PMMY Loan: ಸ್ವಂತ ಉದ್ಯಮದ ಕನಸು ಕಾಣುತ್ತಿದ್ದೀರೆ ?! ಈ ಅರ್ಹತೆಗಳಿದ್ದರೆ ಮುದ್ರಾ ಯೋಜನೆಯಡಿ ಸಿಗುತ್ತೆ ಸಾಲ ಸೌಲಭ್ಯ

Loans are available under this Mudra scheme to those who want to start their own business

PMMY Loan: ತನ್ನದೇ ಸ್ವಂತ ಉದ್ಯಮ ಆರಂಭಿಸಲು ಬಯಸುವ ಯಾವುದೇ ಭಾರತೀಯ ಪ್ರಜೆ ಪಿಎಂಎಂವೈ(PMMY Loan) ಯೋಜನೆಯಡಿ ಸಾಲ ಪಡೆಯಬಹುದು. ಹೌದು, ನೀವು ವ್ಯವಹಾರವನ್ನು ವಿಸ್ತರಿಸಲು ಬಂಡವಾಳ ಅಗತ್ಯವಿದ್ದರೆ, ನೀವು ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 50 ಸಾವಿರದಿಂದ 10 ಲಕ್ಷ ರೂ.ವರೆಗೆ ಸಾಲವನ್ನು ನೀಡುತ್ತದೆ.

ಮುಖ್ಯವಾಗಿ ಸ್ವಂತ ಉದ್ಯಮದ ಕನಸು ಕಾಣುತ್ತಿರುವವರಿಗಾಗಿಯೇ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯನ್ನು ಜಾರಿಗೆ ತಂದಿದೆ. ಕಡಿಮೆ ಬಡ್ಡಿಯೊಂದಿಗೆ ಮತ್ತು ಅಪಾಯ ಮುಕ್ತ ಸಾಲವನ್ನು ನೀವು ಈ ಯೋಜನೆಯ ಮೂಲಕ ಪಡೆಯಬಹುದು. ಭಾರತೀಯ ನಾಗರಿಕನು ಪಿಎಂಎಂವೈ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳುವಾಗ ಯಾವುದೇ ಪ್ರಕ್ರಿಯೆ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಜತೆಗೆ ಯಾವುದೇ ರೀತಿಯ ಆಸ್ತಿಯನ್ನು ಅಡಮಾನ ಇಡಬೇಕಾಗಿಯೂ ಇಲ್ಲ.

ನೀವು ಎಷ್ಟು ಸಾಲ ತೆಗೆದುಕೊಳ್ಳಬಹುದು:
ಶಿಶುಸಾಲ: ಶಿಶು ಸಾಲದ ಅಡಿಯಲ್ಲಿ 50,000 ರೂಪಾಯಿವರೆಗೆ ಸಾಲ ನೀಡಲಾಗುತ್ತದೆ.

ಕಿಶೋರ್ ಸಾಲ: ಕಿಶೋರ್ ಸಾಲದ ಅಡಿಯಲ್ಲಿ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.

ತರುಣ್ ಸಾಲ: ತರುಣ್ ಸಾಲದ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.

ಮುದ್ರಾಲೋನ್‌ ಮರುಪಾವತಿ ಅವಧಿ:
ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಪಡೆದ ಸಾಲವನ್ನು 3 ವರ್ಷದಿಂದ 5 ವರ್ಷಗಳ ಒಳಗೆ ಅಂದರೆ 36 ತಿಂಗಳಿಂದ 60 ತಿಂಗಳ ಒಳಗೆ ಮರುಪಾವತಿ ಮಾಡಬೇಕು. ವೈಯಕ್ತಿಕ ಸಾಲಗಾರನ ಆರ್ಥಿಕ ಸ್ಥಿತಿ, ಸಾಲದ ಮೊತ್ತ ಇತ್ಯಾದಿಗಳನ್ನು ನೋಡಿದ ನಂತರ ಇದನ್ನು ನಿರ್ಧರಿಸಲಾಗುತ್ತದೆ.

ಮುದ್ರಾ ಯೋಜನೆಯಡಿ ಸಾಲ ಪಡೆಯಲು ಅರ್ಹತೆ:
24 ವರ್ಷದಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನೀವು ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಕೆವೈಸಿ ಪ್ರಮಾಣಪತ್ರ ಮತ್ತು ವೋಟರ್ ಐಡಿ ಮುಂತಾದ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ.

