Baba Vanga Predictions: ಭಯಾನಕ ಭವಿಷ್ಯ ನುಡಿದ ಬಾಬಾ ವಂಗಾ, ಸೈಬರ್‌ ದಾಳಿ ಬಗ್ಗೆ ಎಚ್ಚರಿಕೆ!!

Baba vanga prediction 2024 about danger to Putin life latest news

 

 

Baba Vanga Predictions: ಬಾಬಾ ವಂಗಾ ಅವರ 2024 ರ ಭವಿಷ್ಯವಾಣಿಯ ಪ್ರಕಾರ, ನೈಸರ್ಗಿಕ ವಿಕೋಪಗಳು ಸೇರಿದಂತೆ ಅನೇಕ ಘಟನೆಗಳು 2024 ರಲ್ಲಿ ಸಂಭವಿಸಲಿವೆ ಇದೆ ಎಂದು ಸೂಚನೆ ನೀಡಿದ್ದಾರೆ.

ಬಾಬಾ ವೆಂಗಾ ಅವರ ಭವಿಷ್ಯವಾಣಿಯ (Baba Vanga Predictions) ಪ್ರಕಾರ, 2024 ರಲ್ಲಿ ದೊಡ್ಡ ಜಾಗತಿಕ ಬಿಕ್ಕಟ್ಟು ಸಂಭವಿಸಬಹುದು. ಇದರಲ್ಲಿ ಸಾಲದ ಪ್ರಮಾಣ ಹೆಚ್ಚಾಗಲಿದೆ. ಭೂಮಿಗೆ ಸಂಬಂಧಿಸಿದಂತೆ ಉದ್ವಿಗ್ನತೆಯೂ ಇರಬಹುದು, ಇದು ಜಾಗತಿಕ ಆರ್ಥಿಕತೆಯನ್ನು ಅಲುಗಾಡಿಸುತ್ತದೆ ಎಂದಿದ್ದಾರೆ.

ಬಾಬಾ ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ ಭೂಮಿಯ ಕಕ್ಷೆಯಲ್ಲಿ ಬದಲಾವಣೆ ಆಗಬಹುದು. ಇದು ಸಾಮಾನ್ಯವಾಗಿ ದೀರ್ಘಕಾಲದವರೆಗೆ ಸಂಭವಿಸುತ್ತದೆ. ಆದರೆ, ಶೀಘ್ರದಲ್ಲೇ ಈ ಬದಲಾವಣೆ ಕಂಡುಬಂದರೆ ಭೀಕರ ಪ್ರಕೃತಿ ವಿಕೋಪ ಸಂಭವಿಸಬಹುದು.

ವೆಂಗಾ ಪ್ರಕಾರ, 2024 ರಲ್ಲೂ ಸೈಬರ್ ದಾಳಿ ಸಂಭವಿಸಬಹುದು. ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಘಟಕಗಳ ಮೇಲೆ ದಾಳಿ ಮಾಡಬಹುದು. ಇದರಿಂದಾಗಿ ರಾಷ್ಟ್ರೀಯ ಭದ್ರತೆಗೆ ದೊಡ್ಡ ಅಪಾಯವಿದೆ.

ವೆಂಗಾ ಅವರ ಭವಿಷ್ಯವಾಣಿಯ ಪ್ರಕಾರ, 2024 ವರ್ಷವು ವೈದ್ಯಕೀಯ ಕ್ಷೇತ್ರಕ್ಕೆ ತುಂಬಾ ಒಳ್ಳೆಯದು. ವೈದ್ಯಕೀಯ ಕ್ಷೇತ್ರದಲ್ಲಿ, ಕ್ಯಾನ್ಸರ್ ಕಾಯಿಲೆಗಳಿಗೆ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿಯಬಹುದು.

ಬಾಬಾ ವೆಂಗಾ ಪ್ರಕಾರ, 2024 ರ ವರ್ಷವು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅಪಾಯಕಾರಿ ಎಂದಿದ್ದಾರೆ. ಅವರ ಸ್ವಂತ ದೇಶದವರು ಅವರ ಮೇಲೆ ದಾಳಿ ಮಾಡಬಹುದು.

ಇದನ್ನೂ ಓದಿ: SSLC ವಿದ್ಯಾರ್ಥಿಗಳೇ ಗಮನಿಸಿ- ಪರೀಕ್ಷೆ ಕುರಿತು ಸರ್ಕಾರದಿಂದ ಹೊರಬಿತ್ತು ಬಿಗ್ಅಪ್ಡೇಟ್!!

Leave A Reply

Your email address will not be published.