Home Karnataka State Politics Updates Tiger Nail: ಹುಲಿ ಉಗುರು ಪ್ರಕರಣ ಕುರಿತು ಸಿ ಟಿ ರವಿಯಿಂದ ಸ್ಪೋಟಕ ಹೇಳಿಕೆ- ಅದನ್ನು...

Tiger Nail: ಹುಲಿ ಉಗುರು ಪ್ರಕರಣ ಕುರಿತು ಸಿ ಟಿ ರವಿಯಿಂದ ಸ್ಪೋಟಕ ಹೇಳಿಕೆ- ಅದನ್ನು ಮರೆಮಾಚಲು ನಡೀತಿದ್ಯಾ ಈ ಪ್ಲಾನ್ ?!

Tiger Nail

Hindu neighbor gifts plot of land

Hindu neighbour gifts land to Muslim journalist

Tiger Nail : ರಾಜ್ಯದಲ್ಲಿ ಹುಲಿ ಉಗುರಿನ (Tiger Nail) ಲಾಕೆಟ್‌ವುಳ್ಳ ಸರ ಧರಿಸಿರುವವರ ವಿರುದ್ಧ ಅರಣ್ಯ ಇಲಾಖೆ (Forest department) ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ಇದರ ವಿರುದ್ಧ ಮಾಜಿ ಸಚಿವ ಸಿ.ಟಿ. ರವಿ (Former minister CT Ravi) ಹರಿಹಾಯ್ದಿದ್ದಾರೆ.ಜನರ ದಾರಿ ತಪ್ಪಿಸಲು ಹುಲಿ ಉಗುರಿನ( Tiger Nail)ನಾಟಕ ಮಾಡಲಾಗುತ್ತಿದ್ದು, ಬೋಗಸ್‌ ಭಾಗ್ಯ ಮರೆಮಾಚಲು ಮಾಡಿರುವ ಮಾಸ್ಟರ್ ಪ್ಲಾನ್ ಎಂದು ಸಿ.ಟಿ. ರವಿ ಕಾಂಗ್ರೆಸ್ ವಿರುದ್ದ ಆರೋಪ ಮಾಡಿದ್ದಾರೆ.

ಇತ್ತೀಚೆಗೆ ನಡೆದ ಐಟಿ ದಾಳಿ ಹಾಗೂ ಅಲ್ಲಿ ಪತ್ತೆಯಾದ ನೂರು ಕೋಟಿಗೂ ಅಧಿಕ ಅಕ್ರಮ ಹಣದ ಕುರಿತಾದ ಚರ್ಚೆಗೆ ಪೂರ್ಣ ವಿರಾಮ ಹಾಕಿ , ಜನರ ದಿಕ್ಕು ತಪ್ಪಿಸಿ,ಸಾರ್ವಜನಿಕರ ಆಕ್ರೋಶವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕಮಿಷನ್ ಕಲೆಕ್ಟರ್ (CM) ಮತ್ತು ಡೆಪ್ಯುಟಿ ಕಮಿಷನ್ ಕಲೆಕ್ಟರ್ (DCM) ಈಗ “ಹುಲಿ ಉಗುರು” ಎಂಬ ಹೊಸ ನಾಟಕವನ್ನು ಆರಂಭಿಸಿದೆ. ಇದೆಲ್ಲವೂ ಸರಕಾರದ ಷಡ್ಯಂತ್ರ ಎಂದು ಬಿಜೆಪಿಯ ಸಿ. ಟಿ. ರವಿ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದಾರೆ. ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಸಿ.ಟಿ. ರವಿ ಈ ಕುರಿತು ಬರೆದಿದ್ದು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ತಮ್ಮ ತಪ್ಪನ್ನು ಮರೆಮಾಚಲು ಕಾಂಗ್ರೆಸ್ ಹೀಗೆ ಮಾಡುತ್ತಿರುವುದಾಗಿ ಸಿ. ಟಿ ರವಿ ಹೇಳಿಕೊಂಡಿದ್ದಾರೆ.
ನಿಮ್ಮ ಮಂತ್ರಿಮಂಡಲದೊಳಗೆ ಒಮ್ಮೆ ಗಮನಿಸಿ, ಅಲ್ಲಿ ಬಹಳಷ್ಟು ಜನ ಕಾಡು ಪ್ರಾಣಿಗಳನ್ನು ಬಂಧನದಲ್ಲಿರಿಸಿದವರು, ಕಾಡುಪ್ರಾಣಿಗಳನ್ನು ಹತ್ಯೆ ಮಾಡಿದವರು ಸಿಕ್ಕೇ ಸಿಗುತ್ತಾರೆ. ಅಂತವರನ್ನು ಬಿಟ್ಟು ಹುಲಿಯುಗುರು ಧರಿಸಿದ್ದಾರೆ ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲು ಹೊರಟಿದ್ದೀರಾ!! ಅದರಲ್ಲೂ ಜನಸಾಮಾನ್ಯರಿಗೆ ನೇರ FSL ವರದಿ ಬರುವುದಕ್ಕೆ ಮೊದಲೇ ಬಂಧನ ಸೇರಿದಂತೆ ಸೆಲೆಬ್ರಿಟಿಗಳಿಗೆ ನೋಟಿಸ್ ನೀಡುವುದೆಲ್ಲವು ಈ ನಾಟಕದ ಭಾಗವಲ್ಲದೇ ಮತ್ತೇನು?? ಇದು ನಿಮ್ಮ ಸರ್ಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ?”‌ ಎಂದು ಸಿ.ಟಿ. ರವಿ ಕಾಂಗ್ರೆಸ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.