RDPR ಇಲಾಖೆಯಲ್ಲಿರುವ ವಿವಿಧ ವೃಂದಗಳ ನೇರ ನೇಮಕಾತಿ! 733 ಹುದ್ದೆಗಳು!

Government job news RDPR Recruitment 733 vacancies in Gram panchayat in the state

Share the Article

Gram panchayat job recruitment : ಉದ್ಯೋಗ ಹುಡುಕುತ್ತಿರುವವರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ರಾಜ್ಯದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 733 ಹುದ್ದೆಗಳ (Gram panchayat job recruitment ) ಭರ್ತಿಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ (Job Recruitment) ನವೆಂಬರ್ ಅಂತ್ಯಕ್ಕೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದ್ದು, ಆರ್ ಡಿಪಿಆರ್ ಇಲಾಖೆಯ ವಿವಿಧ ವೃಂಧಗಳ ನೇರನೇಮಕಾತಿ ಮೂಲಕ ಖಾಲಿ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರೇಡ್ 1 ಮತ್ತು ಗ್ರೇಡ್ 2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಸೇರಿ ಒಟ್ಟು 733 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆ.

ಹಲವು ವರ್ಷಗಳಿಂದ ರಾಜ್ಯದಲ್ಲಿ ಕೆಲವು ಕಡೆ ಪಿಡಿಒ ಹುದ್ದೆ ಭರ್ತಿಯಾಗಿಲ್ಲ. ಅಲ್ಲದೇ ಒಬ್ಬ ಪಿಡಿಒಗೆ 2-3 ಪಂಚಾಯಿತಿಗಳ ಜವಾಬ್ದಾರಿ ನೀಡಲಾಗಿದ್ದು, ಸರಕಾರಿ ಕೆಲಸಕ್ಕೂ ಹೊಡೆತ ಬಿದ್ದಿದೆ. ಆದ್ದರಿಂದ ಸದ್ಯ
ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಈ ಹುದ್ದೆಗಳ ಭರ್ತಿಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲ್ಲಿಸಲಾಗಿದ್ದು, ಈ ತಿಂಗಳ ಅಂತ್ಯಕ್ಕೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಈ ಹುದ್ದೆ ಭರ್ತಿ ಪ್ರಕ್ರಿಯೆ ಶುರುವಾದರೆ ಆಕಾಂಕ್ಷಿ ಅಭ್ಯರ್ಥಿ ಗಳಲ್ಲಿ ಹೊಸ ಚೈತನ್ಯ ಮೂಡಲಿದೆ.

ಇದನ್ನೂ ಓದಿ: ರೈತರೇ ಗಮನಿಸಿ- ಬರ ಪರಿಹಾರ ಬೇಕಂದ್ರೆ ತಕ್ಷಣ ಹೀಗೆ ಮಾಡಿ !! ಇನ್ನು ಒಂದೇ ವಾರ ಬಾಕಿ !!

Leave A Reply