KPSC ಸಿಟಿಐ ಹುದ್ದೆಗಳ ನೇಮಕ! ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ!!!

Government job news KPSC cti recruitment 2023 comerical tax inspector recruitment apply online

KPSC CTI Recruitment: ಕೆಪಿಎಸ್‌ಸಿ ನೇಮಕ ಪ್ರಕ್ರಿಯೆ ನಡೆಸುವ ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಂದು ಸುವರ್ಣ ಅವಕಾಶ ನಿಮಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಇರುವವರಿಗೆ ಅರ್ಜಿ ಸಲ್ಲಿಸಲು ಇನ್ನೂ ಕಾಲ ಮಿಂಚಿಲ್ಲ. ಮತ್ತೊಂದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಹೌದು, ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಗ್ರೂಪ್‌ ಸಿ ಹುದ್ದೆಗಳಾದ (KPSC CTI Recruitment)ವಾಣಿಜ್ಯ ತೆರಿಗೆ ಪರಿವೀಕ್ಷಕರ ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ಎರಡು ದಿನಗಳು ಬಾಕಿ ಇವೆ. ಈ ಹಿಂದೆ ಸೆಪ್ಟೆಂಬರ್ 30 ರವರೆಗೆ ಅರ್ಜಿಗೆ ಅವಕಾಶ ನೀಡಲಾಗಿತ್ತು. ನಂತರದಲ್ಲಿ ಆಡಳಿತಾತ್ಮಕ ಕಾರಣಗಳಿಂದ ಅರ್ಜಿ ದಿನಾಂಕವನ್ನು ವಿಸ್ತರಣೆ ಮಾಡಿ, ಕೆಳಗಿನ ದಿನಾಂಕಗಳವರೆಗೆ ಅರ್ಜಿಗೆ ಅವಕಾಶ ನೀಡಿತ್ತು. ಕೆಪಿಎಸ್‌ಸಿ ನೇಮಕ ಪ್ರಕ್ರಿಯೆ ನಡೆಸುವ ವಾಣಿಜ್ಯ ತೆರಿಗೆ ಇಲಾಖೆ ಹುದ್ದೆಗಳಲ್ಲಿ ಆಸಕ್ತಿ ಇರುವವರು, ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ: ಕರ್ನಾಟಕ ಲೋಕಸೇವಾ ಆಯೋಗ
ಉದ್ಯೋಗ ಇಲಾಖೆ: ವಾಣಿಜ್ಯ ತೆರಿಗೆ ಇಲಾಖೆ
ಹುದ್ದೆ ಹೆಸರು: ವಾಣಿಜ್ಯ ತೆರಿಗೆ ಪರಿವೀಕ್ಷಕರು (ಗ್ರೂಪ್‌ ಸಿ ಹುದ್ದೆಗಳು)
ಹುದ್ದೆಗಳ ಸಂಖ್ಯೆ: 230+15HK
ವೇತನ ಶ್ರೇಣಿ: ರೂ.33,450-62,600.
ಶೈಕ್ಷಣಿಕ ಅರ್ಹತೆಗಳು: ಅರ್ಥಶಾಸ್ತ್ರ / ಗಣಿತ ವಿಷಯ ಇರುವ ಪದವಿ ಅಥವಾ ಕಾಮರ್ಸ್‌ ಪದವಿ ಪಡೆದಿರಬೇಕು.
ವಯಸ್ಸಿನ ಅರ್ಹತೆಗಳು: ಕನಿಷ್ಠ 21 ವರ್ಷ ಆಗಿರಬೇಕು. ಸಾಮಾನ್ಯ ಕೆಟಗರಿಗೆ – 35 ವರ್ಷ, ಒಬಿಸಿಗೆ- 38 ವರ್ಷ, ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೆ ದಿನಾಂಕಗಳ ಮಾಹಿತಿ:
ವಾಣಿಜ್ಯ ತೆರಿಗೆ ಪರಿವೀಕ್ಷಕರು (ಉಳಿಕೆ ಮೂಲ ವೃಂದ) : 31-10-2023
ವಾಣಿಜ್ಯ ತೆರಿಗೆ ಪರಿವೀಕ್ಷಕರು (ಕಲ್ಯಾಣ ಕರ್ನಾಟಕ ವೃಂದ) : 30-10-2023

ವಾಣಿಜ್ಯ ತೆರಿಗೆ ಪರಿವೀಕ್ಷಕರು ಹುದ್ದೆಗೆ ಪರೀಕ್ಷಾ ದಿನಾಂಕಗಳು:
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ದಿನಾಂಕ : 04-11-2023
ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ : 05-11-2023

ಅರ್ಜಿ ಶುಲ್ಕ ವಿವರ:
ಜೆನೆರಲ್ ಕೆಟಗರಿ ಅಭ್ಯರ್ಥಿಗಳಿಗೆ ರೂ.600.
ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂ.300.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.50
ಎಸ್‌ಸಿ / ಎಸ್‌ಟಿ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.
ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ:
ಆಯೋಗದ ವೆಬ್‌ಸೈಟ್‌ www.kpsc.kar.nic.in ಗೆ ಭೇಟಿ ನೀಡಿ. ಮೊದಲ ಹಂತದಲ್ಲಿ ತಮ್ಮ ವಿವರ, ಶೈಕ್ಷಣಿಕ ಅರ್ಹತೆ ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ. ನಂತರ ಇಲಾಖೆ ಕೇಳಲಾದ ಇತರೆ ಮಾಹಿತಿಗಳನ್ನು ನೀಡಿ ಅಪ್ಲಿಕೇಶನ್‌ ಅನ್ನು ಸಬ್‌ಮಿಟ್‌ ಮಾಡಿ. ನಂತರ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.

ಇದನ್ನೂ ಓದಿ: ಮುಂದಿನ ತಿಂಗಳಿಂದ ಶಕ್ತಿ ಯೋಜನೆ ಸ್ಥಗಿತ ?! ಇಲ್ಲಿದೆ ನೋಡಿ ಶಾಕಿಂಗ್ ವಿಚಾರ

Leave A Reply

Your email address will not be published.