Heart Attack: ರೋಗಿಗಳನ್ನು ಪರೀಕ್ಷಿಸುತ್ತಿದ್ದ 34 ವರ್ಷದ ವೈದ್ಯ ಹೃದಯಾಘಾತದಿಂದ ಸಾವು !!

Share the Article

Heart Attack: ಹಠಾತ್ ಆಗಿ ಹೃದಯಾಘಾತಕ್ಕೆ (Heart Attack) ಒಳಗಾಗಿ ಸಾವು ಕಾಣುವ ಪ್ರಕರಣಗಳು ನಾವು ಇಂದು ಹೆಚ್ಚಾಗಿ ಕಾಣಬಹುದು. ಅದೇ ರೀತಿ ರಾಯಚೂರು ಜಿಲ್ಲೆಯ ಸಿಂಧನೂರು ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ ಸಾವಿರಾರು ಜೀವ ಕಾಪಾಡಿದ ವೈದ್ಯರೊಬ್ಬರು ಕೂಡ ಅದೇ ರೀತಿಯ ಸಾವಿನಿಂದಾಗಿ ಕೊನೆಯುಸಿರೆಳೆದಿದ್ದಾರೆ.

34 ವರ್ಷದ ವೈದ್ಯ ಚಂದ್ರಶೇಖರ ಮಾದಿನೂರು ಇವರು ಇಂದು ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಈ ಸಾವು ಸಂಭವಿಸಿದೆ. ಎಂದಿನಂತೆ ಆಸ್ಪತ್ರೆಗೆ ಕರ್ತವ್ಯ ನಿರ್ವಹಿಸಲು ಬಂದಿದ್ದ ಡಾ. ಚಂದ್ರಶೇಖರ, ಬೆಳಗ್ಗೆ ರೋಗಿಗಳನ್ನು ಪರೀಕ್ಷೆ ಮಾಡಿ, ಸಲಹೆ-ಸೂಚನೆಗಳನ್ನು ನೀಡಿ ಚಿಕಿತ್ಸೆ ಒದಗಿಸಿದ್ದರು. ಆ ಬಳಿಕ ಅವರು ಆಸ್ಪತ್ರೆಯಲ್ಲಿ ಮಹಡಿಗೆ ಹತ್ತುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಆದರೆ ಎದೆನೋವು ಕಾಣಿಸಿದ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

 

ಇದನ್ನು ಓದಿ: ಇನ್ನೂ ಅನ್ನಭಾಗ್ಯದ ದುಡ್ಡು ಕೈ ಸೇರಿಲ್ವಾ?! ಬೇಗ ಇದೊಂದು ಕೆಲಸ ಮಾಡಿ, ತಕ್ಷಣ ಖಾತೆಗೆ ಜಮಾ ಆಗುತ್ತೆ ಹಣ !!

Leave A Reply