PM Kisan yojana: ರೈತರೇ ಗಮನಿಸಿ- ಆದಷ್ಟು ಬೇಗ ಈ ಸುಲಭ ವಿಧಾನದಿಂದ PM ಕಿಸಾನ್ ಯೋಜನೆ ನೋಂದಣಿ ಮಾಡಿಕೊಳ್ಳಿ !!
National news Agriculture news pm kisan samman nidhi yojana registration here is detail
PM Kisan Yojana: ರೈತರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ ಮಾಡಲು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM Kisan Yojana) ಯೋಜನೆಯನ್ನು ಸರ್ಕಾರ ನಡೆಸುತ್ತಿದೆ. ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Yojana) ಫಲಾನುಭವಿಯಾಗಿದ್ದರೆ, ಪಿಎಂ-ಕಿಸಾನ್ 15 ನೇ ಕಂತಿನ ಕುರಿತ ಬಿಗ್ ಅಪ್ಡೇಟ್ ಇಲ್ಲಿದೆ.
ಕೇಂದ್ರ ಸರ್ಕಾರವು(Central Government)ದೇಶಾದ್ಯಂತ ಕೋಟಿಗಟ್ಟಲೆ ರೈತರಿಗೆ 2000 ರೂಪಾಯಿಗಳ ಆರ್ಥಿಕ ನೆರವು ನೀಡುತ್ತಿದ್ದು, ಈ ಯೋಜನೆಯಡಿ, ಪ್ರತಿ ವರ್ಷ 6 ಸಾವಿರ ರೂಪಾಯಿಗಳನ್ನು ರೈತರ ಖಾತೆಗೆ ರವಾನಿಸಲಾಗುತ್ತಿದೆ. ಈ ಮೊತ್ತವನ್ನು ತಲಾ ಎರಡು ಸಾವಿರ ರೂಪಾಯಿಗಳ ಮೂರು ಕಂತುಗಳ ರೂಪದಲ್ಲಿ ರವಾನಿಸಲಾಗುತ್ತಿದೆ.ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 14ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 15ನೇ ಕಂತಿಗಾಗಿ(PM KISAN 15th Installment) ರೈತರು ಎದುರು ನೋಡುತ್ತಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 15 ನೇ ಕಂತನ್ನು ನವೆಂಬರ್ 15 ರಂದು ರೈತರ ಖಾತೆಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಇಚ್ಛಿಸುವ ರೈತರು ಹೇಗೆ ನೋಂದಣಿ ಮಾಡುವುದು ಎಂದು ಯೋಚಿಸುತ್ತಿದ್ದರೆ ಇಲ್ಲಿದೆ ಡೀಟೈಲ್ಸ್!
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 15 ನೇ ನೋಂದಣಿ ಹಂತಗಳು:
* ಮೊದಲನೆಯದಾಗಿ, www.pmkisan.gov.in ಕಿಸಾನ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
* ಇದರ ನಂತರ, ಮುಖಪುಟದಲ್ಲಿ ಹೊಸ ರೈತ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
*ಭಾಷೆಯನ್ನು ಆಯ್ಕೆ ಮಾಡಿ, ಫೀಲ್ಡ್ ಆಯ್ಕೆಯನ್ನು ಆರಿಸಬೇಕು.
* ಇದಾದ ಬಳಿಕ ನೋಂದಣಿ ಆಯ್ಕೆಯನ್ನು ಆರಿಸಿಕೊಳ್ಳಿ.
* ಈಗ ನಿಮ್ಮ ಆಧಾರ್ ಸಂಖ್ಯೆ, ಫೋನ್ ಸಂಖ್ಯೆ ಮತ್ತು ರಾಜ್ಯವನ್ನು ಆಯ್ಕೆ ಮಾಡಿ.
* ಇದಾದ ಬಳಿಕ, ನಿಮ್ಮ ಭೂಮಿಯ ವಿವರಗಳನ್ನು ಭರ್ತಿ ಮಾಡಿ.
* ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅದನ್ನು ಸೇವ್ ಮಾಡಿ.
* ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿದ ನಂತರ ಒಟಿಪಿಗೆ ಹೋಗಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
ರೈತರು ಈ ಯೋಜನೆಯ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಲು, pmkisan-ict@gov.in ಇಮೇಲ್ ಕಳುಹಿಸಬಹುದು. ಇದಲ್ಲದೆ, ರೈತರು ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ 011-23381092 ಅನ್ನು ಸಂಪರ್ಕಿಸಬಹುದಾಗಿದೆ.
ಇದನ್ನೂ ಓದಿ: School Holidays: ನ. 14ಕ್ಕೆ ಮಕ್ಕಳ ದಿನಾಚರಣೆ- ದೀಪಾವಳಿಗೂ ಅಂದೇ ರಜೆ !! ಸರ್ಕಾರದಿಂದ ಬಂತು ಹೊಸ ಸುತ್ತೋಲೆ
ಎಲ್ಲರಿಗೂ ಗೊತ್ತಿರುವ ವಿಷಯವನ್ನು ಮತ್ತೆ ಮತ್ತೆ ಯಾಕೆ ಹೇಳ್ತೀರಿ.