Home latest Shakti Scheme: ಸರ್ಕಾರಿ ಬಸ್ಸಲ್ಲಿ ಫ್ರೀ ಯಾಗಿ ಓಡಾಡೋ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್-...

Shakti Scheme: ಸರ್ಕಾರಿ ಬಸ್ಸಲ್ಲಿ ಫ್ರೀ ಯಾಗಿ ಓಡಾಡೋ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್- ಸರ್ಕಾರದ ಹೊಸ ಘೋಷಣೆ !!

Shakti Scheme

Hindu neighbor gifts plot of land

Hindu neighbour gifts land to Muslim journalist

Shakti Scheme : ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಯಲ್ಲಿ (Congress Guarantee scheme) ಒಂದಾಗಿರುವ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ “ಶಕ್ತಿ” ಯೋಜನೆಗೆ (Shakti Scheme) ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಶಕ್ತಿ ಯೋಜನೆಯಿಂದ( Shakthi Free Bus Effect)ಫ್ರೀ ಫ್ರೀ ಎಂದು ಟ್ರಿಪ್ ಹೊಡೆಯುವ ಮಹಿಳೆಯರು ಸಿಕ್ಕಿದ್ದೇ ಚಾನ್ಸ್ ಎಂದು ತೀರ್ಥ ಕ್ಷೇತ್ರ ದರ್ಶನ, ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಕಾಮನ್ ಆಗಿ ಬಿಟ್ಟಿದೆ.ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದು, ಈ ಯೋಜನೆಯ ಭಾಗವಾಗಿ ಮಹಿಳೆಯರು ಮೊಬೈಲ್ ನಲ್ಲಿ ಗುರುತಿನ ಚೀಟಿ (Identity Card)ತೋರಿಸಿದರೂ ಕೂಡ ಅದನ್ನು ಪರಿಗಣಿಸುವಂತೆ ಸಾರಿಗೆ ಇಲಾಖೆ ಸೂಚನೆ ನೀಡಿದೆ.

ಈ ಕುರಿತು ನಿರ್ವಾಹಕರಿಗೆ ಸೂಚನೆ ನೀಡಲಾಗಿದ್ದು, ಕೆಲವೆಡೆ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿದರೆ ಮಾನ್ಯ ಮಾಡುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಪ್ರಯಾಣಿಕರು ಮೊಬೈಲ್ ನಲ್ಲಿ ತೋರಿಸುವ ಯಾವುದಾದರೂ ಅಧಿಕೃತ ಗುರುತಿನ ಚೀಟಿ ಪರಿಗಣಿಸಲು ಸಾರಿಗೆ ಇಲಾಖೆ ನಿರ್ವಾಹಕರಿಗೆ ಸೂಚನೆ ನೀಡಿದೆ. ಈ ಕುರಿತಂತೆ ದೂರುಗಳು ಸ್ವೀಕೃತವಾದರೆ ಇದಕ್ಕೆ ಸಂಬಂಧ ಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ.

ಇದನ್ನೂ ಓದಿ: Ration Card: ಕೊನೆಗೂ ಕ್ಯಾನ್ಸಲ್ ಆದ ರೇಷನ್ ಕಾರ್ಡ್ ಲಿಸ್ಟ್ ಬಿಡುಗಡೆ ಮಾಡಿದ ಸರ್ಕಾರ – ನಿಮ್ಮ ಹೆಸರುಂಟಾ ಎಂದು ಹೀಗೆ ಚೆಕ್ ಮಾಡಿ !!