ಮುದ್ರಾ ಯೋಜನೆಯಡಿ ಸಾಲದ ಗ್ಯಾರಂಟಿಯನ್ನು ಮೈಕ್ರೋ ಯೂನಿಟ್‌ಗಳಿಗೆ ಕ್ರೆಡಿಟ್ ಗ್ಯಾರಂಟಿ ಅಡಿಯಲ್ಲಿ ನೀಡಲಾಗುತ್ತದೆ, ಇದನ್ನು ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟಿ ಕಂಪನಿ ಮೂಲಕ ನೀಡಲಾಗುತ್ತದೆ. ಗ್ಯಾರಂಟಿ ಕವರ್ 5 ವರ್ಷಗಳವರೆಗೆ ಲಭ್ಯವಿದೆ. ಆದ್ದರಿಂದ ಮುದ್ರಾ ಯೋಜನೆಯಡಿ ನೀಡಲಾದ ಸಾಲಗಳಿಗೆ ಗರಿಷ್ಠ ಅವಧಿ 60 ತಿಂಗಳುಗಳಾಗಿವೆ.

ಮುದ್ರಾ ಸಾಲ ಪಡೆಯಲು ಬೇಕಾದ ದಾಖಲೆಗಳು:
ಗುರುತಿನ ಪ್ರಮಾಣಪತ್ರ
ನಿವಾಸ ಪ್ರಮಾಣಪತ್ರ
ಪಾಸ್‌ಪೋರ್ಟ್‌ ಗಾತ್ರದ ಫೋಟೋ
ವ್ಯಾಪಾರ ಪ್ರಮಾಣಪತ್ರ
ವ್ಯಾಪಾರ ವಿಳಾಸ ಪುರಾವೆ
ಜಾತಿ ಪ್ರಮಾಣ ಪತ್ರ.

ಮುದ್ರಾಲೋನ್‌ಗೆ ಅರ್ಜಿ ಸಲ್ಲಿಸುವ ವಿಧಾನ:
https://www.mudra.org.in/ವೆಬ್‌ಸೈಟ್‌ನಿಂದ ಸಾಲದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿ.
ಶಿಶು ಸಾಲದ ಫಾರ್ಮ್ ಭಿನ್ನವಾಗಿದ್ದು, ತರುಣ್ ಮತ್ತು ಕಿಶೋರ್ ಸಾಲಕ್ಕೆ ಒಂದೇ ರೀತಿಯ ಫಾರ್ಮ್‌ ಇದೆ.
ಸಾಲದ ಅರ್ಜಿ ನಮೂನೆಯಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
ಸರಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿಗಳನ್ನು ಒದಗಿಸಿ.
ನಿಮ್ಮ ವ್ಯಾಪಾರವನ್ನು ಎಲ್ಲಿ ಪ್ರಾರಂಭಿಸಲು ನೀವು ಬಯಸುತ್ತೀರಿ ಎಂಬುದರ ಕುರಿತು ಮಾಹಿತಿಯನ್ನು ನೀಡಿ.
ಒಬಿಸಿ, ಎಸ್‌ಸಿ/ಎಸ್‌ಟಿ ವರ್ಗಗಳ ಅಡಿಯಲ್ಲಿ ಬರುವ ಅರ್ಜಿದಾರರು ತಮ್ಮ ಜಾತಿ ಪ್ರಮಾಣಪತ್ರದ ಪುರಾವೆಯನ್ನು ಒದಗಿಸಿ.
2 ಪಾಸ್‌ಪೋರ್ಟ್ ಫೋಟೋಗಳನ್ನು ನೀಡಿ.
ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ಗೆ ಹೋಗಿ ನೀಡಿ, ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ.
ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ನಿಮ್ಮಿಂದ ಉದ್ಯಮದ ಬಗ್ಗೆ ಮಾಹಿತಿಯನ್ನು ಪಡೆಯುತ್ತಾರೆ. ಅದರ ಆಧಾರದ ಮೇಲೆ ಮುದ್ರಾ ಯೋಜನೆಯಡಿ ಸಾಲಕ್ಕೆ ಅನುಮೋದನೆ ನೀಡುತ್ತಾರೆ.

 

ಇದನ್ನು ಓದಿ: Pedicure At Home: ‘ಪೆಡಿಕ್ಯೂರ್’ ಮಾಡಲು ಬ್ಯೂಟಿಪಾರ್ಲರ್ ಹೋಗುತ್ತೀರಾ?! ಇನ್ಮುಂದೆ ಮನೆಯಲ್ಲೇ ಕೂತು ಬಾಳೆಹಣ್ಣಿನ ಸಿಪ್ಪೆಯಿಂದ ಹೀಗ್ ಮಾಡಿ !!

Leave A Reply

Your email address will not be published.