Workers wages increase: ಕಾರ್ಮಿಕರಿಗೆ ಹೊಸ ವರ್ಷಕ್ಕೆ ಸಿಗ್ತಿದೆ ಬಂಪರ್ ಗಿಫ್ಟ್ – ವೇತನದಲ್ಲಿ ಭರ್ಜರಿ ಏರಿಕೆ

Business news from New year onwards workers wages will be increased latest news

Workers wages increase: ಕಾರ್ಮಿಕರ ವೇತನದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಇದರಿಂದ ಕಾರ್ಮಿಕರು ಕೊಂಚ ನಿಟ್ಟುಸಿರು ಬಿಡುವಂತಾಗಬಹುದು. ಹೌದು, ಇತ್ತೀಚಿನ ವರದಿಯ ಪ್ರಕಾರ, 2024 ರಲ್ಲಿ ಭಾರತದಲ್ಲಿ ಉದ್ಯೋಗಿಗಳ ವೇತನವು ತೀವ್ರವಾಗಿ ಹೆಚ್ಚಾಗುವ ನಿರೀಕ್ಷೆಯಿದೆ.

ಇಡೀ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಹೊಸ ವರ್ಷದ ಅತಿ ಹೆಚ್ಚು ವೇತನವು ಭಾರತದಲ್ಲಿ ಸಂಭವಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿ ಪ್ರಕಾರ, ಭಾರತದಲ್ಲಿ ಉದ್ಯೋಗಿಗಳ ವೇತನವು 2024 ರಲ್ಲಿ ಶೇಕಡಾ 9.8ರಷ್ಟು ಹೆಚ್ಚಾಗುವ (Workers wages increase) ನಿರೀಕ್ಷೆಯಿದೆ. ಕಾರ್ಮಿಕರ ಕಠಿಣ ಪರಿಸ್ಥಿತಿಗಳು ಮತ್ತು ಹೆಚ್ಚಿನ ಆರ್ಥಿಕ ಬಿಕ್ಕಟ್ಟಿನಿಂದ ಕಂಪನಿಗಳು ಮುಂದಿನ ವರ್ಷ ತಮ್ಮ ವೇತನದ ಬಜೆಟ್ ಸುಮಾರು 10 ಪ್ರತಿಶತದಷ್ಟು ಹೆಚ್ಚಿಸಬಹುದು.

ಈ ಬದಲಾವಣೆಯಿಂದ ತಂತ್ರಜ್ಞಾನ, ಮಾಧ್ಯಮ, ಗೇಮಿಂಗ್, ಹಣಕಾಸು ಸೇವೆಗಳು ಮತ್ತು ಚಿಲ್ಲರೆ ಕ್ಷೇತ್ರದ ಉದ್ಯೋಗಿಗಳಿಗೆ ಹೆಚ್ಚಿನ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ವಲಯದ ಉದ್ಯೋಗಿಗಳ ವೇತನವು 2024 ರಲ್ಲಿ ಶೇಕಡಾ 10ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

ಇನ್ನು ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯದಲ್ಲಿ ಅಂದರೆ ಬಿಎಫ್‌ಎಸ್‌ಐ ವಲಯದಲ್ಲಿ ಈ ವರ್ಷ ವೇತನ ಬೆಳವಣಿಗೆ ಶೇಕಡಾ 9.8 ರಷ್ಟಿದೆ. ಚಿಲ್ಲರೆ ವಲಯದಲ್ಲಿ, ಸಂಬಳವು ಈ ವರ್ಷ ಶೇಕಡಾ 9.8ರಷ್ಟು ಹೆಚ್ಚಾಗಿದೆ. ಮುಂದಿನ ವರ್ಷ ಸರಾಸರಿ 10 ರಷ್ಟಿದೆ ಎಂದು ಅಂದಾಜಿಸಲಾಗಿದೆ. ಕ್ಯಾಪ್ಟಿವ್ಸ್ ವಲಯದಲ್ಲಿ ವೇತನವು ಮುಂದಿನ ವರ್ಷ 9.9% ಹೆಚ್ಚಾಗುವ ನಿರೀಕ್ಷೆಯಿದೆ, ಇದು ಈ ವರ್ಷ ಶೇಕಡಾ 9.8 ಕ್ಕೆ ಹೆಚ್ಚಳ.

2024 ರಲ್ಲಿ ಭಾರತದಲ್ಲಿ ನಿರೀಕ್ಷಿತ ವೇತನ ಬೆಳವಣಿಗೆಯು ಇಡೀ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಅತ್ಯಧಿಕವಾಗಿದೆ. 2024 ರಲ್ಲಿ, ಭಾರತವನ್ನು ಏಷ್ಯಾ- ಪೆಸಿಫಿಕ್ ಪ್ರದೇಶದ ಪ್ರಮುಖ ವಿಯೆಟ್ನಾಂ ಶೇಕಡಾ 8 ವೇತನ ಪಡೆಯಬಹುದು ಚೀನಾದಲ್ಲಿ ಶೇ.6, ಫಿಲಿಪೈನ್ಸ್‌ನಲ್ಲಿ ಶೇ 5.7 ಮತ್ತು ಥೈಲ್ಯಾಂಡ್‌ನಲ್ಲಿ ಶೇ.5ರಷ್ಟು ವೇತನ ಹೆಚ್ಚಳ ಆಗಲಿದೆ .

ಇದನ್ನೂ ಓದಿ: ಬಂಡೀಪುರದ ಆನೆಗೂ ಹೃದಯ ಸ್ತಂಭನ- ನಿಂತ ನಿಂತಲ್ಲೇ ಕುಸಿದು ಬಿದ್ದ ‘ಕರ್ಣ’

Leave A Reply

Your email address will not be published.