BJP Manifesto: ರೈತರಿಗೂ ಗುಡ್ ನ್ಯೂಸ್ ಕೊಟ್ಟ ಬಿಜೆಪಿ- ಇನ್ಮುಂದೆ ಭರ್ಜರಿ ಬೆಲೆಗೆ ಖರೀದಿಯಾಗುತ್ತೆ ನೀವು ಬೆಳೆದ ಈ ಬೆಳೆಗಳು

Political news madhya pradesh polls BJP offers higher msp for wheat and house schemes in MP manifesto

Share the Article

BJP Manifesto: ಮಧ್ಯಪ್ರದೇಶದಲ್ಲಿ ಬಿಜೆಪಿ ಯೂ ಚುನಾವಣೆಗೂ ಮುನ್ನ ತನ್ನ ಪ್ರಣಾಳಿಕೆ ಬಿಡುಗಡೆ (BJP Manifesto) ಮಾಡಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆ ಬಿಡುಗಡೆ ಮಾಡುವ ಮುನ್ನ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿ, ಈ ಪ್ರಣಾಳಿಕೆಯಲ್ಲಿ ಹಲವು ಘೋಷಣೆಗಳನ್ನು ಮಾಡುವ ಮೂಲಕ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಪ್ರಣಾಳಿಕೆ ಪ್ರಕಾರ, ಗೋಧಿಯನ್ನು 2700 ರೂ. ಹಾಗೂ ಭತ್ತವನ್ನು ಕ್ವಿಂಟಲ್‌ಗೆ 3100 ರೂ.ಗೆ ಖರೀದಿಸುವುದಾಗಿ ಬಿಜೆಪಿ ಸರಕಾರ ರೈತರಿಗೆ ಮಾತು ನೀಡಿದೆ. ಇದಲ್ಲದೇ ಈ ಬಾರಿಯ ಪ್ರಣಾಳಿಕೆಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ಸಿಲಿಂಡರ್ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

ಇನ್ನು ಕಿಸಾನ್ ಸಮ್ಮಾನ್ ನಿಧಿ ಮತ್ತು ಕಿಸಾನ್ ಕಲ್ಯಾಣ ಯೋಜನೆಯಡಿ ರೈತರಿಗೆ ವಾರ್ಷಿಕ 12,000 ರೂ.ಗಳ ಲಾಭ ಸಿಗಲಿದೆ ಎಂದು ಸರ್ಕಾರ ಹೇಳಿದೆ. ಇದರ ಹೊರತಾಗಿ ಯಾವುದೇ ಮಧ್ಯ ಪ್ರದೇಶದ ಕುಟುಂಬ ಸೂರಿಲ್ಲದೆ ಉಳಿಯುವುದಿಲ್ಲ ಎಂದು ಭರವಸೆ ನೀಡುವ ಜೊತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ಮುಖ್ಯಮಂತ್ರಿ ಜನ್ ಆವಾಸ್ ಯೋಜನೆಯನ್ನೂ ಆರಂಭಿಸಲಾಗುವುದು ಎಂದು ಬಿಜೆಪಿ ಘೋಷಣೆ ಮಾಡಿದೆ.

ಇದನ್ನೂ ಓದಿ: ಕಾಲು ಒರೆಸೋ ಮ್ಯಾಟ್ ಖರೀದಿಸುವಾಗ ಈ ಜಾಣತನ ಉಪಯೋಗಿಸಿ

Leave A Reply