Financial Rules Chenges: ಪಿಂಚಣಿದಾರರ ಗಮನಕ್ಕೆ- ಜೀವನ ಪ್ರಮಾಣ ಪತ್ರ ಸಲ್ಲಿಕೆ ಸೇರಿ ಈ 4 ಕೆಲಸಕ್ಕೆ ನವೆಂಬರ್ ತಿಂಗಳೇ ಡೆಡ್ ಲೈನ್ !!

Financial Rules Chenges: ಹಣಕಾಸು ಕೆಲಸಗಳನ್ನು ಅಂತಿಮ ಗಡುವಿನೊಳಗೆ ಮುಗಿಸದಿದ್ರೆ ನಿಮ್ಮ ಜೇಬಿನ ಮೇಲೆ ಕತ್ತರಿ ಬೀಳೋದು ಗ್ಯಾರಂಟಿ. ಹೌದು, ನವೆಂಬರ್ ತಿಂಗಳು ಅನೇಕ ಪ್ರಮುಖ ಹಣಕಾಸಿನ (Financial Rules Chenges) ಕೆಲಸಗಳಿಗೆ ಅಂತಿಮ ಗಡುವಾಗಿದೆ. ಹೀಗಾಗಿ ಈ ಬಗ್ಗೆ ಮಾಹಿತಿ ತಿಳಿಯುವುದು ಅಗತ್ಯ.

ಜೀವನ್ ಪ್ರಮಾಣಪತ್ರ:
80 ವರ್ಷ ಮೇಲ್ಪಟ್ಟ ಪಿಂಚಣಿದಾರರು ಪಿಂಚಣಿ ಪಡೆಯಲು ಪ್ರತಿ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬೇಕು. ಈ ವರ್ಷ ಈ ಪ್ರಮಾಣ ಪತ್ರವನ್ನು ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಸೂಪರ್ ಸೀನಿಯರ್ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಅಕ್ಟೋಬರ್ 1ರಿಂದ ನವೆಂಬರ್ 30ರೊಳಗೆ ಸಲ್ಲಿಕೆ ಮಾಡಬೇಕು. ಇನ್ನು 60 ವರ್ಷ ಹಾಗೂ 80 ವರ್ಷ ನಡುವಿನ ಹಿರಿಯ ನಾಗರಿಕರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಲು ನವೆಂಬರ್ 1ರಿಂದ ನವೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದೆ.

ಐಡಿಬಿಐ ಬ್ಯಾಂಕ್ ವಿಶೇಷ ಎಫ್ ಡಿ: ಐಡಿಬಿಐ ಬ್ಯಾಂಕ್ ವಿಶೇಷ ಎಫ್ ಡಿ ಈ ವಿಶೇಷ ಎಫ್ ಡಿ ಯೋಜನೆಗೆ ಅಮೃತ್ ಮಹೋತ್ಸವ ಎಫ್ ಡಿ ಎಂದು ಹೆಸರಿಡಲಾಗಿದೆ. ಐಡಿಬಿಐ ಬ್ಯಾಂಕ್ ತನ್ನ ವಿಶೇಷ ಸ್ಥಿರ ಠೇವಣಿ ಯೋಜನೆಗಳ ವ್ಯಾಲಿಡಿಟಿ ದಿನಾಂಕವನ್ನು ವಿಸ್ತರಿಸಿದ್ದು, 2023ರ ನವೆಂಬರ್ 30ರ ತನಕ ಕಾಲಾವಕಾಶ ನೀಡಿವೆ. ಈ ಹಿಂದೆ 2023ರ ಅಕ್ಟೋಬರ್ 31ರ ತನಕ ಕಾಲಾವಕಾಶ ನೀಡಲಾಗಿತ್ತು. 444 ದಿನಗಳ ಈ ಎಫ್ ಡಿ ಯೋಜನೆಗೆ ಎನ್ ಆರ್ ಇ ಹಾಗೂ ಎನ್ ಆರ್ ಒ ಗ್ರಾಹಕರು ಶೇ.7.15ರಷ್ಟು ಬಡ್ಡಿದರ ಹೊಂದಿದ್ದರೆ, ಹಿರಿಯ ನಾಗರಿಕರಿಗೆ ಶೇ.7.65ರಷ್ಟು ಬಡ್ಡಿ ನೀಡಲಾಗುತ್ತಿದೆ. ಇನ್ನು 375 ದಿನಗಳ ಅವಧಿಯ ಎಫ್ ಡಿಗೆ ಹಿರಿಯ ನಾಗರಿಕರಿಗೆ ಶೇ.7.65ರಷ್ಟು ಬಡ್ಡಿ ನೀಡಲಾಗುತ್ತದೆ. ಇನ್ನು ಸಾಮಾನ್ಯ, ಎನ್ ಆರ್ ಇ ಹಾಗೂ ಎನ್ ಆರ್ ಒ ಗ್ರಾಹಕರಿಗೆ ಶೇ.7.10 ಬಡ್ಡಿ ನೀಡಲಾಗುತ್ತಿದೆ. ಈ ವಿಶೇಷ ಎಫ್ ಡಿ ಇತರ ಎಫ್ ಡಿಗಳಿಗಿಂತ ಹೆಚ್ಚಿನ ಬಡ್ಡಿದರ ಹೊಂದಿದೆ.

ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಎಫ್ ಡಿ:
ಪಂಜಾಬ್ ಹಾಗೂ ಸಿಂಧ್ ಬ್ಯಾಂಕ್ ಪಿಎಸ್ ಬಿ ಧನ್ ಲಕ್ಷ್ಮೀ ಹಾಗೂ ಪಿಎಸ್ ಬಿ ಸೇವಿಂಗ್ ಫ್ಲಸ್ ಎಂಬ ಹೊಸ ಸ್ಥಿರ ಠೇವಣಿ ಯೋಜನೆಗಳನ್ನು ಪರಿಚಯಿಸಿದೆ. ಈ ಎರಡೂ ಯೋಜನೆಗಳಲ್ಲಿ ಹೂಡಿಕೆ ಮಾಡಲು ನವೆಂಬರ್ 30ರ ತನಕ ಕಾಲಾವಕಾಶ ನೀಡಲಾಗಿದೆ. ಪಿಎಸ್ ಬಿ ಸೇವಿಂಗ್ ಫ್ಲಸ್ ಯೋಜನೆ 333 ದಿನಗಳ ಅವಧಿಗೆ ವಾರ್ಷಿಕ ಶೇ. 6.50ರಷ್ಟು ಬಡ್ಡಿದರ ನೀಡುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಕನಿಷ್ಠ 500ರೂ. ಠೇವಣಿಯಿಡೋದು ಅಗತ್ಯ. ಹಿರಿಯ ನಾಗರಿಕರು ಹಾಗೂ ಸೂಪರ್ ಸೀನಿಯರ್ ಸಿಟಿಜನ್ಸ್ ಗೆ ಕ್ರಮವಾಗಿ ಶೇ. 7 ಹಾಗೂ ಶೇ.7.15 ಬಡ್ಡಿದರ ನೀಡಲಾಗುತ್ತದೆ. ಪಿಎಸ್ ಬಿ ಧನ್ ಲಕ್ಷ್ಮೀ ಯೋಜನೆ 444 ದಿನಗಳ ಅವಧಿಗೆ ವಾರ್ಷಿಕ ಶೇ.7.40ರಷ್ಟು ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರು ಹಾಗೂ ಸೂಪರ್ ಸೀನಿಯರ್ ಸಿಟಿಜನ್ಸ್ ಇದೇ ಅವಧಿಗೆ ಕ್ರಮವಾಗಿ ಶೇ. 7.90 ಹಾಗೂ ಶೇ.8.05ರಷ್ಟು ಬಡ್ಡಿದರ ಪಡೆಯಬಹುದು.

ಎಚ್ ಡಿಎಫ್ ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ಸ್ ಕೇರ್ ಎಫ್ ಡಿ:
ಈ ವಿಶೇಷ ಎಫ್ ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ನವೆಂಬರ್ 7 ಅಂತಿಮ ಗಡುವಾಗಿದೆ. ಎಚ್ ಡಿಎಫ್ ಸಿ ಬ್ಯಾಂಕಿನ ಸೀನಿಯರ್ ಸಿಟಿಜನ್ಸ್ ಕೇರ್ ಎಫ್ ಡಿ ಯೋಜನೆ ಅಡಿಯಲ್ಲಿ ಹೂಡಿಕೆದಾರರು ಶೇ.0.25ರಷ್ಟು ಹೆಚ್ಚುವರಿ ಬಡ್ಡಿದರ ಪಡೆಯಲು ಅರ್ಹತೆ ಹೊಂದಿದ್ದಾರೆ. ಈ ಪ್ರೀಮಿಯಂ ಹಿರಿಯ ನಾಗರಿಕರಿಗೆ ಎಫ್ ಡಿಗಳ ಮೇಲೆ ಪಾವತಿಸುವ ಪ್ರೀಮಿಯಂಗಳಿಗಿಂತ ಶೇ.0.50ರಷ್ಟು ಹೆಚ್ಚುವರಿ ಪ್ರೀಮಿಯಂ ನೀಡಲಾಗುತ್ತದೆ.

ಈ ಮೇಲಿನ ಹಣಕಾಸು ಸಂಬಂಧಿ ಕೆಲಸಗಳ ಗಡುವಿನ ಬಗ್ಗೆ ತಿಳಿದುಕೊಂಡು ಶೀಘ್ರದಲ್ಲಿ ನಿಮ್ಮ ಕೆಲಸ ಮುಗಿಸಿಕೊಳ್ಳಿ.

 

ಇದನ್ನು ಓದಿ: Veerendra heggade: ಜನ ನ್ಯಾಯಾಲಯದ ಕಟಕಟೆಯಲ್ಲಿ ವೀರೆಂದ್ರ ಹೆಗ್ಗಡೆ: ಅಕ್ರಮಗಳಿಗೆ ಉತ್ತರಿಸುವಂತೆ ಒತ್ತಾಯ, ಬೃಹತ್ ಜನಾಂದೋಲನ ಉದ್ಘಾಟನೆಗೆ ಆಹ್ವಾನ !

Leave A Reply

Your email address will not be published.