ ಕುರಿತು ತಿಳಿಸಿದ್ದರು. ಅನಂತರ ಠಾಣೆ ಎಎಸ್‌ಐ ಶ್ರೀಧರ ಅವರ ನೇತೃತ್ವದಲ್ಲಿ ವ್ಯಾನಿಟಿ ಬ್ಯಾಗನ್ನು ಬಸ್‌ ನಿರ್ವಾಹಕ ಮಹಿಳೆಗೆ ಹಸ್ತಾಂತರಿಸಿದ್ದಾರೆ.

ಇದನ್ನೂ ಓದಿ: Mangalore Central Railway Station: ಮಂಗಳೂರಿಗೆ ಬರುವ ಈ ರೈಲುಗಳು ರದ್ದು; ದಿನಾಂಕ, ಸಮಯದ ಕುರಿತು ಕಂಪ್ಲೀಟ್‌ ವಿವರ ಇಲ್ಲಿದೆ!

Leave A Reply