Pramod Mutalik: KEA ಪರೀಕ್ಷೆಗಳಲ್ಲಿ ಹಿಜಾಬ್ ಗೆ ಅವಕಾಶ- ಹೈ ಕೋರ್ಟ್ ಆದೇಶ ಉಲ್ಲೇಖಿಸಿ ಮುತಾಲಿಕ್ ಹೇಳಿದ್ದೇನು?!

Pramod Mutalik: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರಮೋದ್ ಮುತಾಲಿಕ್ (Pramod Mutalik) , ಈಗಾಗಲೇ ಕೆಇಎ ಪರೀಕ್ಷೆಗೆ ಹಿಜಾಬ್ ಹಾಕಿಕೊಳ್ಳಲು ಅವಕಾಶ ಕಲ್ಪಿಸಿದ ವಿಚಾರದ ಬಗ್ಗೆ ಮಾತನಾಡಿ, ಹಿಜಾಬ್ ಧರಿಸಲು ಅವಕಾಶ ಕೊಟ್ಟಿದ್ದು ಕೋರ್ಟಿನ ಆದೇಶದ ಉಲ್ಲಂಘನೆಯಾಗಿದೆ. ‌ಹಿಜಾಬ್ ಕಾಲೇಜು ಕಂಪೌಂಡ್‌ವರೆಗೆ ಮಾತ್ರ ಧರಿಸಿ ಬರಬೇಕು ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ. ಇದು ಆರೆಸ್ಸೆಸ್‌, ಶ್ರೀ ರಾಮಸೇನೆ, ಬಿಜೆಪಿ ಆದೇಶವಲ್ಲ ಎಂದು ಕಿಡಿ ಕಾರಿದ್ದಾರೆ.

ಕೆಇಎ ಪರೀಕ್ಷೆಗೆ ಹಿಜಾಬ್ ಧರಿಸಲು ಅವಕಾಶ ಕೊಟ್ಟಿದ್ದು ಕೋರ್ಟಿನ ಆದೇಶದ ಉಲ್ಲಂಘನೆಯಾಗಿದೆ. ‌ಹಿಜಾಬ್ ಕಾಲೇಜು ಕಂಪೌಂಡ್‌ವರೆಗೆ ಮಾತ್ರ ಧರಿಸಿ ಬರಬೇಕು ಎಂದು ಕೋರ್ಟ್ ಸ್ಪಷ್ಟನೆ ನೀಡಿದೆ. ಇದು ಆರೆಸ್ಸೆಸ್‌, ಶ್ರೀ ರಾಮಸೇನೆ, ಬಿಜೆಪಿ ಆದೇಶವಲ್ಲ. ನ್ಯಾಯಾಲಯದ ಆದೇಶವಿದ್ದರೂ ಹಿಜಾಬ್ ಧರಿಸಲು ಅವಕಾಶ ನೀಡಲಾಗಿದೆ. ಅದಲ್ಲದೆ ಹಿಂದೂ ಹೆಣ್ಣು ಮಕ್ಕಳ ತಾಳಿ ಬಿಚ್ಚಿಸಿದ್ದಾರೆ, ಉಂಗುರ, ಚೈನ್,ಕಾಲುಂಗರ ಬಿಚ್ಚಿಸಿದ್ದಾರೆ. ಹಿಜಾಬ್ ಧರಿಸಿ ಒಳಗಡೆ ನಕಲು ಮಾಡಲು ಅವಕಾಶ ಕೊಟ್ಟಂತಾಗುತ್ತದೆ ಎಂದು ಕಿಡಿಕಾರಿದರು.

ಇನ್ನು, ಸರಕಾರದ ಅತಿಯಾದ ಮುಸ್ಲಿಂ ಪುಷ್ಟೀಕರಣವನ್ನ ನಾವು ಖಂಡಿಸುತ್ತೇವೆ ಎಂದ ಮುತಾಲಿಕ್, ಸರಕಾರದ ನಿರ್ಧಾರದ ವಿರುದ್ದ ಹೈ ಕೋರ್ಟ್‌ನಲ್ಲಿ ಚಾಲೆಂಜ್ ಮಾಡುತ್ತೇವೆ. ತಾಳಿಯನ್ನ ಹಿಂದೂಗಳಲ್ಲಿ ಯಾವುದೇ ಸಂದರ್ಭದಲ್ಲಿ ತೆಗೆಯುವುದಿಲ್ಲ. ಗಂಡ ಸತ್ತ ನಂತರ ಮಾತ್ರ ತಾಳಿ ತೆಗೆಯುತ್ತಾರೆ. ಹಿಂದೂ ಸಂಪ್ರದಾಯಕ್ಕೂ ಕಾಂಗ್ರೆಸ್ ಧಕ್ಕೆ ಮಾಡುತ್ತಿದೆ. ಹಿಂದೂ ವಿರೋಧಿ ಸರಕಾರದ ಮಾನಸಿಕತೆಯನ್ನ ನಾನು ವಿರೋಧಿಸುತ್ತೇನೆ ಎಂದು ಗುಡುಗಿದ್ದಾರೆ.

 

ಇದನ್ನು ಓದಿ: ಕೇಂದ್ರದಿಂದ ರೈತರಿಗೆ ಸಹಾಯ ಧನ ಘೋಷಣೆ- ತಕ್ಷಣ ಹೀಗೆ ಅರ್ಜಿ ಸಲ್ಲಿಸಿ

1 Comment
  1. cqcuffsCXhucWpfMeiNbSukKmro says

    cqcuffsCXhucWpfMeiNbSukKmro

Leave A Reply

Your email address will not be published.