Bhagyalakshmi scheme: ಗೃಹಲಕ್ಷ್ಮೀ ಬೆನ್ನಲ್ಲೇ ‘ಭಾಗ್ಯಲಕ್ಷ್ಮೀ’ ಫಲಾನುಭವಿಗಳಿಗೆ ಭರ್ಜರಿ ಸುದ್ದಿ- ಈ ತಿಂಗಳು ಖಾತೆ ಸೇರಲಿದೆ ಮೊದಲ ಕಂತಿನ ಹಣ !!
Karnataka news good news for bhagyalakshmi beneficiaries first installment to be credited on this date
Bhagyalakshmi scheme : ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಜನಿಸಿದ ಇಬ್ಬರು ಹೆಣ್ಣುಮಕ್ಕಳಿಗೆ 2006-07ರಲ್ಲಿ ಅಂದಿನ ಮುಖ್ಯಮಂತ್ರಿ ಯಾಗಿದ್ದ ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಜಾರಿಗೊಳಿಸಿತ್ತು.’ಭಾಗ್ಯಲಕ್ಷ್ಮಿ ಯೋಜನೆ’ ಯ ಫಲಾನುಭವಿಗಳಿಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಭಾಗ್ಯಲಕ್ಷ್ಮೀ ಬಾಂಡ್ ಗೆ (Bhagyalakshmi scheme) 18 ವರ್ಷ ಆಗಲಿರುವ ಹಿನ್ನೆಲೆ ಈ ಯೋಜನೆಯ ಮೊದಲ ತಂಡದ ಫಲಾನುಭವಿಗಳಿಗೆ ಖಾತೆಗೆ ಹಣ ಜಮೆ ಆಗಲಿದೆ.
ಭಾಗ್ಯ ಲಕ್ಷ್ಮೀ ಯೋಜನೆಯಡಿ ಎಲ್ಐಸಿ ಜೊತೆಗೆ ಒಪ್ಪಂದ ಮಾಡಿಕೊಂಡು, ಹೆಣ್ಣು ಮಗುವಿನ ಹೆಸರಿನಲ್ಲಿ 10,000 ಠೇವಣಿ ಮಾಡಿಸಿ, ಮಗುವಿಗೆ 18 ವರ್ಷ ತುಂಬಿದ ಸಂದರ್ಭ ಮೆಚೂರಿಟಿ ಹಣ ನೀಡುವುದಾಗಿ ಒಪ್ಪಂದ ಮಾಡಲಾಗಿದೆ. ಹೀಗಾಗಿ, 2008ರ ಜುಲೈ ಒಳಗೆ ಜನಿಸಿದ ಹೆಣ್ಣು ಮಗುವಿನ ಹೆಸರಿನಲ್ಲಿ 10 ಸಾವಿರ ರೂ.ಅನ್ನು ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಸರ್ಕಾರ ನಿಶ್ಚಿತ ಠೇವಣಿ ಇಟ್ಟಿದ್ದು, ಆ ಸಂಸ್ಥೆಯು ಬಡ್ಡಿ ಸಮೇತ 18 ವರ್ಷ ಪೂರ್ಣಗೊಂಡ ಮೊದಲನೇ ಮಗುವಿಗೆ ರೂ.34,751 ಹಾಗೂ 2ನೇ ಮಗುವಿಗೆ ರೂ.40,619 ಜಮಾ ಆಗಲಿದೆ. 2008ರ ಆಗಸ್ಟ್ ಬಳಿಕ ಹುಟ್ಟಿದ ಮಗುವಿನ ಠೇವಣಿ ಮೊತ್ತವನ್ನು ರೂ.19,300ಗೆ ಏರಿಕೆ ಮಾಡಲಾಗಿದೆ. ಈ ಮೂಲಕ ಮೊದಲ ಹೆಣ್ಣುಮಗುವಿಗೆ ರೂ.1,00,052 ಹಾಗೂ 2ನೇ ಮಗುವಿಗೆ ರೂ.18,350 ಠೇವಣಿಯಿಂದ ರೂ. 1,00,097 ಸಿಗಲಿದ್ದು, ಈ ಮೂಲಕ ಹೆಣ್ಣು ಮಕ್ಕಳ ಪೋಷಕರಿಗೆ ನೆರವಾಗಲಿದೆ.
ಇದನ್ನೂ ಓದಿ: ರೈತರೇ, ಇನ್ಮುಂದೆ ನಿಮ್ಮ ಕೃಷಿ ಜಮೀನುಗಳಿಗಿಲ್ಲ ಈ ಸೌಲಭ್ಯ – ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ !!