Home News Kerala Nurse: ಕೇರಳ ನರ್ಸ್ ಗೆ ವಿದೇಶದಲ್ಲಿ ಮರಣ ದಂಡನೆ – ಶಿಕ್ಷೆ ವಿರುದ್ಧದ ಮೇಲ್ಮನವಿ...

Kerala Nurse: ಕೇರಳ ನರ್ಸ್ ಗೆ ವಿದೇಶದಲ್ಲಿ ಮರಣ ದಂಡನೆ – ಶಿಕ್ಷೆ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಸುಪ್ರೀಂ !! ಅಷ್ಟಕ್ಕೂ ನಡೆದದ್ದೇನು ?

Kerala Nurse

Hindu neighbor gifts plot of land

Hindu neighbour gifts land to Muslim journalist

Kerala Nurse: ಯೆಮನ್ ನ ತಲಾಲ್ ಅಬ್ದೊ ಮಹ್ದಿಯ ಸ್ವಾಧೀನದಲ್ಲಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಆತನಿಗೆ ನಿದ್ರಾಜನಕ ಚುಚ್ಚುಮದ್ದು ನೀಡಿ ಯೆಮನ್ ಪ್ರಜೆಯನ್ನು ಕೊಂದ ಆರೋಪದಲ್ಲಿ 2017ರಿಂದ ಜೈಲು ವಾಸ ಅನುಭವಿಸುತ್ತಿರುವ ಕೇರಳದ ನರ್ಸ್ (Kerala Nurse) ನಿಮಿಷಾ ಪ್ರಿಯಾ ಅವರ ಮರಣದಂಡನೆ ವಿರುದ್ಧ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಯೆಮನ್‌ ಸುಪ್ರೀಂಕೋರ್ಟ್ ರಿಜೆಕ್ಟ್ ಮಾಡಿದೆ.

ಸದ್ಯ ನಿಮಿಷಾ ಪ್ರಿಯಾ ಅವರ ಬಿಡುಗಡೆಗೆ ಪ್ರತಿಯಾಗಿ ಮಹದಿಯ ಕುಟುಂಬಕ್ಕೆ ಪರಿಹಾರ ನೀಡುವ ಸಂಧಾನ ಮಾತುಕತೆಗಾಗಿ ಅವರ ತಾಯಿ ಯೆಮನ್‌ಗೆ ಪ್ರಯಾಣಿಸಲು ಬಯಸಿದ್ದು, ಈ ಹಿನ್ನೆಲೆ ಯೆಮನ್‌ಗೆ ತೆರಳಲು ಅನುಮತಿ ನೀಡುವಂತೆ ಪ್ರಿಯಾ ಅವರ ತಾಯಿ ಈ ವರ್ಷದ ಆರಂಭದಲ್ಲಿ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕಾಲತ್ತು ವಹಿಸಿರುವ ವಕೀಲ ಸುಭಾಷ್ ಚಂದರನ್ ಕೆಆರ್ ಅವರು, ಪ್ರಿಯಾಳ ತಾಯಿಗೆ ಆಕೆಯನ್ನು ಸಾವಿನಿಂದ ಬಚಾವು ಮಾಡಲು ಇರುವ ಏಕೈಕ ಮಾರ್ಗವೆಂದರೆ ಮೃತನ ಕುಟುಂಬದವರ ಜತೆಗೆ ನೇರವಾಗಿ ರಾಜಿ ಸಂಧಾನ ನಡೆಸುವುದು. ಅದಕ್ಕಾಗಿ ಯೆಮನ್‌ನಲ್ಲಿ ಸಂತ್ರಸ್ತೆಯ ತಾಯಿ ಖುದ್ದು ಹಾಜರಾಗುವುದು ಅಗತ್ಯವಾಗಿದೆ. ಆದರೆ ಭಾರತೀಯ ಪ್ರಜೆಗಳು ಅಲ್ಲಿಗೆ ಪಯಣಿಸದಂತೆ ವಿಧಿಸಿರುವ ನಿಷೇಧ ತಡೆಗೋಡೆಯಾಗಿ ನಿಂತಿದೆ ಎಂದು ಹೇಳಿದ್ದರು.

ಯೆಮನ್‌ನ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸಬಹುದು. ನಿರ್ದಿಷ್ಟ ಕಾರಣಗಳು ಮತ್ತು ಸೀಮಿತ ಅವಧಿಗೆ ಯೆಮನ್‌ಗೆ ಭಾರತದ ಪ್ರಜೆಗಳು ತೆರಳಬಹುದು ಎಂದು ಇತ್ತೀಚೆಗೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಕೀಲರು ಗುರುವಾರ ಹೈಕೋರ್ಟ್‌ಗೆ ತಿಳಿಸಿತ್ತು.

ಆದರೆ ನಿಮಿಷಾ ಪ್ರಿಯಾ ಅವರನ್ನು ಕಾಪಾಡಲು ‘ಬ್ಲಡ್ ಮನಿ’ (ಕೊಲೆಯಾದವರ ಕುಟುಂಬಕ್ಕೆ ಅಪರಾಧ ಎಸಗಿದವರು ನೀಡುವ ಪರಿಹಾರದ ಹಣ) ಕುರಿತು ಯೆಮನ್ ಜತೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಇನ್ನು ಯೆಮನ್‌ನಲ್ಲಿನ ಶಿಕ್ಷೆ ವಿರುದ್ಧ ಕಾನೂನು ಪರಿಹಾರ ಕಂಡುಕೊಳ್ಳಲು ಮುಂದಾಗುವಂತೆ ಸೂಚನೆ ನೀಡಿತ್ತು. ಅಂತಿಮವಾಗಿ ಯೆಮನ್ ಕೋರ್ಟ್ ಪ್ರಿಯಾಳ ಶಿಕ್ಷೆ ವಿರುದ್ಧದ ಮೇಲ್ಮನವಿಯನ್ನು ನವೆಂಬರ್ 13ರಂದು ತಳ್ಳಿಹಾಕಿದೆ ಎನ್ನಲಾಗಿದೆ.