Ration Card cancelled: ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಬಿಗ್ ಶಾಕ್ : ಈ ಕಾರಣಕ್ಕೆ 15 ಸಾವಿರಕ್ಕೂ ಹೆಚ್ಚು ರೇಷನ್ ಕಾರ್ಡ್ ಕ್ಯಾನ್ಸಲ್! ಅಲರ್ಟ್ ಆಗಿರಿ

Share the Article

Ration Card cancelled: ಅರ್ಹ ಪಡಿತರ ಚೀಟಿದಾರರು, ಯಾರು ಪ್ರತಿ ತಿಂಗಳು ರೇಷನ್ ಪಡೆಯುದಿಲ್ಲವೋ ಅಂತಹವರಿಗೆ ಬಿಗ್ ಶಾಕ್ ಕಾದಿದೆ. ಇದೀಗ ಕಾರ್ಡ್ ರದ್ದತಿಗೆ ಆಹಾರ ಇಲಾಖೆ ಮುಂದಾಗಿದೆ. ಹೌದು, 6 ತಿಂಗಳಿನಿಂದ ಪಡಿತರ ಪಡೆಯದವರಿಗೆ ಆಹಾರ ಇಲಾಖೆ ಬಿಗ್ ಶಾಕ್ ನೀಡಿದ್ದು, ರಾಜ್ಯಾದ್ಯಂತ 15,092 ಲಕ್ಷ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಿದೆ (Ration cards cancelled) ಎಂದು ಮಾಹಿತಿ ದೊರೆತಿದೆ.

ಮೈಸೂರು ಜಿಲ್ಲೆಯಲ್ಲಿ 7,08,914 ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಪೈಕಿ ಸುಮಾರು 15,092 ಮಂದಿ ಕಳೆದ 6 ತಿಂಗಳುಗಳಿಂದ ಪಡಿತರ ವಸ್ತು ಪಡೆದುಕೊಳ್ಳುತ್ತಿಲ್ಲ, ಅಂತಹವರ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಯಾರು ಪಡಿತರವನ್ನು ಪಡೆದುಕೊಳ್ಳುತ್ತಿಲ್ಲವೋ ಅಂಥವರ ಬಿಪಿಎಲ್ ಕಾರ್ಡ್ ಸಮೀಕ್ಷೆ ಕಾರ್ಯ ರದ್ದುಪಡಿಸಲು ಆರಂಭವಾಗಿದೆ. ಬಡತನ ರೇಖೆಗಿಂತ ಕೆಳಗಿರುವವರಿಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ನ್ನು ಸರ್ಕಾರ ವಿತರಣೆ ಮಾಡಿದೆ, ಆದರೆ ಅದೆಷ್ಟೋ ಜನ ಪಡಿತರ ಚೀಟಿ ಹೊಂದಿದ್ದರು ಕೂಡ ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ. ಅಲ್ಲದೇ ಸರ್ಕಾರದ ಇತರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮಾತ್ರ ಬಿಪಿಎಲ್ ಬಳಸಿಕೊಳ್ಳುತ್ತಿರುವುದು ಕಾರ್ಡ್ ಸರ್ಕಾರದ ಗಮನಕ್ಕೆ ಬಂದಿದೆ. ಅಂತಹ ಪಡಿತರ ಚೀಟಿಯ ಸಮೀಕ್ಷೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ.

ಇದನ್ನು ಓದಿ: Savarkar Photo Controversy:ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೋ ವಿಚಾರ : ಭಾರೀ ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ!?

Leave A Reply