8th Pay Commission: ಕೇಂದ್ರ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ: ಅತೀ ಶೀಘ್ರದಲ್ಲೇ ಹೊಸ ವೇತನ ಆಯೋಗ ರಚನೆ!?ಮೂಲ ವೇತನ ಹೆಚ್ಚಳ?

8th Pay Commission implemented soon and huge hike in basic pay latest news

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಕೇಂದ್ರ ನೌಕರರು ಮತ್ತು ಪಿಂಚಣಿದಾರರ ಡಿಎಯನ್ನು (DA)ಸರ್ಕಾರ ಈ ಹಿಂದೆ ಶೇ 4ರಷ್ಟು ಹೆಚ್ಚಿಸಿತ್ತು. ಇದಾದ ನಂತರ ನೌಕರರು ಪಡೆಯುತ್ತಿರುವ ಡಿಎ ಶೇ.46ಕ್ಕೆ ಹೆಚ್ಚಳವಾಗಿದೆ. ಈ ಡಿಎ ಏರಿಕೆ ಬಳಿಕ ಕೂಡ ಸರ್ಕಾರಿ ಉದ್ಯೋಗಿಗಳ ವೇತನ ಹೆಚ್ಚಳವಾಗಿದೆ. ಈ ನಡುವೆಕೇಂದ್ರ ನೌಕರರಿಗೆ ಸಂತಸದ ಸುದ್ದಿ ಹೊರಬಿದ್ದಿದೆ. 8ನೇ ವೇತನ ಆಯೋಗದ (8th Pay Commission)ಕುರಿತು ಸರ್ಕಾರ ಶೀಘ್ರದಲ್ಲೇ ಅತೀ ಮುಖ್ಯ ನಿರ್ಣಯ ಕೈಗೊಳ್ಳಲಿದ್ದು, ಇದರಿಂದ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಭಾರೀ ಹೆಚ್ಚಳವಾಗುವ ನಿರೀಕ್ಷೆಯಿದೆ.

 

Fire Accident: ಮೀನುಗಾರಿಕಾ ಬಂದರಿನಲ್ಲಿ 40 ಬೋಟ್ ಗಳು ಬೆಂಕಿಗಾಹುತಿ!! ಬೆಂಕಿ ಕಾಣಿಸಿಕೊಳ್ಳಲು ಕಾರಣ?!

7ನೇ ವೇತನ ಆಯೋಗವನ್ನು (7th Pay Commission)2016 ರಲ್ಲಿ ಜಾರಿಗೆ ತರಲಾಗಿದ್ದು, 7ನೇ ವೇತನ ಆಯೋಗ ಜಾರಿಯಾದ ಬಳಿಕ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಏರಿಕೆಯಾಗುವ ಸಂಭವವಿದೆ. 8ನೇ ವೇತನ ಆಯೋಗದ ಕುರಿತು ಸರ್ಕಾರ ಇನ್ನೂ ಯಾವುದೇ ಅಧಿಕೃತ ತೀರ್ಮಾನ ಹೊರಬಿದ್ದಿಲ್ಲ. ಆದರೆ, ಶೀಘ್ರದಲ್ಲೇ ಸರ್ಕಾರ ಈ ಬಗ್ಗೆ ಶೀಘ್ರದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.ಇದರಿಂದ ಹಲವಾರು ಲಕ್ಷ ಕೇಂದ್ರ ನೌಕರರು ಪ್ರಯೋಜನ ಪಡೆಯಲಿದ್ದಾರೆ.

ಸರ್ಕಾರ ಶೀಘ್ರದಲ್ಲೇ ನೌಕರರಿಗೆ 8 ನೇ ವೇತನ ಆಯೋಗವನ್ನು ರಚಿಸಲಿದ್ದು, ಈ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ. 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮೊದಲೇ ಸರ್ಕಾರ 8ನೆ ವೇತನ ಆಯೋಗ ರಚಿಸುವ ನಿರೀಕ್ಷೆಯಿದೆ. ಇದೀಗ 8ನೇ ವೇತನ ಆಯೋಗ ರಚನೆಯಾದ್ದಲ್ಲಿ 2026ರ ವೇಳೆಗೆ ಜಾರಿಗೆ ಬರುವ ಸಂಭವವಿದೆ. ಹೀಗಾದರೆ, ಕನಿಷ್ಠ ಮೂಲ ವೇತನದಲ್ಲಿ ದಾಖಲೆಯ ಹೆಚ್ಚಳವಾಗಲಿದೆ. ಸರ್ಕಾರ ಕೇಂದ್ರೀಯ ಉದ್ಯೋಗಿಗಳಿಗೆ ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಏರಿಕೆ ಮಾಡುವ ನಿರೀಕ್ಷೆಯಿದೆ. ಈ ಕುರಿತು ಸರ್ಕಾರ ಅಧಿಕೃತ ತೀರ್ಮಾನ ಕೈಗೊಳ್ಳದೆ ಇದ್ದರೂ ಕೂಡ ಶೀಘ್ರವೇ ಅನುಮೋದನೆ ನೀಡಲಿದೆ ಎನ್ನಲಾಗಿದೆ.

ಇದನ್ನು ಓದಿ: Mangalore: ಸೌದಿಯಲ್ಲಿ ಬಂಧಿಯಾಗಿದ್ದ ಕಡಬದ ಯುವಕ ಇಂದು ಸ್ವದೇಶಕ್ಕೆ!! ಗೆಳೆಯರ ನಿರಂತರ ಶ್ರಮ-ಭರವಸೆಯಲ್ಲೇ ಕೈತೊಳೆದುಕೊಂಡ್ರಾ ಜನಪ್ರತಿನಿಧಿಗಳು

Leave A Reply

Your email address will not be published.