BJP President BY Vijayendra challenges: ಬಿಜೆಪಿಯ ಹೊಸ ರಾಜ್ಯಾಧ್ಯಕ್ಷರ ಮುಂದಿವೆ ಈ 5 ಮಹಾನ್ ಸವಾಲುಗಳು !!

BJP President BY Vijayendra challenges: ಕರ್ನಾಟಕ ಬಿಜೆಪಿ ಘಟಕಕ್ಕೆ ಬಿಎಸ್‌ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ (BJP President BY Vijayendra challenges) ಆಯ್ಕೆ ಮಾಡಲಾಗಿದ್ದು, ಈವರೆಗೂ ಉಪಾಧ್ಯಕ್ಷರಾಗಿದ್ದ ವಿಜಯೇಂದ್ರ ಅವರು ಇನ್ನು ಅಧ್ಯಕ್ಷ ಸ್ಥಾನ ಪಡೆಯಲಿದ್ದಾರೆ. ಸದ್ಯಕ್ಕೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇರುವ ಪ್ರಮುಖ ಸವಾಲುಗಳೇನು ಎಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಸದ್ಯ ಹೈಕಮಾಂಡ್‌ ಸಾಕಷ್ಟು ಮುಂದಾಲೋಚನೆಯಿಂದ ಮತ್ತೆ ಲಿಂಗಾಯತ ನಾಯಕನನ್ನೆ ರಾಜ್ಯಾಧ್ಯಕ್ಷ ಮಾಡಿದ್ದು, ಬಿಎಸ್‌ ಯಡಿಯೂರಪ್ಪ ತಂದು ಕೊಟ್ಟ ವರ್ಚಸ್ಸನ್ನೆ ಅವರ ಮಗನೂ ತಂದುಕೊಡಬಹುದು ಎಂದು ನಂಬಿಕೊಂಡಿದೆ. ಸದ್ಯ ಬಿವೈ ವಿಜಯೇಂದ್ರ ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಹಲವು ಅಡೆತಡೆಗಳನ್ನು ದಾಟಿಯೇ ಸ್ಥಾನವನ್ನು ಉಳಿಸಿಕೊಂಡು ಪಕ್ಷವನ್ನು ಮುನ್ನಡೆಸಿ ಕಟ್ಟಬೇಕಿದೆ.

ನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು:
ಪಕ್ಷದಲ್ಲಿ ಹಿಡಿತ ಸಾಧಿಸಿಕೊಳ್ಳಲು ಹಿರಿಯರು, ಕಿರಿಯರು ಸೇರಿ ಇತರ ಎಲ್ಲಾ ಮುಖಂಡರ ವಿಶ್ವಾಸ ಅತ್ಯಂತ ಅಗತ್ಯವಾಗಿದೆ. ಸದ್ಯ ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ಭಿನ್ನಮತಗಳಿವೆ. ಎಸ್‌ಟಿ ಸೋಮಶೇಖರ್‌ ಸೇರಿದಂತೆ ಅಪರೇಷನ್‌ ಕಮಲ ನಡೆದ ಸಂದರ್ಭದಲ್ಲಿ ಕಾಂಗ್ರೆಸ್‌ ತೊರೆದು ಬಿಜೆಪಿ ಬಂದವರು ಈಗ ಹಿಂದಿರುಗುವ ಮಾತನಾಡುತ್ತಿದ್ದಾರೆ. ಕರಾವಳಿ ಭಾಗದ ನಾಯಕರಿಗೆ ಅಧ್ಯಕ್ಷ ಸ್ಥಾನ ಕೈತಪ್ಪಿತು ಎಂಬ ಕೊರಗು ಇದೆ. ಈ ಸಂದರ್ಭದಲ್ಲಿ ಎಲ್ಲಾ ನಾಯಕರ ಮನವೊಲಿಸಿಕೊಂಡು ವಿಶ್ವಾಸ ಗಳಿಸಿ ಪಕ್ಷವನ್ನು ಕಟ್ಟಬೇಕಿದೆ.

​​ಲೋಕಸಭೆ ಚುನಾವಣೆ ಟಾರ್ಗೆಟ್‌:
​ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿಗೆ ಮುಂದಿನ ಲೋಕಸಭೆ ಚುನಾವಣೆಯೇ ದೊಡ್ಡ ಗುರಿಯಾಗಿದೆ. ಅಲ್ಲದೇ ಕಳೆದ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆ ಸಂಖ್ಯೆಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಬಿಜೆಪಿಗೆ ಇದೆ. ಕಾಂಗ್ರೆಸ್‌ ಗ್ಯಾರಂಟಿಗಳು, ಪಕ್ಷದಲ್ಲಿನ ಭಿನ್ನಮತ, ಹಿರಿಯ ನಾಯಕರ ನಿವೃತ್ತಿ, ಜೆಡಿಎಸ್‌ ಜತೆಗಿನ ಮೈತ್ರಿ ಸಮನ್ವಯತೆ ಸಾವಲುಗಳನ್ನು ಮೆಟ್ಟಿ ನಿಂತು, ಉಳಿದಿರುವ ನಾಲ್ಕೈದು ತಿಂಗಳಲ್ಲಿ ಮತ್ತೇ ಪಕ್ಷವನ್ನು ಎತ್ತಿಹಿಡಿಯುವ ನಿಲುವು ಬಿವೈ ವಿಜಯೇಂದ್ರ ಅವರ ಮೇಲಿದೆ.

