Udupi Crime News: ಮುಸ್ಲಿಂ ಕುಟುಂಬದ ನಾಲ್ವರ ಹತ್ಯೆ; ಪೋಸ್ಟರ್‌ ಮಾಡಿ ಸಂಭ್ರಮಿಸಿದ ಕಿಡಿಗೇಡಿಗಳು, ಕೇಸು ದಾಖಲು!!!

Udupi murder of four people case miscreants who made the poster in Instagram and celebrated

Share the Article

 

Udupi murder case : ಒಂದೇ ಕುಟುಂಬದ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜನಾಕ್ರೋಶ ವ್ಯಕ್ತವಾಗಿದೆ. ಆರೋಪಿಗೆ ಕೂಡಲೇ ಗಲ್ಲುಶಿಕ್ಷೆ ನೀಡಬೇಕು ಎಂದು ಅಲ್ಲಿನ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಪ್ರಕರಣದ (Udupi murder case ) ಕಾವು ಇನ್ನೂ ತಣ್ಣಗಾಗಿಲ್ಲ. ಅಷ್ಟರಲ್ಲೇ ವಿಕೃತ ಮನಸ್ಸಿನ ಕೆಲವೊಂದು ಕಿಡಿಗೇಡಿಗಳು ಉಡುಪಿ ಹತ್ಯೆ ಪ್ರಕರಣವನ್ನು ಸಂಭ್ರಮಿಸಿ ಪೋಸ್ಟ್‌ ಹರಿಬಿಟ್ಟಿದ್ದಾರೆ.

ಹಿಂದೂ ಮಂತ್ರ ಹೆಸರಿನ ಇನ್‌ಸ್ಟಾಗ್ರಾಂ ಹೆಸರಿನಲ್ಲಿ ಪೋಸ್ಟ್‌ ಮಾಡಲಾಗಿದೆ. ಆರೋಪಿ ಪ್ರವೀಣ್‌ ಚೌಗುಲೆಗೆ ಕಿರೀಟ ತೊಡಿಸಿದಂತೆ ಪೋಸ್ಟರ್‌ ಹಾಕಲಾಗಿದೆ. ಅಲ್ಲದೇ 15 ನಿಮಿಷದಲ್ಲಿ ನಾಲ್ವರು ಮುಸ್ಲಿಮರನ್ನು ಕೊಂದು ವಿಶ್ವದಾಖಲೆ ಮಾಡಿದ್ದಾನೆ ಎಂದು ಟೈಟಲ್‌ ನೀಡಲಾಗಿದೆ. ಸದ್ಯ ಈ ಕುರಿತು ಇನ್‌ಸ್ಟಾಗ್ರಾಂ ಪೇಜ್‌ ಮೇಲೆ ಉಡುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Udupi News: ಉಡುಪಿ ನಾಲ್ವರ ಹಂತಕ ಅನುಮಾನ ಪಿಶಾಚಿ; ಪತ್ನಿಗೂ ಚಿತ್ರಹಿಂಸೆ ನೀಡಿ ಕೊಲೆಗೂ ಯತ್ನಿಸಿದ್ದ !

Leave A Reply