FD Rate Hike: ಈ ಬ್ಯಾಂಕಿನ FD ಬಡ್ಡಿ ದರದಲ್ಲಿ ಭಾರೀ ಏರಿಕೆ – ಹಿಂದೆಂದೂ ಕಾಣದ ಬಡ್ಡಿ ಕಂಡು ಹೂಡಿಕೆಗಾಗಿ ಮುಗಿಬಿದ್ದ ಜನ!!

FD Rate Hike j&k bank offering good intrest rate for the fixed deposit details

FD Rate Hike: ಕಳೆದ ವರ್ಷ ಮೇ ತಿಂಗಳಿನಿಂದ ಇಲ್ಲಿಯವರೆಗೆ ಆರ್ ಬಿಐ (RBI) ಸುಮಾರು ಆರು ಬಾರಿ ರೆಪೋ ದರವನ್ನು ಏರಿಸಿದೆ. ಈ ಬೆನ್ನಲ್ಲೇ ಬ್ಯಾಂಕುಗಳು ಕೂಡಾ ಎಫ್‌ಡಿ(FD), ಸಾಲದ ಬಡ್ಡಿದರ ಹೆಚ್ಚಳ ಮಾಡಿದೆ. ನೀವು ಈ ಬ್ಯಾಂಕ್‌ನಲ್ಲಿ ಎಫ್‌ಡಿ ಖಾತೆಯನ್ನು ಹೊಂದಿದ್ದರೆ, ಅಥವಾ ತೆರೆಯಲು ಬಯಸಿದರೆ ನಿಮಗೆ ಅಧಿಕ ಬಡ್ಡಿದರ (FD Rate Hike)ಸಿಗಲಿದೆ.

1938 ರಲ್ಲಿ ಸ್ಥಾಪನೆಯಾದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (ಜೆ&ಕೆ ಬ್ಯಾಂಕ್) ಭಾರತದ ಅತ್ಯಂತ ಹಳೆಯ ಖಾಸಗಿ ವಲಯದ ಬ್ಯಾಂಕ್‌ ಆಗಿದ್ದು ನಿಗದಿತ ವಾಣಿಜ್ಯ ಬ್ಯಾಂಕ್ ಆಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಎಲ್ಲಾ ಮೆಚ್ಯೂರಿಟಿ ಅವಧಿಗಳ ಫಿಕ್ಸಿಡ್ ಡೆಪಾಸಿಟ್‌ಗಳ (FD)ಮೇಲೆ ಹೆಚ್ಚುವರಿಯಾಗಿ ಶೇಕಡ 0.50 ಬಡ್ಡಿದರವನ್ನು ಪಡೆಯಬಹುದು. 2 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಎಫ್‌ಡಿ ಮೇಲೆ ಬ್ಯಾಂಕ್ ಹಿರಿಯ ನಾಗರಿಕರಿಗೆ(Senior Citizens)ಹೆಚ್ಚುವರಿ ಬಡ್ಡಿದರ ಸಿಗಲಿದೆ.

ನೂತನ ಬಡ್ಡಿದರ ಹೀಗಿದೆ:
ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ 46 ರಿಂದ 90 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 4.60 ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ 91 ಮತ್ತು 180 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಶೇಕಡ 4.75 ಬಡ್ಡಿದರವನ್ನು ನೀಡುತ್ತದೆ.

181 ಮತ್ತು 221 ದಿನಗಳ ನಡುವಿನ ಡೆಪಾಸಿಟ್‌ಗಳಿಗೆ ಶೇಕಡ 5.60 ಬಡ್ಡಿದರವನ್ನು ಬ್ಯಾಂಕ್ ನೀಡುತ್ತದೆ. ಇನ್ನು 223 ದಿನಗಳಿಂದ 270 ದಿನಗಳಿಗಿಂತ ಕಡಿಮೆ ಅವಧಿಯ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 5.60 ಬಡ್ಡಿದರವನ್ನು ನೀಡುತ್ತದೆ. ಆದರೆ 222 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 6.30 ರಷ್ಟು ಬಡ್ಡಿದರವನ್ನು ಒದಗಿಸುತ್ತದೆ.

ಬ್ಯಾಂಕ್ 271 ದಿನಗಳಿಂದ 332 ದಿನಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಶೇಕಡ 6.00 ಬಡ್ಡಿದರವನ್ನು ನೀಡುವುದನ್ನು ಮುಂದುವರಿಸುತ್ತದೆ. ಆದರೆ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (J&K ಬ್ಯಾಂಕ್) 333 ದಿನಗಳಲ್ಲಿ ಮೆಚ್ಯೂರ್ ಆಗುವ ಎಫ್‌ಡಿ ಮೇಲೆ ಶೇಕಡ 6.60 ಬಡ್ಡಿದರ ನೀಡಲಿದೆ.

334 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇಕಡ 6 ರಷ್ಟು ಬಡ್ಡಿ ದರ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (J&K ಬ್ಯಾಂಕ್) ನೀಡುತ್ತದೆ. ವರ್ಷದಿಂದ 554 ದಿನಗಳ ಅವಧಿಯ ಠೇವಣಿಗಳಿಗೆ ಶೇಕಡ 7.10 ಆಗಿದ್ದು, 555 ದಿನಗಳಲ್ಲಿ ಮೆಚ್ಯೂರ್ ಆಗುವ ಡೆಪಾಸಿಟ್‌ಗಳ ಮೇಲೆ ಬ್ಯಾಂಕ್ ಶೇಕಡ 7.50 ರಷ್ಟು ಬಡ್ಡಿದರ ಸಿಗಲಿದೆ.

556 ದಿನಗಳಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್‌ಡಿ ಮೇಲೆ ಬ್ಯಾಂಕ್ ಬಡ್ಡಿದರ ಶೇಕಡ 7.10 ಆಗಿದ್ದು, 2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಬ್ಯಾಂಕ್ ಶೇಕಡ 7.00 ಬಡ್ಡಿದರ ಸಿಗಲಿದೆ. ಇನ್ನು ಬ್ಯಾಂಕ್ 3 ವರ್ಷದಿಂದ 5 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್‌ಡಿಗಳ ಮೇಲೆ ಶೇಕಡ 6.50 ಬಡ್ಡಿದರ ನೀಡಲಾಗುತ್ತದೆ. ಐದು ಮತ್ತು ಹತ್ತು ವರ್ಷಗಳವರೆಗೆ ಮಾಡಿದ ಠೇವಣಿಗಳ ಮೇಲೆ ಬ್ಯಾಂಕ್ ಬಡ್ಡಿದರ ಶೇಕಡ 6.50 ಆಗಿದೆ.

 

ಇದನ್ನು ಓದಿ: Raichur: ಹಾವಿಗೇ ಪ್ರಜ್ಞೆ ತಪ್ಪಿಸಿತು ಈ ಪಿನಾಯಿಲ್- ಯಬ್ಬೋ.. ಇದ್ಯಾವದು ಈ ಪರಿ ಘಾಟಿನ ಪಿನಾಯಿಲ್ ?! ಕೊನೆಗೂ ಹಾವು ಬದುಕಿತಾ?!

Leave A Reply

Your email address will not be published.