Supreme Court Warns: ತ್ಯಾಜ್ಯ ವಿಲೇವಾರಿ ಕುರಿತು ಸುಪ್ರೀಂ ನಿಂದ ಬಂತು ಮಹತ್ವದ ಆದೇಶ

Supreme Court Warns: ಎನ್‌ಸಿಆರ್‌ ಭಾಗದಲ್ಲಿ ತೀವ್ರ ಹೆಚ್ಚಾಗಿರುವ ವಾಯುಮಾಲಿನ್ಯದ ಬಗ್ಗೆ ಗಾಬರಿ ವ್ಯಕ್ತಪಡಿಸಿರುವ ದೆಹಲಿ ಸುಪ್ರೀಂ ಕೋರ್ಟ್ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಬೆಳೆ ಅವಶೇಷ ಸುಡುವುದನ್ನು ತಕ್ಷಣ ನಿಲ್ಲಿಸುವಂತೆ ಆದೇಶ (Supreme Court Warns)ನೀಡಿದೆ.

ಸಂಜಯ್‌ ಕಿಶನ್‌ ಕೌಲ್ ಹಾಗೂ ಸುದಾಂಶು ದುಲಿಯಾ ಅವರಿದ್ದ ಪೀಠ, ವರ್ಷದಿಂದ ವರ್ಷಕ್ಕೆ ದೆಹಲಿಯನ್ನು ಮತ್ತಷ್ಟು ಹದಗೆಡುವುದಕ್ಕೆ ಬಿಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, “ದೆಹಲಿ ವಾಯು ಮಾಲಿನ್ಯವನ್ನು ಪ್ರತಿ ಬಾರಿಯೂ ರಾಜಕೀಯ ಚರ್ಚೆಯಾಗಿಸಲು ಸಾಧ್ಯವಿಲ್ಲ. ಈ ವಾಯುಗುಣಮಟ್ಟದ ಕುಸಿತವು ‘ಜನರ ಆರೋಗ್ಯದ ಹತ್ಯೆ” ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

“ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುವುದೇ ಪ್ರತಿ ಚಳಿಗಾಲದಲ್ಲಿ ದೆಹಲಿಯ ವಾಯುಮಾಲಿನ್ಯಕ್ಕೆ ಕಾರಣವಾಗಿದೆ. ಕೃಷಿ ತ್ಯಾಜ್ಯ ಸುಡುವುದು ನಿಲ್ಲಬೇಕು. ನೀವು ಅದನ್ನು ಯಾವ ರೀತಿ ಮಾಡುತ್ತೀರೋ ಗೊತ್ತಿಲ್ಲ. ನಿಲ್ಲಿಸಬೇಕಿರುವುದು ನಿಮ್ಮ ಕೆಲಸ. ಏನಾದರೂ ತಕ್ಷಣ ಮಾಡಬೇಕು” ಎಂದು ನಾಲ್ಕು ರಾಜ್ಯಗಳಿಗೆ ಸರ್ಕಾರಕ್ಕೆ ಸೂಚಿಸಿದೆ.

“15 ವರ್ಷಗಳ ಹಿಂದೆ ಈ ಪ್ರಮಾಣದ ಬೆಳೆ ಬೆಳೆಯದ ಕಾರಣ ಈ ಸಮಸ್ಯೆ ಉದ್ಭವಿಸಲಿಲ್ಲ. ಈ ರೀತಿ ಬೆಳೆ ಬೆಳೆಯುವುದು, ಪಂಜಾಬ್‌ನ ನೀರಿನ ಮಟ್ಟವನ್ನು ನಾಶಪಡಿಸಿದೆ ಮತ್ತು ದೆಹಲಿಯ ಸುತ್ತಮುತ್ತಲಿನ ಹವಾಮಾನದ ಮೇಲೆ ಅದು ಪರಿಣಾಮ ಬೀರುತ್ತದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಪಂಜಾಬ್​ನ 20 ಸಾವಿರಕ್ಕೂ ಅಧಿಕ ಕಡೆಗಳಲ್ಲಿ ಹುಲ್ಲು ಸುಡುವ ಪ್ರಕರಣಗಳು ವರದಿಯಾಗಿದೆ. ಇದರಿಂದಾಗಿ ಪಂಜಾಬ್​ ಹಾಗೂ ದೆಹಲಿಯ ಹಲವು ನಗರಗಳ ವಾಯು ಗುಣಮಟ್ಟ ಸೂಚ್ಯಂಕ ತೀರ ಕಳಪೆ ಮಟ್ಟವನ್ನು ತಲುಪಿದೆ.

ಇನ್ನು ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದ್ದು, ಸಾರ್ವಜನಿಕ ಯೋಜನೆಗಳಿಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳನ್ನು ಮತ್ತು ಟ್ರಕ್‌ಗಳು ಹಾಗೂ ವಾಣಿಜ್ಯ ಬಳಕೆ ನಾಲ್ಕು ಚಕ್ರಗಳ ವಾಹನಗಳು ರಾಷ್ಟ್ರ ರಾಜಧಾನಿ ಪ್ರವೇಶಿಸುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

 

ಇದನ್ನು ಓದಿ:  Karnataka High Court: ಜನನ-ಮರಣ ತಿದ್ದುಪಡಿ ಕಾಯ್ದೆ- ಕೇಂದ್ರದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ತಡೆ !!

Leave A Reply

Your email address will not be published.