Home latest Father Rapes Minor girl: ಮಗಳ ಮೇಲೆ ತಂದೆಯಿಂದಲೇ 2 ವರ್ಷ ನಿರಂತರ ಅತ್ಯಾಚಾರ- ಮದುವೆ...

Father Rapes Minor girl: ಮಗಳ ಮೇಲೆ ತಂದೆಯಿಂದಲೇ 2 ವರ್ಷ ನಿರಂತರ ಅತ್ಯಾಚಾರ- ಮದುವೆ ಹೆಸರಲ್ಲಿ 3 ಲಕ್ಷಕ್ಕೆ ಮಾರೇ ಬಿಟ್ಟ !!

Father Rapes Minor girl

Hindu neighbor gifts plot of land

Hindu neighbour gifts land to Muslim journalist

Father Rapes Minor girl: ರಕ್ಷಕನಾಗಿ ಮಗಳನ್ನು ಕಾಯಬೇಕಿದ್ದ ತಂದೆ, ರಾಕ್ಷಸನಾಗಿ ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ (Father Rapes Minor girl)ಎಸಗಿದ ಘಟನೆ ಬೆಳಕಿಗೆ ಬಂದಿದೆ. ಹೌದು, ಹೆತ್ತ ತಂದೆಯೇ ಎರಡು ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಲ್ಲದೇ, ನಂತರ ಮದುವೆಯ ಹೆಸರಲ್ಲಿ 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿರುವ ಘಟನೆ ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ತರ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಲ್ಲದೇ ಮಗಳನ್ನು 2.5 ಲಕ್ಷ ರೂ.ಗೆ ಮಾರಾಟ ಮಾಡಿದ ಬಳಿಕ ಪತಿಯೂ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಆರಂಭಿಸಿದ್ದಾನೆ ಎಂಬ ಆಘಾತಕಾರಿ ವಿಷಯ ತಿಳಿದು ಬಂದಿದೆ. ಬಾಲಕಿ ಗರ್ಭಿಣಿಯಾದಾಗ ಪತಿ ಆಕೆಯನ್ನು ಬಿಟ್ಟು ಓಡಿ ಹೋಗಿದ್ದು, ತಂದೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಲಿಲ್ಲ. ಬಾಲಕಿ ಇದೀಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೋಗಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ.

ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಾಲಕಿಯು, ತನ್ನ ತಂದೆ ತನ್ನನ್ನು ಬಲವಂತವಾಗಿ ತನ್ನ ಬಳಿಯೇ ಇಟ್ಟುಕೊಂಡಿದ್ದ. ನಾನು 10 ನೇ ತರಗತಿಯಲ್ಲಿ ಓದುತ್ತಿದ್ದಾಗ, ತಂದೆ ನನಗೆ ಕೆಲವು ಔಷಧಿಯನ್ನು ನೀಡಲು ಪ್ರಾರಂಭಿಸಿದರು, ಇದರಿಂದಾಗಿ ನಾನು ಆಲಸ್ಯವನ್ನು ಅನುಭವಿಸಲು ಪ್ರಾರಂಭಿಸಿದೆ. ಈ ಸಮಯದಲ್ಲಿ ತಂದೆ ನನ್ನ ಮೇಲೆ ಅತ್ಯಾಚಾರ ಮಾಡಲು ಆರಂಭಿಸಿದ್ದರು.

ಇದರ ನಂತರ, ತಂದೆ 2022 ರ ಡಿಸೆಂಬರ್‌ನಲ್ಲಿ ನನ್ನನ್ನು ಗಾಜಿಪುರ ಜಿಲ್ಲೆಯ ನಿವಾಸಿಯೊಂದಿಗೆ ವಿವಾಹ ಮಾಡಿಸಿದರು. ನಂತರ ಪತಿ ಕೂಡ ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಲು ಆರಂಭಿಸಿದ್ದ. ನಾನು ಗರ್ಭಿಣಿಯಾದಾಗ, ಪತಿ ನನಗೆ ಗರ್ಭನಿರೋಧಕ ಮಾತ್ರೆಗಳನ್ನು ನೀಡಿದ್ದು, ಆದರೆ ಮಾತ್ರೆಗಳಿಂದ ನನಗೆ ಗರ್ಭಪಾತವಾಗಲಿಲ್ಲ. ಬಳಿಕ ಪತಿ ನನ್ನ ತಂದೆಗೆ ಕರೆ ಮಾಡಿ ಮದುವೆ ವೇಳೆ ನೀಡಿದ 2.5 ಲಕ್ಷ ರೂ. ವಾಪಾಸ್ ಕೇಳಿದ್ದಾನೆ. ಆದರೆ ತಂದೆ ನಿರಾಕರಿಸಿದಾಗ ನನ್ನನ್ನು ರಾಯ್‌ಪುರ ಮಾರುಕಟ್ಟೆಯಲ್ಲಿ ಬಿಟ್ಟು ಹೋಗಿದ್ದಾನೆ. ಹೇಗೋ ಅಪ್ಪನ ಮನೆ ತಲುಪಿದಾಗ ಅವನೂ ನನ್ನನ್ನು ತನ್ನ ಬಳಿ ಇಟ್ಟುಕೊಳ್ಳಲು ಒಪ್ಪಲಿಲ್ಲ ಎಂದಿದ್ದಾಳೆ.

ಬಾಲಕಿ ಇದೀಗ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗೆ ಪತ್ರ ಬರೆದು ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಪ್ರಕರಣವನ್ನು ಅರಿತು, ಕಾರ್ಯದರ್ಶಿ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಎಸ್‌ಒ ತರವಾನ್‌ ಅವರಿಗೆ ಸೂಚಿಸಿದ್ದಾರೆ.

ಸದ್ಯ ಸಂತ್ರಸ್ತೆ ದೂರಿನ ಮೇರೆಗೆ ಆಕೆಯ ತಂದೆ ಹಾಗೂ ಪತಿ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಇಬ್ಬರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನಗರ ಎಸ್ಪಿ ಶೈಲೇಂದ್ರ ಲಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಹೈನುಗಾರಿಕೆ ಸಂಕಷ್ಟ : ಜಾನುವಾರು ಮೇವಿನ ದರದಲ್ಲಿ ಭಾರೀ ಏರಿಕೆ!