KKRTC Bus: ಮಹಾರಾಷ್ಟ್ರಕ್ಕೆ ತೆರಳೋ ಎಲ್ಲಾ ಬಸ್ ಬಂದ್ – KKRTC ಯಿಂದ ಮಹತ್ವದ ನಿರ್ಧಾರ !!

Karnataka news reservation struggle in Maharashtra KKRTC stopped bus service to Maharashtra

Share the Article

KKRTC Bus: ಪ್ರಯಾಣಿಕರೇ ಗಮನಿಸಿ, ಕೆಕೆಆರ್ಟಿಸಿ(KKRTC)ಮಹಾರಾಷ್ಟ್ರಕ್ಕೆ ತೆರಳುವ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೌದು!! ಮಹಾರಾಷ್ಟ್ರಕ್ಕೆ (Maharashtra) ಪ್ರಯಾಣ ಬೆಳೆಸುವ ಎಲ್ಲಾ ಬಸ್ ಸಂಚಾರವನ್ನು ರದ್ದುಗೊಳಿಸಿರುವ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC Bus)ಎಂಡಿ ಎಂ.ರಾಚಪ್ಪ ಆದೇಶ ಹೊರಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕಳೆದ ಎಂಟು ದಿನಗಳಿಂದ ಮರಾಠಾ ಸಮಾಜಕ್ಕೆ (Maratha Community) 2ಎ ಮೀಸಲಾತಿ (2A Reservation) ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ. ಮರಾಠಾ ಸಮಾಜ ಇದೇ ರೀತಿ ಸೋಮವಾರ ಕೂಡ ಪ್ರತಿಭಟನೆ ನಡೆಸಿದ್ದು, ರಾತ್ರಿ 8.30 ಸುಮಾರಿ ಗೆಬೀದರ್ ಜಿಲ್ಲೆಯ ಭಾಲ್ಕಿಯಿಂದ ಪುಣೆಗೆ ಹೊರಟಿದ್ದ ಕರ್ನಾಟಕದ ಸಾರಿಗೆ ಬಸ್ಗೆ (Karnataka’s Bus) ಬೆಂಕಿ ಹಚ್ಚಿದೆ. ಈ ಬಸ್ ನಲ್ಲಿ 39 ಜನರು ಪ್ರಯಾಣ ಬೆಳೆಸಿದ್ದರು ಎನ್ನಲಾಗಿದ್ದು, ಅದೃಷ್ಟವಶಾತ್ ಎಲ್ಲಾ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ, ಮುಂಜಾಗ್ರತ ಕ್ರಮವಾಗಿಮಹಾರಾಷ್ಟ್ರದಲ್ಲಿ ಸಂಚಾರ ಮಾಡುತ್ತಿರುವ ಬಸ್ ಗಳನ್ನ ಹತ್ತಿರದ ನಿಲ್ದಾಣದಲ್ಲಿ ಡಿಪೋ ದಲ್ಲಿ ಪಾರ್ಕ್ ಮಾಡುವಂತೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ ಮಹಾರಾಷ್ಟ್ರಕ್ಕೆ ತೆರಳುವ ಎಲ್ಲಾ ಬಸ್ ಸಂಚಾರವನ್ನು ರದ್ದುಗೊಳಿಸಿ ಎಂ.ರಾಚಪ್ಪ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ರೈತರೇ ಗಮನಿಸಿ- APMC ಕಾಯ್ದೆ ಕುರಿತು ರಾಜ್ಯ ಸರ್ಕಾರದಿಂದ ಬಂತು ಬಿಗ್ ಅಪ್ಡೇಟ್

Leave A Reply