Home Business Deepavali Gift: ಈ ಕಂಪೆನಿಯ ಉದ್ಯೋಗಿಗಳಿಗೆ ಬಂಪರ್ ಲಾಟ್ರಿ – ದೀಪಾವಳಿಗೆ ಸಿಗ್ತಿದೆ ಕಾರು,...

Deepavali Gift: ಈ ಕಂಪೆನಿಯ ಉದ್ಯೋಗಿಗಳಿಗೆ ಬಂಪರ್ ಲಾಟ್ರಿ – ದೀಪಾವಳಿಗೆ ಸಿಗ್ತಿದೆ ಕಾರು, ಬೈಕ್ ಗಿಫ್ಟ್!!

Hindu neighbor gifts plot of land

Hindu neighbour gifts land to Muslim journalist

Diwali Gift : ದೀಪಾವಳಿ ಹಬ್ಬದ(Diwali Gift) ಸಮಯದಲ್ಲಿ ಹೆಚ್ಚಿನ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ಉಡುಗೊರೆಗಳು ಸಿಹಿತಿಂಡಿಗಳಿಂದ ಹಿಡಿದು ಗೃಹೋಪಯೋಗಿ ವಸ್ತುಗಳವರೆಗೆ ಅನೇಕ ವಸ್ತುಗಳನ್ನು ಉಡುಗೊರೆ ರೂಪದಲ್ಲಿ ನೀಡುವುದಿದೆ. ಈ ಕಂಪೆನಿಯ ಉದ್ಯೋಗಿಗಳಿಗೆ ಬಂಪರ್ ಲಾಟ್ರಿ ಹೊಡೆದಿದ್ದು, ದೀಪಾವಳಿಗೆ ಕಾರು, ಬೈಕ್ ಗಿಫ್ಟ್ ಆಗಿ ಸಿಗಲಿದೆ.

ಹರಿಯಾಣ (Haryana) ದ ಪಂಚಕುಲದಲ್ಲಿರುವ ಮಿಟ್ಸ್‌ಕಾರ್ಟ್ ಫಾರ್ಮಾಸ್ಯುಟಿಕಲ್ ಕಂಪನಿ ತನ್ನ ಉದ್ಯೋಗಿ (Employee) ಗಳಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದೆ. ಈ ಕಂಪನಿ ತನ್ನ 12 ಅತ್ಯುತ್ತಮ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ (Gift) ಯಾಗಿ 7 ಲಕ್ಷ ರೂಪಾಯಿ ಮೌಲ್ಯದ ಟಾಟಾ ಪಂಚ್ ಕಾರನ್ನು ನೀಡಿದೆ. ಕಂಪನಿಯ ಮಾಲೀಕರಿಂದ ಈ ಅದ್ಭುತ ದೀಪಾವಳಿ ಉಡುಗೊರೆಯನ್ನು ಪಡೆದ ನೌಕರರು ಫುಲ್ ಖುಷ್ ಆಗಿದ್ದಾರೆ. ಮತ್ತೊಂದೆಡೆ, ಮತ್ತೊಂದು ಕಂಪನಿ ಉದ್ಯೋಗಿಗಳಿಗೆ ಬೈಕ್ ಉಡುಗೊರೆ ನೀಡಿದೆ.

ತಿರುಪ್ಪೂರಿನ ವಂಜಿಪಾಳ್ಯಂ ಮೂಲದ ಪಿ ಶಿವಕುಮಾರ್ ಅವರು 190 ಎಕರೆ ಟೀ ಎಸ್ಟೇಟ್ ಮತ್ತು ಕೋಟಗಿರಿ ಬಳಿಯ 315 ಎಕರೆ ಆಸ್ತಿಯಲ್ಲಿ ತರಕಾರಿ ಮತ್ತು ಹೂವಿನ ತೋಟವನ್ನು ಒಳಗೊಂಡಿದ್ದು, ಈ ಎಸ್ಟೇಟ್ ನಲ್ಲಿ ಒಟ್ಟು 627 ನೌಕರರು ಕೆಲಸ ಮಾಡುತ್ತಿದ್ದಾರಂತೆ. ಈ ನೀಲಗಿರಿ ಎಸ್ಟೇಟ್ ಮಾಲೀಕರು ತಮ್ಮ ಉದ್ಯೋಗಿಗಳಿಗೆ ತಮ್ಮ ಆಯ್ಕೆಯ ದ್ವಿಚಕ್ರ ವಾಹನಗಳು, LCD ಟಿವಿಗಳು ಮತ್ತು ನಗದು ಬೋನಸ್ ಅನ್ನು ಉಡುಗೊರೆಯಾಗಿ ನೀಡುವ ಮೂಲಕ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಶಿವಕುಮಾರ್ ಕಳೆದ ಐದು ವರ್ಷಗಳಿಂದ ಗೃಹೋಪಯೋಗಿ ಉಪಕರಣಗಳು ಮತ್ತು ನಗದು ಬೋನಸ್‌ಗಳನ್ನು ಉಡುಗೊರೆಯಾಗಿ ನೀಡುತ್ತಿದ್ದರು. ಈ ಬಾರಿ ಮ್ಯಾನೇಜರ್, ಸೂಪರ್ ವೈಸರ್, ಸ್ಟೋರ್ ಕೀಪರ್, ಕ್ಯಾಷಿಯರ್, ಫೀಲ್ಡ್ ಸ್ಟಾಫ್, ಡ್ರೈವರ್ ಗಳಂತಹ 15 ಉದ್ಯೋಗಿಗಳಿಗೆ ತಲಾ 2 ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಖರೀದಿ ಮಾಡಿ ಉಡುಗೊರೆ ರೂಪದಲ್ಲಿ ನೀಡಲಾಗಿದೆಯಂತೆ.

ಇದನ್ನೂ ಓದಿ: ಹೆಣ್ಣು ಹೆತ್ತವರಿಗೆ ಖುಷಿ ಸುದ್ದಿ- ಮದುವೆಗಾಗಿ ಸರ್ಕಾರವೇ ನೀಡುತ್ತೆ 27ಲಕ್ಷ !! ಆದ್ರೆ ಈ ಕೆಲಸ ಮಾಡಿದ್ರೆ ಮಾತ್ರ