​ಜೆಡಿಎಸ್‌ ಬಿಜೆಪಿ ಮೈತ್ರಿ ನಿಭಾಯಿಸಿ ಆಪರೇಷನ್‌ ಹಸ್ತಕ್ಕೆ ಬ್ರೇಕ್‌ ಹಾಕಬೇಕು​:
ಬಿಜೆಪಿ ಹಾಗೂ ಜೆಡಿಎಸ್‌ ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆ ಮೈತ್ರಿ ಮಾಡಿಕೊಂಡಿವೆ. ಒಂದು ರಾಷ್ಟ್ರೀಯ ಪಕ್ಷ ಮತ್ತೊಂದು ಪ್ರಾದೇಶಿಕ ಪಕ್ಷ. ಅಂತೆಯೇ ಚಿಂತನೆಗಳು, ಕಾರ್ಯಕರ್ತರ ಅಜೆಂಡಗಳು ಭಿನ್ನವಾಗಿವೆ. ಮೈತ್ರಿಯಿಂದ ಗಲಾಟೆಗಳು, ವಾಕ್ಸಮರ, ಕಾರ್ಯಕರ್ತರ ಭಿನ್ನಮತ, ಟಿಕೆಟ್ ಆಯ್ಕೆಗೆ ಕ್ಲಿಷ್ಟ ಸಂದರ್ಭಗಳು ಬರಬಹುದು. ಸದ್ಯ ರಾಜ್ಯಾಧ್ಯಕ್ಷರಾಗಿರುವ ಬಿವೈ ವಿಜಯೇಂದ್ರ ಅವರು ನಿಭಾಯಿಸಬೇಕಿದೆ. ಹಲವು ಬಿಜೆಪಿ ಮಾಜಿ ಶಾಸಕರು ಕಾಂಗ್ರೆಸ್‌ನತ್ತ ಹೋಗುತ್ತಿದ್ದಾರೆ. ಅವರ ಮನವೊಲಿಸಿ ಆಪರೇಷನ್‌ ಹಸ್ತಕ್ಕೆ ಬ್ರೇಕ್‌ ಹಾಕಬೇಕಿದೆ.

ಲಿಂಗಾಯತ ಸಮುದಾಯದ ವಿಶ್ವಾಸಗಳಿಸಿ ಪ್ರಬಲ ನಾಯಕ ಎನ್ನಿಸಿಕೊಳ್ಳಬೇಕು​:
​2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿಗೆ ಜತೆಗಿದ್ದ ಲಿಂಗಾಯತ ಸಮುದಾಯವು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿದೆ ಎಂಬುದನ್ನು 2023 ವಿಧಾನಸಭಾ ಅಂಕಿ ಅಂಶಗಳು ಹೇಳುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಪಕ್ಷ ನಡೆಸಿಕೊಂಡ ರೀತಿ ಲಿಂಗಾಯತ ಸಮುದಾಯದಲ್ಲಿ ಅಸಮಾಧಾಕ್ಕೆ ಕಾರಣವಾಗಿತ್ತು. ಸದ್ಯ ಮತ್ತೆ ಲಿಂಗಾಯತ ಸಮುದಾಯದ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದುಬಂದಿದೆ. ತನ್ನ ತಂದೆಯ ರೀತಿಯೇ ಲಿಂಗಾಯತ ಸಮುದಾಯಕ್ಕೆ ಪ್ರಬಲ ನಾಯಕನಾಗಿ ಬೆಳೆಯಬೇಕಾಗಿದೆ.

​ಅಪ್ಪನ ವರ್ಚಸ್ಸು ಉಳಿಸಿಕೊಳ್ಳಬೇಕಿದೆ:
​ಕರ್ನಾಟಕ ಬಿಜೆಪಿ ಎಂದರೆ ಇಂದಿಗೂ ಬಿಎಸ್‌ ಯಡಿಯೂರಪ್ಪ ಅವರ ಕಾಲವನ್ನು ಹಲವರು ನೆನೆಸಿಕೊಳ್ಳುತ್ತಾರೆ. ಅವರು ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಕಟ್ಟಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದರು. ಆಗಿನ ವರ್ಚಸ್ಸು ಈಗಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಇನ್ನು ಬಿಎಸ್‌ ಯಡಿಯೂರಪ್ಪ ಅವರು ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿಯೇ ಮೆರೆದವರು. ಸದ್ಯ ಅವರ ಪುತ್ರನಾಗಿರುವ ಬಿವೈ ವಿಜಯೇಂದ್ರ ಅವರು ಕೂಡಾ ತಮ್ಮ ತಂದೆಯಂತೆಯೇ ಪಕ್ಷ ಸಂಘಟನೆ ಮಾಡಿ ಸೈ ಎನ್ನಿಸಿಕೊಳ್ಳಬೇಕಾಗಿದೆ.

 

ಇದನ್ನು ಓದಿ: Udupi: ಮಾಜಿ ಶಾಸಕ ರಘುಪತಿ ಭಟ್ ಪತ್ನಿ ಪದ್ಮಪ್ರಿಯ ಆತ್ಮಹತ್ಯೆ ಪ್ರಕರಣ -ಆರೋಪಿಗೆ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Leave A Reply

Your email address will not be published.