Bengaluru: ಪ್ರತಿಷ್ಠಿತ ಮಾಲ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ವಿಡಿಯೋ ವೈರಲ್!‌

Bengaluru crime news man harassment to Young women in shopping mall video viral

Share the Article

Bengaluru: ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ( Sexual Harassment) ನೀಡಿರುವ ಘಟನೆಯೊಂದು ಬೆಂಗಳೂರಿನ (Bengaluru) ಪ್ರತಿಷ್ಠಿತ ಮಾಲ್‌ನಲ್ಲಿ ನಡೆದಿದೆ. ಅ.29 ರ ಸಂಜೆ ಆರೂವರೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು. ವೈರಲ್‌ ಆಗಿರುವ ವೀಡಿಯೋದಲ್ಲಿ ವಯಸ್ಸಾದ ವ್ಯಕ್ತಿಯೋರ್ವ ಬೇಕುಂತಲೇ ಯುವತಿಯ ಹಿಂಭಾಗ ಮುಟ್ಟುವ ಮೂಲಕ ಅಸಭ್ಯ ವರ್ತನೆ ಮಾಡಿದ್ದಾನೆ.

yesh_fitspiration ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದ್ದು, ಗದ್ದಲ ಇರುವ ಕಡೆ ವ್ಯಕ್ತಿ ಹೋಗಿದ್ದು, ಯುವತಿಯ ಹಿಂದೆ ಓಡಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿ ಆತನನ್ನು ಫಾಲೋ ಮಾಡಿದೆ. ನಂತರ ಇದನ್ನು ಸೆಕ್ಯೂರಿಟಿ ಗಾರ್ಡ್‌ ಮತ್ತು ಮಾಲ್‌ ಮ್ಯಾನೇಜ್‌ಮೆಂಟ್‌ ಗಮನಕ್ಕೆ ತರಲಾಗಿದೆ ಎಂದು ಬರೆದಿದ್ದು, ಸೆಕ್ಯುರಿಟಿ ಗಾರ್ಡ್‌ ಹುಡುಕಾಡಿದರೂ ಅಷ್ಟೊತ್ತಿಗೆ ಆ ವ್ಯಕ್ತಿ ಅಲ್ಲಿಂದ ನಾಪತ್ತೆಯಾಗಿದ್ದ ಎಂದು ಬರೆದಿದ್ದಾರೆ.

ವೀಡಿಯೋ ವೈರಲ್‌ ಆಗಿರುವ ಕಾರಣ ಮಾಗಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಲಿಖಿತ ದೂರು ಈ ಕೃತ್ಯದ ಬಗ್ಗೆ ಯಾರೂ ನೀಡಿಲ್ಲ. ವೀಡಿಯೋ ಆಧರಿಸಿ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: SSLC, Second Puc ವಾರ್ಷಿಕ ಪರೀಕ್ಷೆಯ ಸಂಭವನೀಯ ವೇಳಾಪಟ್ಟಿ ಬಿಡುಗಡೆ!

Leave A Reply