Ayyappa Deeksha Attire: ಅಯ್ಯಪ್ಪನ ಮಾಲೆ ಧರಿಸಿದ ವಿದ್ಯಾರ್ಥಿ – ಕಾಲೇಜಿಗೆ ನೋ ಎಂಟ್ರಿ ಎಂದು ಪ್ರಿನ್ಸಿಪಾಲ್ !! ನಂತರ ಆದದ್ದು…. !!

Ayyappa swamy sparks row in West godavari Principle not allowed student to wearing Ayyappa Swamy dress

Ayyappa swamy dress sparks row : ಪಶ್ಚಿಮ ಗೋದಾವರಿ ಜಿಲ್ಲೆಯ ನರಸಾಪುರಂ ಮಂಡಲದ ಪೂರ್ವ ತಾಳ್ಳು ಗ್ರಾಮದಲ್ಲಿ ಈಶ್ವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿಯೊಬ್ಬ ಅಯ್ಯಪ್ಪ ಸ್ವಾಮಿ ಉಡುಪು (Ayyappa Swamy Dress) ಧರಿಸಿದ್ದರಿಂದ ಶಾಲಾ ಸಮವಸ್ತ್ರ ಹಾಕದೇ ಶಾಲೆಗೆ ಹೋಗಿದ್ದಾನೆ. ಸಮವಸ್ತ್ರವಿಲ್ಲದೆ ಅಯ್ಯಪ್ಪ ಉಡುಪು ಹಾಕಿಕೊಂಡು ಶಾಲೆಗೆ ಬಂದಿದ್ದರಿಂದ ಶಾಲಾ ಪ್ರಿನ್ಸಿಪಾಲರು ಕೋಪದಿಂದ ವಿದ್ಯಾರ್ಥಿಗೆ ಬೈದಿದ್ದು ಇದಲ್ಲದೆ, ಅನುಚಿತವಾಗಿ ಕಾಮೆಂಟ್‌ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ವಿದ್ಯಾರ್ಥಿ ತನ್ನ ಪೋಷಕರಿಗೆ ತಿಳಿಸಿದ್ದು, ಇದರಿಂದ ವಿದ್ಯಾರ್ಥಿಯ ಪೋಷಕರು ಕೋಪದಿಂದ ಕೆಂಡಾಮಂಡಲರಾಗಿದ್ದಾರೆ.(Ayyappa dress sparks row).

ಪೋಷಕರು ಶಾಲೆಗೆ ಆಗಮಿಸಿ ಸ್ವಾಮಿ ಮಾಲೆ ಧರಿಸಿದ್ದಕ್ಕಾಗಿ ತಮ್ಮ ಮಗನ ಮೇಲೆ ಅನುಚಿತ ಕಾಮೆಂಟ್‌ಗಳ ಮಾಡಿದ್ದಕ್ಕೆ ಮುಖ್ಯೋಪಾಧ್ಯಾಯರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಅಯ್ಯಪ್ಪ ಸ್ವಾಮಿ ಭಕ್ತರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿದ ಹಿನ್ನೆಲೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಆರ್‌ಎಸ್‌ಎಸ್ ಕಾರ್ಯಕರ್ತರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ವಿದ್ಯಾರ್ಥಿಗೆ ಅನುಚಿತ ಕಾಮೆಂಟ್ ಮಾಡಿದ ಶಾಲೆಯ ಪ್ರಾಂಶುಪಾಲರನ್ನು ತಕ್ಷಣವೇ ಬಂಧಿಸುವ ಜೊತೆಗೆ ಶಾಲೆಯ ಲೈಸೆನ್ಸ್ ರದ್ದುಗೊಳಿಸಬೇಕೆಂದು ಪೋಷಕರು ಒತ್ತಾಯ ಮಾಡಿದ್ದಾರೆ. ಈ ವಿಚಾರ ತಿಳಿದು ಪೊಲೀಸರು ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಕೊನೆಗೆ, ಪ್ರಾಂಶುಪಾಲರು ಎಲ್ಲಾ ಭಕ್ತರಲ್ಲಿ ಕ್ಷಮೆಯಾಚಿಸಿದ ಬಳಿಕ ಎಲ್ಲ ಭಕ್ತರು ಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ – ಈ ದಿನ ನಿಮ್ಮ ಖಾತೆ ಸೇರಲಿದೆ 18 ತಿಂಗಳ ಬಾಕಿ ‘ಡಿಎ’ !!

Leave A Reply

Your email address will not be published.