Pan Card: ಮಹಿಳೆಯರೇ ‘ಪಾನ್ ಕಾರ್ಡ್’ನಲ್ಲಿ ಗಂಡನ ಹೆಸರು ಸೇರಿಸಲು ಹೀಗೆ ಮಾಡಿ !!

How can married women include husband name in pan card details

 

 

PAN Card: ಪ್ಯಾನ್‌ ಕಾರ್ಡ್ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ ಪ್ರಮುಖ ದಾಖಲೆಯಾಗಿದೆ.ಬ್ಯಾಂಕ್ ಖಾತೆ ತೆರೆಯಲು, ಸಾಲ ಪಡೆಯಲು ಐಟಿಆರ್ ಸಲ್ಲಿಕೆಗೆ ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಪ್ಯಾನ್ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ತೆರಿಗೆ ಪಾವತಿ ಮಾಡುವವರಿಗೆ ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದ್ದು, ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಪಾವತಿ ಸಂದರ್ಭ ತೊಡಕು ಉಂಟಾಗುವುದು ನಿಶ್ಚಿತ. ಹೀಗಾಗಿ, ಪ್ಯಾನ್ ಕಾರ್ಡ್ನಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ದಾಖಲಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್ನಲ್ಲಿ ಮಾಹಿತಿಯನ್ನು ತಪ್ಪಾಗಿ ನಮೂದಿಸಿದರೆ, ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮದುವೆಯ ಬಳಿಕ ಹೆಚ್ಚಿನ ಹುಡುಗಿಯರು ತಮ್ಮ ಉಪನಾಮವನ್ನು ಬದಲಾಯಿಸುವುದು ಸಹಜ. ಈ ಪರಿಸ್ಥಿತಿಯಲ್ಲಿ ಮಹಿಳೆಯರು ತಮ್ಮ ಎಲ್ಲಾ ದಾಖಲೆಗಳಲ್ಲಿ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಪ್ಯಾನ್ ಕಾರ್ಡ್ನಲ್ಲಿ ಮದುವೆಯ ಬಳಿಕ ನಿಮ್ಮ ಉಪನಾಮವನ್ನು ಬದಲಾಯಿಸಲು ನೀವು ಬಯಸಿದರೆ, ನಾವು ಉಲ್ಲೇಖಿಸಿದ ಹಂತಗಳನ್ನು ಅನುಸರಿಸುವ ಮುಖಾಂತರ ನಿಮ್ಮ ಕೆಲಸವನ್ನು ಸುಲಭಗೊಳಿಸಬಹುದು. ಹೀಗಾಗಿ, ಪ್ಯಾನ್ ಕಾರ್ಡ್ನಲ್ಲಿ ಉಪನಾಮವನ್ನು ಬದಲಾಯಿಸುವ ಸುಲಭ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಬೇಕು.

ಮದುವೆಯ ಬಳಿಕ ನಿಮ್ಮ ವಿಳಾಸ ಮತ್ತು ಉಪನಾಮವನ್ನು ಹೇಗೆ ಬದಲಾಯಿಸಬಹುದು?
ಮದುವೆಯ ಬಳಿಕ ಪ್ಯಾನ್ ಕಾರ್ಡ್ನಲ್ಲಿ ವಿಳಾಸ ಮತ್ತು ಉಪನಾಮವನ್ನು ಬದಲಾಯಿಸಲು https://www.onlineservices.nsdl.com/paam/endUserRegisterContact.html ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಮಾಡಿದ ನಂತರ, ನೀವು ನಿಮ್ಮ ಮುಂದೆ ಪಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ. ಇಲ್ಲಿ ನೀಡಲಾದ ನಮೂನೆಯಲ್ಲಿ ನೀವು ಬಯಸಿದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು. ಫಾರ್ಮ್ ಅನ್ನು ಭರ್ತಿ ಮಾಡಿದ ಬಳಿಕ ಆನ್ ಲೈನ್ ನಲ್ಲಿ ಸಲ್ಲಿಸಬೇಕು.ನೀವು ನಿಮ್ಮ ಹೆಸರಿನ ಮುಂದೆ ಮಾಡಿದ ಸೆಲ್ ಅನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮ್ಮ ಪ್ಯಾನ್ ಅನ್ನು ನಮೂದಿಸಬೇಕು.ಆ ಬಳಿಕ ಮೇಲಿನ ಮಾಹಿತಿಯನ್ನು ಪರಿಶೀಲಿಸಬೇಕಾಗಿದ್ದು, ಅಂತಿಮವಾಗಿ, ನೀವು ಅದನ್ನು ಸಲ್ಲಿಸಬೇಕಾಗುತ್ತದೆ.

 

ಇದನ್ನು ಓದಿ: NPS New Rule​: NPS ಅಧೀನದಲ್ಲಿರೋ ಉದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ – ಸಿಗಲಿದೆ ನಿಮಗೆ ಈ ಎಲ್ಲಾ ಪ್ರಯೋಜನಗಳು !!

Leave A Reply

Your email address will not be published.