Home Business Fixed Deposits: FD ಮಾಡೋ ಪ್ಲಾನ್ ಉಂಟಾ ?! ಹಾಗಿದ್ರೆ ಭರ್ಜರಿ ಬಡ್ಡಿ ಕೊಡ್ತಿದೆ ಗುರೂ...

Fixed Deposits: FD ಮಾಡೋ ಪ್ಲಾನ್ ಉಂಟಾ ?! ಹಾಗಿದ್ರೆ ಭರ್ಜರಿ ಬಡ್ಡಿ ಕೊಡ್ತಿದೆ ಗುರೂ ಈ ಬ್ಯಾಂಕ್ !!

Fixed Deposit Rates

Hindu neighbor gifts plot of land

Hindu neighbour gifts land to Muslim journalist

Fixed Deposit Rates: ಭಾರತದಲ್ಲಿ ಅತಿಸಾಮಾನ್ಯವಾಗಿ ಬಳಕೆಯಾಗುವ ಸೇವಿಂಗ್ ಸ್ಕೀಮ್ಗಳಲ್ಲಿ (Savings Scheme)ಫಿಕ್ಸೆಡ್ ಡೆಪಾಸಿಟ್ (Fixed Deposit) ಕೂಡ ಒಂದು. ಭಾರತದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಎಸ್‌ಬಿಐ (SBI) ಹಣಕಾಸಿನ ಭದ್ರತೆಯನ್ನು ಉಳಿಸಿಕೊಂಡು ತಮ್ಮ ಉಳಿತಾಯವನ್ನು ಹೆಚ್ಚಿಸಲು ಬಯಸುವ ಮಂದಿಗೆ ಫಿಕ್ಸೆಡ್ ಡೆಪಾಸಿಟ್‌ಗೆ(Fixed Deposit Rates) ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ.

ಬ್ಯಾಂಕ್‌ನಲ್ಲಿ Cumulative ಎಫ್‌ಡಿ Non-cumulative ಎಫ್‌ಡಿ ಎಂಬ 2 ವಿಧಗಳಿದೆ. Cumulative FD ಯಲ್ಲಿ ನೀವು ಅವಧಿಯನ್ನೂ ಆಯ್ಕೆ ಮಾಡಿ ಠೇವಣಿ ಇರಿಸಿ , ಅವಧಿ ಮುಗಿದ ನಂತರ ಬಡ್ಡಿಯೊಂದಿಗೆ ಅಸಲನ್ನು ಹಿಂಪಡೆಯಬಹುದು. ಅದೇ ರೀತಿ, Non-cumulativeನಲ್ಲಿ 3 , 6 ತಿಂಗಳು ಅಥವಾ 1 ವರ್ಷದ ಅವಧಿಗೆ ಬಡ್ಡಿಯನ್ನು ಪಡೆಯುವ ಆಯ್ಕೆಯಿದೆ. ಇಲ್ಲಿ ಸಾಮಾನ್ಯ ಠೇವಣಿದಾರರಿಗೂ ಹಿರಿಯ ನಾಗರಿಕಗರಿಗೂ ಬಡ್ಡಿ ದರದಲ್ಲಿ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬೇಕು.

ಸಾಮಾನ್ಯ ಜನರಿಗೆ ವಾರ್ಷಿಕವಾಗಿ ಶೇಕಡಾ 3 ರಿಂದ 7.1 ವರೆಗೆ ಬಡ್ಡಿದರ ನಿಗದಿ ಮಾಡಲಾಗಿದೆ. ಹಿರಿಯ ನಾಗರಿಕರಿಗೆ ವಾರ್ಷಿಕಾಗಿ ಶೇಕಡಾ 3.5 ರಿಂದ 7.6 ರವರೆಗೆ ಬಡ್ಡಿದರವನ್ನು ನಿಗದಿ ಮಾಡಲಾಗಿದೆ. 7 ದಿನಗಳಿಂದ 10 ವರ್ಷಗಳ ಅವಧಿಯವರೆಗೆ ಅವಧಿ ಅನ್ವಯವಾಗಲಿದೆ.

* ಸಾಮಾನ್ಯ ಜನರಿಗೆ 7 ರಿಂದ 45 ದಿನಗಳ ಅವಧಿಗೆ – ಶೇ 3 ಬಡ್ಡಿದರ
*ಹಿರಿಯ ನಾಗರಿಕರಿ- ಗೆ ಶೇ 3.50 ಬಡ್ಡಿದರ
* ಸಾಮಾನ್ಯರಿಗೆ 45 ರಿಂದ 179 ದಿನಗಳ ಅವಧಿಗೆ – ಶೇ 4.50 ಬಡ್ಡಿ ದರ, ಹಿರಿಯ ನಾಗರಿಕರಿಗೆ – ಶೇ 5.00 ಬಡ್ಡಿದರ
* 180 ರಿಂದ 210 ದಿನಗಳ ಅವಧಿಯಲ್ಲಿ ಸಾಮಾನ್ಯ ಜನರಿಗೆ – ಶೇ 5.25 ಬಡ್ಡಿ ದರ
* 180 ರಿಂದ 210 ದಿನಗಳ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ಶೇ 5.75 ರಷ್ಟು ಬಡ್ಡಿದರ
* 3 ವರ್ಷದ ಅವಧಿಯಲ್ಲಿ ಸಾಮಾನ್ಯರಿಗೆ ಶೇ 6.50 ಬಡ್ಡಿದರ
* 3 ವರ್ಷದ ಅವಧಿಯಲ್ಲಿ ಹಿರಿಯ ನಾಗರಿಕರಿಗೆ ಶೇ 7.00 ಬಡ್ಡಿ ದರ
* 5 ರಿಂದ 10 ವರ್ಷದ ಅವಧಿಗೆ ಸಾಮಾನ್ಯರಿಗೆ ಶೇ 6.50 ಬಡ್ಡಿದರ
* 5 ರಿಂದ 10 ವರ್ಷದ ಅವಧಿಗೆ ಹಿರಿಯ ನಾಗರಿಕರಿಗೆ ಶೇ 7.50 ಬಡ್ಡಿದರ ಇರಲಿದೆ.

ಇದನ್ನೂ ಓದಿ: Love Cheating: ಪ್ರೀತಿ ಹೆಸರೇಳಿ ಮಂಚ ಹತ್ತಿಸಿದ – ಮದ್ವೆ ಆಗ್ತೀನಂತ ಮಂಟಪಕ್ಕೆ ಬರೋವಾಗ್ಲೇ ಎಸ್ಕೇಪ್ ಆದ !! ಇಲ್ಲಿದೆ ಪಾಗಲ್ ಪ್ರೇಮಿಯ ಪ್ರೇಮ್ ಕಹಾನಿ !!