Anganawadi Recruitment: ಮಹಿಳೆಯರೇ ನಿಮಗೊಂದು ಗುಡ್‌ನ್ಯೂಸ್‌! ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ!!!

Govt job news Good news for women Application Invitation for Anganwadi recruitment

Share the Article

Anganawadi Recruitment: ಶಿಶು ಅಭಿವೃದ್ಧಿ ಯೋಜನೆಯ ಹುಬ್ಬಳ್ಳಿ-ಧಾರವಾಡ (ಶಹರ) ವ್ಯಾಪ್ತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು(Anganawadi Recruitment) ಆಹ್ವಾನಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

113 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ಗೌರವ ಸೇವೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿಗಳ ಆದೇಶದಂತೆ ಆಫ್‌ಲೈನ್‌ ಮೂಲಕ ಆಹ್ವಾನಿಸಿರುವ ಅರ್ಜಿ ಪ್ರಕ್ರಿಯೆನ್ನು ರದ್ದು ಪಡಿಸಲಾಗಿದೆ. ಇದೀಗ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಅವರ ನಿರ್ದೇಶನದಂತೆ ಆಹ್ವಾನಿಸಲಾಗಿದೆ.

ಆಫ್‌ಲೈನ್‌ ಮೂಲಕ ಕರೆದಿರುವ ಹಿಂದಿನ ಪ್ರಕಟಣೆಯನ್ನು ರದ್ದುಪಡಿಸಲಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅತಿ ಶೀಘ್ರದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹುಬ್ಬಳ್ಳಿ-ಧಾರವಡ ಶಹರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: APL-BPL ಕಾರ್ಡ್‌ದಾರರಿಗೆ ರಾಜ್ಯಸರಕಾರದಿಂದ ಮತ್ತೊಂದು ಸಿಹಿ ಸುದ್ದಿ!!!

Leave A Reply