KPSCಯಿಂದ 30 ಇಲಾಖೆಗಳ 3 ಸಾವಿರ ಹುದ್ದೆಗಳಿಗೆ ನೇಮಕಾತಿ!!!

Govt job news KPSC Recruitment for 3000 Posts in 30 Departments

Share the Article

KPSC recruitment : ಕರ್ನಾಟಕ ಲೋಕಸೇವಾ ಆಯೋಗ 30 ಇಲಾಖೆಗಳ 3000 ಹುದ್ದೆಗಳಿಗೆ ನೇಮಕಾತಿ(KPSC recruitment ) ಪ್ರಕ್ರಿಯೆ ನಡೆಸಲಿದೆ ಎಂದು ವರದಿಯಾಗಿದೆ. ಮುಂದಿನ ವರ್ಷ ನೇಮಕಾತಿ ಪ್ರಕ್ರಿಯೆ ಕೈಗೊಳ್ಳುವ ಸಂಬಂಧ ಅಂದಾಜು ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿರುವ ಕುರಿತು ಮಾಧ್ಯಮವೊಂದು ವರದಿ ಮಾಡಿದೆ.

ಮೂರು ಸಾವಿರ ಹುದ್ದೆಗಳು ಬಾಕಿ ಇದ್ದು, ವಿವಿಧ ಹಂತದ ಹುದ್ದೆಗಳಿಗೆ ನೇಮಕಾತಿ ಮಾಡಿಕೊಡಲು 30 ಇಲಾಖೆಗಳಿಂದ ಪ್ರಸ್ತಾವನೆ ಬಂದಿದೆ. ಈ ಹುದ್ದೆಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ವರ್ಷಾಂತ್ಯಕ್ಕೆ ನಡೆಸಬೇಕಾಗಿರುವ ನೇಮಕಾತಿ ವೇಳಾಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಕೆಪಿಎಸ್‌ಸಿ ಅರ್ಜಿ ಆಹ್ವಾನ, ಪರೀಕ್ಷೆ, ಫಲಿತಾಂಶ, ಆಯ್ಕೆ ಪಟ್ಟಿ ಚಟುವಟಿಕೆಗಳನ್ನು ನಿಗದಿ ಪ್ರಕಾರ ಕಾಲಮಿತಿಯಲ್ಲಿ ಮುಗಿಸಬೇಕಿದೆ. ಈ ಕುರಿತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಕೆ.ಎಸ್‌.ಲತಾ ಕುಮಾರಿ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್ – ಕೃಷಿ ಸಚಿವರಿಂದ ಹೊಸ ಆದೇಶ !!

Leave A Reply