7th Pay Commission: ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ – ಈ ದಿನ ನಿಮ್ಮ ಖಾತೆ ಸೇರಲಿದೆ 18 ತಿಂಗಳ ಬಾಕಿ ‘ಡಿಎ’ !!

7th pay commission latest update Government employees get 18 months da money on this date

7th Pay Commission: ಕೇಂದ್ರ ಸರ್ಕಾರಿ(Central Government Employees)ನೌಕರರಿಗೆ ಭರ್ಜರಿ ಸಿಹಿ ಸುದ್ದಿ ಇಲ್ಲಿದೆ. ಮುಂದಿನ ವರ್ಷ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರ ಬೆಂಬಲವನ್ನು ಪಡೆಯಲು ಸರ್ಕಾರವು ಅವರ ಬಹುಕಾಲದ ಬೇಡಿಕೆಗಳಾದ (7th Pay Commission)ಡಿಎ ಅರಿಯಾರ್, (DA)ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಸಾಂಕ್ರಾಮಿಕ ರೋಗ ಕೊರೋನಾ ಮಹಾಮಾರಿ ಹರಡಿದ ಸಮಯದಲ್ಲಿ ತುಟ್ಟಿಭತ್ಯೆಯನ್ನು ನಿಲ್ಲಿಸಲಾಗಿತ್ತು. ಆ ಬಳಿಕ ಪರಿಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ತುಟ್ಟಿಭತ್ಯೆ(DA) ನೀಡುವುದನ್ನು ಆರಂಭಿಸಲಾಗಿದೆ. ಜನವರಿ ಒಂದರಿಂದ ಜೂನ್ 30 ರವರೆಗಿನ ಫ್ರೀಜ್ ಮಾಡಿದ ಡಿಎ ಬಾಕಿ ನೌಕರರ ಖಾತೆಗಳಿಗೆ ಜಮೆಯಾಗಿಲ್ಲ ಎನ್ನಲಾಗಿದೆ. ಇನ್ನೂ 18 ತಿಂಗಳ ತುಟ್ಟಿಭತ್ಯೆಯನ್ನು ಸರ್ಕಾರ ಪಾವತಿ ಮಾಡಬೇಕಾಗಿದೆ. ಹೀಗಾಗಿ, ನೌಕರರು ನಿರಂತರವಾಗಿ ಈ ಕುರಿತು ಮನವಿ ಸಲ್ಲಿಸುತ್ತಿದ್ದು, ಶೀಘ್ರವೇ ಇದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆಯಿದೆ.

ಕೆಲವು ಬಲ್ಲ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2 ಲಕ್ಷಕ್ಕೂ ಅಧಿಕ ಡಿಎ ಬಾಕಿಯನ್ನು ಪಡೆಯುವ ಸಂಭವವಿದೆ. ಈ ಕುರಿತು ಸರ್ಕಾರ ಇನ್ನೂ ಅಧಿಕೃತ ತೀರ್ಮಾನ ಕೈಗೊಂಡಿಲ್ಲ. ಆದಾಗ್ಯೂ, ಸರ್ಕಾರ ಶೀಘ್ರದಲ್ಲೇ ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಲಿದ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ ನೌಕರರ ಮೂಲ ವೇತನ ಗಣನೀಯವಾಗಿ ಏರಿಕೆಯಾಗಲಿದೆ. ಇದರಿಂದ ಮೂಲ ವೇತನದ ಹೆಚ್ಚಳಕ್ಕೂ ಕಾರಣವಾಗಲಿದೆ.

ಇದನ್ನೂ ಓದಿ: Online Food: ಆನ್ಲೈನ್ ಅಲ್ಲಿ ಮಿಲ್ಕ್ ಶೇಕ್ ಆರ್ಡರ್ ಮಾಡಿದ್ರೆ ಗ್ಲಾಸಿನಲ್ಲಿ ಬಂದದ್ದು ‘ಮೂತ್ರ’ !! ಯಾರದ್ದು ಗೊತ್ತಾ ?!

Leave A Reply

Your email address will not be published.