Viral Video: ಕೋಳಿಯ ಖಾಸಗಿ ಭಾಗಕ್ಕೆ ಪಟಾಕಿ ತುರುಕಿ, ಸ್ಫೋಟ!! ವಿಕೃತ ಕೃತ್ಯ ಎಸಗಿದವರಿಗೆ ಕಠಿಣ ಶಿಕ್ಷೆಗೆ ಆಗ್ರಹ!!!

Share the Article

ಕೋಳಿಯ (Hen) ಖಾಸಗಿ ಭಾಗಕ್ಕೆ (Private Part) ಗೆ ಪಟಾಕಿ ತುರುಕಿ (FireCracker) ವಿಕೃತವಾಗಿ ದೀಪಾವಳಿ ಆಚರಣೆ ಮಾಡಿದ ಘಟನೆಯೊಂದು ಅಸ್ಸಾಮ್‌ನ ನಗಾಂವ್‌ ಜಿಲ್ಲೆಯ (Nagaon District) ರಾಹಾ ಗಾಂವ್‌ನಲ್ಲಿ (Raha Gaon) ನಡೆದಿದೆ. ಕೊಳಿಗೆ ಪಟಾಕಿ ಹಾಕಿ ಸಿಡಿಸಿ, ಆಗ ಪಟಾಕಿ ಸ್ಫೋಟಗೊಂಡು ಕೋಳಿ ನರಳಿ ಸಾಯುವುದನ್ನು ವೀಡಿಯೋದಲ್ಲಿ ಕಾಣಬಹುದು.

ಕೋಳಿಯ ಖಾಸಗಿ ಭಾಗದಲ್ಲಿ ಪಟಾಕಿ ತುರುಕಿ ಸಿಡಿಸಿರುವ ಘಟನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎನ್‌ಜಿಒ, ಪೀಪಲ್‌ ಫಾರ್‌ ಅನಿಮಲ್ಸ್‌ (PFA) ಗಮನಕ್ಕೆ ಬಂದಿದ್ದು, ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಮತ್ತು ಪೊಲೀಸರನ್ನು ಪೋಸ್ಟ್‌ನಲ್ಲಿ ಟ್ಯಾಗ್‌ ಮಾಡಲಾಗಿದೆ. ಕೋಳಿ ಸತ್ತ ನಂತರವೂ ಹುಡುಗರು ಜೋಕ್‌ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು.

ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘ ಪೋಸ್ಟ್‌ ಮಾಡಿದೆ ಪಿಎಫ್‌ಎ. ದುಷ್ಕರ್ಮಿಗಳ ಕ್ರೂರತನಕ್ಕೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಅಸ್ಸಾಮ್‌ ಪೊಲೀಸರಿಗೆ ಮನವಿ ಮಾಡಿದ್ದಾರೆ.

Leave A Reply