Home News APL-BPL ಕಾರ್ಡ್‌ ವಿತರಣೆ ಕುರಿತು ಸಚಿವರಿಂದ ಬಿಗ್‌ ಅಪ್ಡೇಟ್‌!!

APL-BPL ಕಾರ್ಡ್‌ ವಿತರಣೆ ಕುರಿತು ಸಚಿವರಿಂದ ಬಿಗ್‌ ಅಪ್ಡೇಟ್‌!!

APL - BPL Card

Hindu neighbor gifts plot of land

Hindu neighbour gifts land to Muslim journalist

APL – BPL Card: ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಬಿಪಿಎಲ್‌ ಕಾರ್ಡ್‌ (BPL Card Holder) ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL )ಕಾರ್ಡ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ರೇಷನ್ ಕಾರ್ಡ್ (Ration Card) ಮೂಲಕ ಬಿಪಿಎಲ್‌ ಕಾರ್ಡ್ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿಯಂತಹ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಈ ನಡುವೆ, ಸರ್ವರ್ ಸಮಸ್ಯೆ ಸೇರಿದಂತೆ ಹೊಸ ಪಡಿತರಕ್ಕಾಗಿ(APL – BPL Card) ಅರ್ಜಿ ಸಲ್ಲಿಸಿ ಕಾಯುತ್ತಿದ್ದ ರಾಜ್ಯದ ಲಕ್ಷಾಂತರ ಜನರಿಗೆ ಆಹಾರ ಸಚಿವ ಕೆ ಎಚ್ ಮುನಿಯಪ್ಪ ಸಿಹಿಸುದ್ದಿ ನೀಡಿದ್ದಾರೆ.

ಇಂದಿನಿಂದ ಹೊಸ ಪಡಿತರ ಕಾರ್ಡ್ ಅನುಮತಿ ನೀಡುವ ಪ್ರಕ್ರಿಯೆ ಕಾರ್ಯ ಶುರುವಾಗಿದ್ದು, ಬಾಕಿ ಇರುವ 2.95 ಲಕ್ಷ ಹೊಸ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವ ಕುರಿತು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ಮಾಹಿತಿ ನೀಡಿದ್ದಾರೆ. 10ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಣೆ ಮಾಡುವ ಭರವಸೆ ನೀಡಲಾಗಿದ್ದು, ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ. ಇನ್ನುಳಿದ ಹೆಚ್ಚುವರಿ ಐದು ಕೆಜಿ ಅಕ್ಕಿ ನೀಡಲು ಆಂಧ್ರಪ್ರದೇಶ, ಚತ್ತಿಸಗಡ ಮೊದಲಾದ ರಾಜ್ಯಗಳಿಂದ ಪಡೆಯಲು ಪ್ರಯತ್ನ ನಡೆಯುತ್ತಿದೆ. ನಕಲಿ ಪಡಿತರ ಚೀಟಿಗಳನ್ನು ಪರಿಶೀಲನೆ ನಡೆಸಿ ಅನರ್ಹಗೊಳಿಸಲಾಗುತ್ತದೆ. ಈ ಪ್ರಕ್ರಿಯೆ ಚಾಲ್ತಿಯಲಿದ್ದು, ರಾಜ್ಯದಲ್ಲಿರುವ 1.28 ಕೋಟಿ ಬಿಪಿಎಲ್ ಕುಟುಂಬಗಳಲ್ಲಿ 1.08 ಕೋಟಿ ಕುಟುಂಬಗಳಿಗೆ ಪ್ರಸ್ತುತ ಅಕ್ಕಿಯನ್ನು ಪೂರೈಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: ಮುಖದಲ್ಲಿ ಅನಗತ್ಯ ಕೂದಲಿನ ಕಿರಿಕಿರಿಯೇ? ಹಾಗಾದರೆ ಬ್ಯೂಟಿಫುಲ್ ಟಿಪ್ಸ್ ಅಳವಡಿಸಿ, ಮುಖ ಹೊಳೆಯುವಂತೆ ಮಾಡಿ!