KHIR CT Job Opportunities: ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ- KHIR CTಯಿಂದ 80, 000 ಸಂಬಳದ ಭರ್ಜರಿ ಉದ್ಯೋಗವಕಾಶ – ಸರ್ಕಾರವೂ ಮಾಡಿದೆ ಒಪ್ಪಂದ !!

KHIR CT Job Opportunities: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣ ಅವಕಾಶವನ್ನು KHIR CTಯಿಂದ (KHIR CT Job Opportunities) ಒದಗಿಸಲಿದ್ದಾರೆ. ಸುಮಾರು 80, 000 ಸಂಬಳದ ಭರ್ಜರಿ ಉದ್ಯೋಗವಕಾಶದ ಒಪ್ಪಂದವನ್ನು ಸರ್ಕಾರವೂ ಮಾಡಿದೆ. ಹೌದು, ಬೆಂಗಳೂರು ಹೊರವಲಯದಲ್ಲಿ ಉದ್ದೇಶಿತ ನಾಲೆಡ್ಜ್‌, ಹೆಲ್ತ್‌ಕೇರ್‌, ಇನ್ನೊವೇಷನ್‌ ಆಯಂಡ್‌ ರಿಸರ್ಚ್‌ ಸಿಟಿ (ಕೆಎಚ್‌ಐಆರ್‌ ಸಿಟಿ) ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಇಂದು ಸಮಗ್ರ ಯೋಜನೆ ಅನಾವರಣಗೊಳಿಸಿದೆ.
ಉದ್ದೇಶಿತ ”ಕೆಎಚ್‌ಐಆರ್‌ ಸಿಟಿ’ಯಲ್ಲಿ 80,000 ಉದ್ಯೋಗಗಳನ್ನು ಸೃಷ್ಟಿಸುವುದರ ಜೊತೆಗೆ ವೈದ್ಯಕೀಯ, ನಾವೀನ್ಯತೆ ಮತ್ತು ಜ್ಞಾನ ಕ್ಷೇತ್ರಗಳಲ್ಲಿ ₹ 40,000 ಕೋಟಿ ಮೊತ್ತದ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಹೊಸ ಹೂಡಿಕೆ ಪ್ರದೇಶವು ಬೆಂಗಳೂರಿನಿಂದ 60 ಕಿಲೋಮೀಟರ್ ವ್ಯಾಪ್ತಿಯಲ್ಲಿ 2,000 ಎಕರೆಗಳಲ್ಲಿ ಅಸ್ತಿತ್ವಕ್ಕೆ ಬರಲಿದ್ದು, ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ‘ಕೆಎಚ್‌ಐಆರ್‌ ಸಿಟಿ’ ಸ್ಥಾಪನೆ ಸಂಬಂಧ ಇಂದು ಇಲ್ಲಿ ನಡೆದ ದುಂಡುಮೇಜಿನ ಸಭೆ ಉದ್ದೇಶಿಸಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಲಭ್ಯ ಅಭಿವೃದ್ಧಿಯ ಗೌರವಾನ್ವಿತ ಸಚಿವರಾದ ಎಂ.ಬಿ.ಪಾಟೀಲ್ ಅವರು ಮಾತನಾಡಿದರು.

‘ಸಾಂಪ್ರದಾಯಿಕ ಗಡಿಗಳನ್ನು ಮೀರಿದ ನಗರ ನಿರ್ಮಿಸಲು ನಾವು ಪರಿವರ್ತನೆಯ ಪಯಣ ಪ್ರಾರಂಭಿಸುತ್ತಿದ್ದೇವೆ. ಪ್ರಚಂಡ ಸಾಮರ್ಥ್ಯ ಹೊಂದಿರುವ ಮನಸ್ಸುಗಳ ಅಪರೂಪದ ಸಮ್ಮಿಳನ ಇದಾಗಿದೆ. ಶ್ರೇಷ್ಠ ಚಿಂತನೆಯ ಮನಸ್ಸುಗಳ ನೆರವಿನಿಂದ ನಾವು ಕೇವಲ ‘ಕೆಎಚ್‌ಆರ್‌ಸಿಟಿ’ ನಿರ್ಮಾಣ ಮಾತ್ರವಲ್ಲದೆ ಶ್ರೇಷ್ಠತೆಯ ಕೇಂದ್ರ ಅಭಿವೃದ್ಧಿಪಡಿಸುವ ಸಾಮರ್ಥ್ಯವನ್ನೂ ಹೊಂದಿದ್ದೇವೆ ಎಂಬುದು ನನ್ನ ನಂಬಿಕೆಯಾಗಿದೆ’ ಎಂದು ಮಾನ್ಯ ಸಚಿವರಾದ ಎಂ.ಬಿ.ಪಾಟೀಲರು ಹೇಳಿದರು.

