Baba Vanga Predictions:ಪ್ರಾಣ ತೆಗೆಯೋ ಆ ರೋಗಕ್ಕೂ ಉಂಟು ಮದ್ದು – ಆದ್ರೂ ಜನ ಬದುಕಲ್ಲ !! ಅಬ್ಬಬ್ಬಾ ಈ ಭವಿಷ್ಯ ನುಡಿದದ್ದು ಯಾರು ಗೊತ್ತಾ ?!
Baba vanga predictions about cyber attack and natural disasters latest news
Baba Vanga Predictions: ಬಾಬಾ ವಂಗಾ (Baba Vanga)1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ್ದು, ಇವರ ನೈಜ ಹೆಸರು ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ. ಅವರು ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡಿದ್ದು,ಆ ಬಳಿಕ ಭವಿಷ್ಯವನ್ನು(Baba Vanga Predictions) ಹೇಳಲು ಪ್ರಾರಂಭಿಸಿದ್ದಾರೆ. ಅವರು ಹೇಳಿದ ಶೇಕಡಾ 80 ರಷ್ಟು ಭವಿಷ್ಯವಾಣಿ ನಿಜವಾಗಿದೆ.
ಬಾಬಾ ವಂಗಾ ಭವಿಷ್ಯದಲ್ಲಿ ನಡೆಯುವ ಬಹುತೇಕ ಸಂಗತಿಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. 2024 ರಲ್ಲಿ ಹವಾಮಾನದಲ್ಲಿ ಹಾನಿ ಉಂಟಾಗುತ್ತದೆ. ಇದಲ್ಲದೆ, ನೈಸರ್ಗಿಕ ವಿಕೋಪಗಳು(Natural Disasters)ಸಂಭವಿಸಲಿದ್ದು, ಹವಾಮಾನ ಬದಲಾವಣೆಯು ವಿಕಿರಣ ಮಟ್ಟವನ್ನು ಕೂಡ ಹೆಚ್ಚಿಸುತ್ತದೆ. ಇದರ ಜೊತೆಗೆ ಸೈಬರ್ ದಾಳಿ(Cyber Attack)ಮತ್ತು ಹ್ಯಾಕಿಂಗ್ ಘಟನೆಗಳು ಹೆಚ್ಚಾಗಲಿವೆ. ಪವರ್ ಗ್ರಿಡ್ ಮತ್ತು ನೀರು ಸಂಸ್ಕರಣಾ ಘಟಕಗಳನ್ನು ಹ್ಯಾಕ್ ಮಾಡಲು ಪ್ರಯತ್ನ ನಡೆಯಲಿದೆ.
ಇದರ ನಡುವೆ, ವಿಜ್ಞಾನ ಕ್ಷೇತ್ರದಲ್ಲಿ ಶುಭ ಸುದ್ದಿ ಬರಲಿದ್ದು,ಇದು ಮಾನವ ಜೀವನದ ಮೇಲೆ ಪರಿಣಾಮ ಬೀರಲಿದೆ. ಅಷ್ಟೆ ಅಲ್ಲದೇ, ಅಲ್ಝೈಮರ್ ಕಾಯಿಲೆಗೆ ಮದ್ದು ದೊರೆಯಲಿದ್ದು, ಈ ವರ್ಷ ಕ್ಯಾನ್ಸರ್ ರೋಗಕ್ಕೂ ವಿಜ್ಞಾನಿಗಳು ಮದ್ದು ಕಂಡು ಹಿಡಿಯಲಿದ್ದಾರೆ. ಮತ್ತೊಂದು ಭವಿಷ್ಯವಾಣಿಯ ಅನುಸಾರ, 2024 ರಲ್ಲಿ ಇಡೀ ಜಗತ್ತು ಕತ್ತಲೆಯಾಗಲಿದ್ದು, ವಿದೇಶಿಗರು ಭೂಮಿಯ ಮೇಲೆ ದಾಳಿ ನಡೆಸಬಹುದು.ಇದಲ್ಲದೆ, ಲಕ್ಷಗಟ್ಟಲೆ ಜನ ಸಾಯುವ ಮುನ್ಸೂಚನೆ ಕೂಡ ಇದೆ.