Home News Pejavara shree : “ಭಾರ”ವಾದ ತುಲಾಭಾರ : ಕಳಚಿದ ಹಗ್ಗ ಪೇಜಾವರ ಶ್ರೀಗಳಿಗೆ ಗಾಯ...

Pejavara shree : “ಭಾರ”ವಾದ ತುಲಾಭಾರ : ಕಳಚಿದ ಹಗ್ಗ ಪೇಜಾವರ ಶ್ರೀಗಳಿಗೆ ಗಾಯ !

Pejavara shree

Hindu neighbor gifts plot of land

Hindu neighbour gifts land to Muslim journalist

Pejavara Shree: ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Shri Vishwaprasanna Tirtha Swamiji of Shri Pejawar Math) ಅವರು ದೆಹಲಿ ಪ್ರವಾಸದಲ್ಲಿದ್ದು, ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ ಅಚಾತುರ್ಯ ಘಟನೆಯೊಂದು ನಡೆದಿದೆ.

ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನಡೆದ ಪ್ರಸನ್ನಾಭಿನಂದನ ಕಾರ್ಯಕ್ರಮ ನಡೆದಿದ್ದು,ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ(thulabhara seva) ಮಾಡಲಾಗುತ್ತಿತ್ತು. ಈ ಸಂದರ್ಭ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದ ಪರಿಣಾಮ ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ, ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ಭಕ್ತರು ಸ್ವಾಮೀಜಿಯವರಿಗೆ ತುಲಾಭಾರ ನಡೆಸಲಾಗಿತ್ತು. ತುಲಾಭಾರ ಸೇವೆಯ ಸಂದರ್ಭ ಶ್ರೀಗಳ ತಕ್ಕಡಿಯ ಹಗ್ಗ ಕಳಚಿಬಿದ್ದಿದೆ. ಇದರಿಂದ ಸ್ವಾಮೀಜಿಯ ತಲೆಗೆ ತರಚಿದ ಗಾಯವಾಗಿದ್ದು, ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bigg Boss: ಬಿಗ್‌ಬಾಸ್‌ ಒಟಿಟಿ ವಿಜೇತ ಅರೆಸ್ಟ್‌; ಹಾವಿನ ವಿಷ ಬಳಕೆ ಆರೋಪ!!!