Mangaluru: ಪ್ರಿಯತಮೆ ಔಟಿಂಗ್ ಬಂದಿಲ್ಲ ಎಂದು ಪಿಜಿಗೆ ಕಲ್ಲೆಸೆದ ಪ್ರಿಯಕರ !!ಕಲ್ಲೇಟು ಹೊಡೆದ ಯುವಕಗೆ ಎರಡೇಟು ಬಿಗಿದ ಸ್ಥಳೀಯರು

Mangaluru news man who pelted stones at PG because his girlfriend not come for outing

Share the Article

Mangaluru: ಲವ್ವರ್‌ ಔಟಿಂಗ್‌ ಗೆ ಬರಲಿಲ್ಲವೆಂದು ಆಕೆ ಕೆಲಸ ಮಾಡುತ್ತಿದ್ದ ಕಟ್ಟಡಕ್ಕೆ ಯುವಕನೋರ್ವ ಕಲ್ಲು ಎಸೆದ ಘಟನೆಯೊಂದು ಸೆಂಟ್‌ ಆಗ್ನೇಸ್‌ ಕಾಲೇಜು ಮುಂಭಾಗದಲ್ಲಿ ನಡೆದಿದೆ(Mangaluru) .

ಈತನ ಈ ಕೆಲಸದಿಂದ ಕಟ್ಟಡದ ಗಾಜು ಪುಡಿಯಾಗಿದ್ದು, ಸಾರ್ವಜನಿಕರು ಯುವಕನಿಗೆ ಧರ್ಮದೇಟು ನೀಡಿದ್ದಾರೆನ್ನಲಾಗಿದೆ.

ವಿವೇಕ್‌ (18) ಎಂಬಾತನೇ ಈ ಕೃತ್ಯವೆಸಗಿದ ಆರೋಪಿ. ಈತ ಸುಳ್ಯ ನಿವಾಸಿ. ಈತ ಯುವತಿಯೊಂದಿಗೆ ಪ್ರೀತಿಯಲ್ಲಿದ್ದು, ನಿನ್ನೆ (ನ.2) ರ ಸಂಜೆ ಔಟಿಂಗ್‌ಗೆ ಬರುವಂತೆ ಕರೆ ಮಾಡಿದ್ದಾನೆ. ಆದರೆ ಯುವತಿ ಬರಲೊಪ್ಪದೆ ನಿರಾಕರಣೆ ಮಾಡಿದ್ದಾಳೆ. ಇದಕ್ಕೆ ಕೋಪಗೊಂಡ ಪ್ರಿಯಕರ ವಿವೇಕ್‌ ಆಕೆ ಕೆಲಸ ಮಾಡುತ್ತಿದ್ದ ಪಿಜಿಗೆ ಕಲ್ಲು ಎಸೆದಿದ್ದಾನೆ.

ಗಾಜು ಪುಡಿಪುಡಿಯಾಗಿದ್ದು, ಸಾರ್ವಜನಿಕರು ವಿವೇಕ್‌ನನ್ನು ಹಿಡಿದು ಥಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೈನುಗಾರಿಕೆ ಸಂಕಷ್ಟ : ಜಾನುವಾರು ಮೇವಿನ ದರದಲ್ಲಿ ಭಾರೀ ಏರಿಕೆ!

Leave A Reply