‘ಈ ಯೋಜನೆಯು, ಜಾಗತಿಕ ಮತ್ತು ಭಾರತದ ಪ್ರತಿಷ್ಠಿತ ಆಸ್ಪತ್ರೆಗಳು ಮತ್ತು ಸಂಶೋಧನಾ ಕೇಂದ್ರಗಳು, ವಿಶ್ವವಿದ್ಯಾಲಯಗಳು ಮತ್ತು ಖಾಸಗಿ ಕಂಪನಿಗಳಿಂದ ಬಂಡವಾಳ ಹೂಡಿಕೆ ಆಕರ್ಷಿಸಲಿದೆ. ದೇಶಿ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಶೇ 8.7ರಷ್ಟು ಕೊಡುಗೆ ನೀಡುತ್ತಿದೆ. ಇಂತಹ ಉಪಕ್ರಮಗಳು ಭಾರತದ ಕೈಗಾರಿಕಾ ಭೂಪಟದಲ್ಲಿ ರಾಜ್ಯದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿವೆ. ಉದ್ಯೋಗ ಸೃಷ್ಟಿಯನ್ನು ಖಾತ್ರಿಪಡಿಸಲಿವೆ. ಹೆಚ್ಚಿದ ಆರ್ಥಿಕ ಚಟುವಟಿಕೆಯಿಂದಾಗಿ ರಾಜ್ಯದ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಕನಿಷ್ಠ ₹ 1 ಲಕ್ಷ ಕೋಟಿ ಮೊತ್ತದ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ” ‘ಕೆಎಚ್‌ಐಆರ್‌ ಸಿಟಿ’ ನಿರ್ಮಾಣ ಸಹಯೋಗದ ಈ ಪ್ರಯತ್ನವು, ಸಮಗ್ರ ಯೋಜನೆ ಹಾಗೂ ಸಕಾಲದಲ್ಲಿ ಕಾರ್ಯಗತಗೊಳಿಸುವ ಆಸಕ್ತ ಸಂಸ್ಥೆಗಳ ಸ್ಪಷ್ಟ ಉದ್ದೇಶವನ್ನು ಒಳಗೊಂಡಿರುತ್ತದೆ. ಎಂದು ಶ್ರೀ ಪಾಟೀಲ್ ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗೌರವಾನ್ವಿತ ಐಟಿ/ಬಿಟಿ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು, ‘ಕೆಎಚ್‌ಐಆರ್ ಸಿಟಿ’ಯು ಆರೋಗ್ಯ ರಕ್ಷಣೆ, ಜ್ಞಾನ ಮತ್ತು ಜಾಗತಿಕ ಸಂಶೋಧನಾ ಕೇಂದ್ರಗಳ ನವೋದ್ಯಮಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುವ ಮೊದಲ ಜ್ಞಾನ ಕೇಂದ್ರವಾಗಿದೆ. ಬೆಂಗಳೂರು ನಗರವು ವಿಶ್ವದ ಕಾಲ್ ಸೆಂಟರ್‌ನಿಂದ ಜಾಗತಿಕ ಸಂಶೋಧನೆ ಮತ್ತು ನಾವೀನ್ಯತೆಯ ಕೇಂದ್ರವಾಗಿ ಬದಲಾಗಲಿದೆ” ಎಂದು ಹೇಳಿದರು.

 

ಇದನ್ನು ಓದಿ: Parliment election: ಬಿಜೆಪಿಯ ಈ ಹಾಲಿ ಸಂಸದರಿಗೆಲ್ಲಾ ಲೋಕಸಭೆ ಟಿಕೆಟ್ ಇಲ್ಲ !!

Leave A Reply

Your email address will not be published.